Hubballi Train: ಹುಬ್ಬಳ್ಳಿಯಿಂದ ಇಲ್ಲಿಗೆ ಸಾಪ್ತಾಹಿಕ ರೈಲು ಸೇವೆ ವಿಸ್ತರಣೆ, ವೇಳಾಪಟ್ಟಿ
ಬೆಂಗಳೂರು, ಜೂನ್ 15: ಕಾರ್ಯಾಚರಣೆ ನಿರ್ಬಂಧ, ರಾಮನಾಥಪುರಂ ಸಂಚಾರ ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿಯು 07355/07356 ಸಂಖ್ಯೆಯ ಹುಬ್ಬಳ್ಳಿ-ರಾಮೇಶ್ವರಂ-ಹುಬ್ಬಳ್ಳಿ ಎಸ್ಎಸ್ಎಸ್ ನಿಲ್ದಾಣ ಮಧ್ಯ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ. ಈ ರೈಲು ಇನ್ನು ಮುಂದೆ ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣ ಕೊನೆಗೊಳಿಸುತ್ತದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ಈ ಹಿಂದೆ ರಾಮೇಶ್ವರಂನಲ್ಲಿ ಕೊನೆಗೊಳ್ಳುತ್ತಿದ್ದ ರೈಲು (07355) ಎಸ್‌ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ರಾಮನಾಥಪುರಂನಲ್ಲಿ ಕೊನೆಗೊಳ್ಳಲಿದೆ, ಈ ಪರಿಷ್ಕೃತ ಸೇವೆ ಜುಲೈ 5 ರಿಂದ 26, 2025 ರವರೆಗೆ ಜಾರಿಗೆ ಬರುವಂತೆ ವಿಸ್ತರಿಸಲಾಗಿದೆ. ಇದರೊಂದಿಗೆ ರೈಲು (07356) ರಾಮೇಶ್ವರಂ-ಹುಬ್ಬಳ್ಳಿ ಎಸ್ಎಸ್ಎಸ್ ನಿಲ್ದಾಣ ಸಾಪ್ತಾಹಿಕ ರೈಲು ಎಕ್ಸ್‌ಪ್ರೆಸ್ ರೈಲು ರಾಮೇಶ್ವರಂ ಬದಲಿಗೆ ರಾಮನಾಥಪುರದಿಂದ ಜುಲೈ 6 ರಿಂದ 27, 2025 ರವರೆಗೆ ತನ್ನ ಪ್ರಯಾಣ ಪ್ರಾರಂಭಿಸುತ್ತದೆ.

ರೈಲು ಸಂಚಾರ ಸಮಯ
ಈ ಹುಬ್ಬಳಿ ಎಸ್‌ಎಸ್‌ಎಸ್ ನಿಲ್ದಾಣದಿಂದ ರೈಲು (07355) ಬೆಳಗ್ಗೆ 06:50 ಸಂಚಾರ ಆರಂಭಿಸುತ್ತದೆ. ಮರುದಿನ ಬೆಳಗ್ಗೆ 05:00 ಗಂಟೆಗೆ ರಾಮನಾಥವುರಂ ತಲುಪುತ್ತದೆ. ಅಲ್ಲಿ ಮರಳಿ ಪ್ರಯಾಣವನ್ನು ರೈಲು (07356) ರಾತ್ರಿ 22: ಗಂಟೆಗೆ ಆರಂಬಿಸಿ, ಮರುದಿನ ಸಂಜೆ 19:40 ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು ನಿಲ್ದಾಣ ಬಂದು ತಲುಪಲಿದೆ. ಈ ರೈಲುಗಳು ತಮ್ಮ ಹಿಂದಿನ ಎಲ್ಲಾ ನಿಗದಿತ ನಿಲುಗಡೆ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲಿನ ಪರಿಷ್ಕೃತ ಮಾಹಿತಿ
ಈ ಹಿಂದಿನ ಸೂಚನೆ ಪ್ರಕಾರ ನೋಡುವುದಾದರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (07355) ಜೂನ್ 28ರವರೆಗೆ ಹಾಗೂ ರಾಮೇಶ್ವರಂ -ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ರೈಲು (07356) ಜೂನ್ 29ರವರೆಗೆ ಸಂಚರಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಈ ರೈಲು ನಿಗದಿತ ಸೂಚನೆಯಂತೆ ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ನೈಋತ್ಯ ರೈಲ್ವೆ ವಲಯ ತಿಳಿಸಿದೆ.












Click it and Unblock the Notifications