ಲೈಂಗಿಕ ಹಗರಣದ ಸುಳಿಯಲ್ಲಿ ಸ್ಟಾರ್ ನಟರು & ನಿರ್ದೇಶಕರು? ಧೂಳಿಪಟವಾಗಲಿದೆಯಾ ಕನ್ನಡ ಚಿತ್ರರಂಗ?
Sex scandal: ಮೀಟೂ ಅಭಿಯಾನದಿಂದ ಕನ್ನಡ ಚಿತ್ರರಂಗದ ಕೆಲವು ಸ್ಟಾರ್ ನಟರು, ನಿರ್ದೇಶಕರಲ್ಲಿ ನಡುಕವುಂಟಾಗಿದೆ. ಕೇರಳ ಚಿತ್ರರಂಗದಲ್ಲಿ ಈಗಾಗಲೇ ಘಾಟಾನುಘಟಿ ಸ್ಟಾರ್ ನಟರ ಹೆಸರು ಕೇಳಿ ಬಂದಿದೆ. ಸೂಪರ್ ಸ್ಟಾರ್ ನಟರಾದ ನವಿನ್ ಪೌಲಿ ಹಾಗೂ ಜಯಸೂರ್ಯ ಸೇರಿದಂತೆ ಹಲವರ ಮೇಲೆ ಕೇರಳದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲಿ ಹೇಮಾ ಕಮಿಟಿ ವರದಿ ಮಂಡನೆಯ ನಂತರ ಮೀಟೂ ಅಭಿಯಾನಕ್ಕೆ ಅಲ್ಲಿ ಬೆಲೆ ಬಂದಿದ್ದು, ಸ್ಟಾರ್ ನಟರನ್ನು ನಡುಗಿಸಿದೆ. ಇದೀಗ ಕನ್ನಡ ಚಿತ್ರರಂಗದ ಕರಾಳತೆಗಳೂ ಹೊರ ಬರುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಲಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲೂ ಕಳೆದ ಐದು ವರ್ಷಗಳ ಹಿಂದೆ ಮೀಟೂ ಅಭಿಯಾನ ಜೋರಾಗಿತ್ತು. ಮೀಟೂ ಅಭಿಯಾನದಲ್ಲಿ ಬಹುಭಾಷೆ ಹಾಗೂ ಸ್ಟಾರ್ ನಟ ಅರ್ಜುನ್ ಸರ್ಜಾ ಹೆಸರು ಕೇಳಿ ಬಂದಿತ್ತು. ಪ್ರಮುಖ ನಟಿ ಶೃತಿ ಹರಿಹರ್ ಅವರು ಈ ಆರೋಪ ಮಾಡಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಕನ್ನಡ ಚಿತ್ರರಂಗ ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿದೆ. ಕನ್ನಡ ಚಿತ್ರರಂಗದ ಕಾಂತಾರ, ಕೆಜಿಎಫ್ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿವೆ. ಈ ನಡುವೆ ಚಿತ್ರರಂಗದ ಒಳಗೆ ಹಾಗೂ ತಳ ಮಟ್ಟದಲ್ಲಿ ಏನಾಗುತ್ತಿದೆ ಎನ್ನುವ ವಿಷಯಗಳು ಹೊರಗೆ ಬರುತ್ತಿಲ್ಲ.

ಈಗ ಹಲವು ಪ್ರಮುಖ ನಟ, ನಟಿಯರು, ಕಲಾವಿದರು ಹಾಗೂ ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕೇರಳದಲ್ಲಿ ರಚನೆಯಾದ ಹೇಮಾ ಕಮಿಟಿ ಮಾದರಿಯಲ್ಲೇ ಕರ್ನಾಟಕದಲ್ಲೂ ಕಮಿಟಿಯೊಂದು ರಚನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಹಗರಣ ನಡೆಸಿಯೂ ಹಣ, ಅಧಿಕಾರ ಹಾಗೂ ರಾಜಕೀಯ ಬೆಂಬಲದಿಂದ ಮೆರೆಯುತ್ತಿರುವ ಸ್ಟಾರ್ ನಟರು & ನಿರ್ದೇಶಕರಲ್ಲಿ ಸಣ್ಣಗೆ ಬೆವರಿಳಿಸಿದೆ.
ಪಾತ್ರ ಬೇಕಾ ಪಲ್ಲಂಗಕ್ಕೆ ಬನ್ನಿ
ಮೀಟೂ ಅಭಿಯಾನಗಳು ಒಂದೊಂದೇ ಹೊರಗೆ ಬರುತ್ತಿದ್ದಂತೆಯೇ ಈಗ ಕನ್ನಡ ಚಿತ್ರರಂಗ ಸ್ಟಾರ್ ನಟರೂ ತಲೆಯ ಮೇಲೆ ಕಲ್ಲುಬಿದ್ದಂತೆ ಬುಸುಗುಡುತ್ತಿದ್ದಾರೆ. ಕನ್ನಡ ಚಿತ್ರರಂಗ ಸೇರಿ ದೇಶದಲ್ಲಿ ಚಿತ್ರರಂಗದಲ್ಲಿರುವ ಬಹುದೊಡ್ಡ ಆರೋಪವೆಂದರೆ ಅದು ಪಾತ್ರ ನೀಡಲು ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಪಲ್ಲಂಗಕ್ಕೆ (ಅವರೊಂದಿಗೆ ಮಲಗುವಂತೆ) ಕೇಳುತ್ತಾರೆ ಎನ್ನುವುದು. ಕನ್ನಡ ಚಿತ್ರರಂಗವೂ ಇದರಿಂದ ಹೊರತಾಗಿಲ್ಲ. ಕನ್ನಡದಲ್ಲಿ ತೆರೆಮರೆಯ ಹಿಂದೆ ಈ ರೀತಿ ಹಲವು ಕರಾಳ ಸತ್ಯಗಳು ಅಡಗಿವೆ.
ಇದೇ ಕಾರಣಕ್ಕೆ ಮೀಟೂ ರೀತಿಯ ಆರೋಪಗಳು, ಚರ್ಚೆಗಳು ಬಂದಾಗ ಒಂದು ಕನ್ನಡ ಚಿತ್ರರಂಗದ ಒಂದು ನಿರ್ದಿಷ್ಟ ವರ್ಗ ಹಾಗೂ ಸ್ಟಾರ್ ಗುಂಪು ಈ ಚರ್ಚೆಯಿಂದ ದೂರುವೇ ಉಳಿಯುತ್ತೆ. ಪ್ರಭಾವಿ ಹಾಗೂ ದೊಡ್ಡ ಹೆಸರು ಮಾಡಿರುವ ನಟರು ಸಹ ಮಾತನಾಡುವುದಿಲ್ಲ. ಇದರ್ಥ ಅವರು ಭಾಗಿಯಾಗಿದ್ದಾರೆ ಎಂದಲ್ಲ. ಒಂದು ನಮಗ್ಯಾಕೆ ಎನ್ನುವ ಮನೋಭಾವ ಇಲ್ಲವೇ, ಅವರ ಆಪ್ತರ ಬಗ್ಗೆ ಮಾತನಾಡಲಾಗದ ಉಭಯ ಸಂಕಟ. ಇದೇ ಕಾರಣಕ್ಕೆ ಕನ್ನಡ ಚಿತ್ರರಂಗದಲ್ಲಿ ಹೇಮಾ ಕಮಿಟಿ ಮಾದರಿಯ ಕಮಿಟಿ ರಚನೆಯ ಬಗ್ಗೆ ಗುಸುಗುಸು ಪ್ರಾರಂಭವಾಗಿದೆ.
ಕನ್ನಡ ಚಿತ್ರರಂಗಕ್ಕೆ ಮೀಟೂ ಹೊಸದಲ್ಲ!
ಇನ್ನು ಕನ್ನಡ ಚಿತ್ರರಂಗಕ್ಕೂ ಮೀಟೂಗೂ ಹೊಸದೇನು ಇಲ್ಲ. 2018ರಲ್ಲೇ ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದಲ್ಲಿ ಮೀಟೂ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮೀಟು ಅಭಿಯಾನದಲ್ಲಿ ಸ್ಟಾರ್ ನಟ ಹಾಗೂ ಬಹುಭಾಷೆಯಲ್ಲಿ ಗುರುತಿಸಿಕೊಂಡಿರುವ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ನಟಿ ಸಂಗೀತಾ ಭಟ್ ಅವರ ವಿರುದ್ಧ ನಡೆದಿದ್ದ ಲೈಂಗಿಕ ಶೋಷಣೆಯ ಬಗ್ಗೆ ನೋವು ತೋಡಿಕೊಂಡಿದ್ದರು.
ನಿರ್ದೇಶಕ ಈರೇಗೌಡ ಹಾಗೂ ಸಂಗೀತ ನಿರ್ದೇಶಕರ ವಿರುದ್ಧವೂ ಆರೋಪಗಳು ಕೇಳಿಬಂದಿತ್ತು. ಆಗ ಹುಟ್ಟಿಕೊಂಡಿದ್ದೇ ನಟ ಚೇತನ್ ಅವರ ಫೈರ್ ಎನ್ನುವ ಸಂಸ್ಥೆ. ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಈ ಸಂಸ್ಥೆ ಹುಟ್ಟಿಕೊಂಡಿತ್ತು. ಇದೀಗ ಅದೇ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇರಳದ ಹೇಮಾ ಕಮಿಟಿ ಮಾದರಿಯಲ್ಲಿ ಕರ್ನಾಟಕದಲ್ಲೂ ಕಮಿಟಿ ರಚನೆ ಮಾಡುವಂತೆ ಮನವಿ ಮಾಡಿದೆ. ಕಮಿಟಿ ರಚನೆಯಾದರೆ, ಹಲವು ಸ್ಟಾರ್ ನಟ, ನಿರ್ದೇಶಕರು ಜೈಲು ಸೇರುವುದು ಕಾಯಂ ಆಗಲಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications