Karnataka SSLC Results 2026: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?
SSLC Results 2026: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನಡೆಸಿದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ (ಏಪ್ರಿಲ್ 23) ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹಾಗಾದ್ರೆ ಜಿಲ್ಲಾವಾರು ಫಲಿತಾಂಶವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ನಡೆಸಿದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ (ಏಪ್ರಿಲ್ 23) ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ. ಜಿಲ್ಲಾವಾರು ಫಲಿತಾಂಶಗಳ ವಿವರ ಕೆಳಗೆ ನೀಡಲಾಗಿದೆ.

ಜಿಲ್ಲಾವಾರು ಎಸ್‌ಎಸ್‌ಎಲ್‌ಸಿ ಫಲಿತಾಂಶ
* ಉಡುಪಿ - ಶೇಕಡ 98.18
* ದಕ್ಷಿಣ ಕನ್ನಡ - ಶೇಕಡ 98.4
* ಉತ್ತರ ಕನ್ನಡ - ಶೇಕಡ 98.09
* ಹಾಸನ - ಶೇಕಡ 97.51
* ಮಂಡ್ಯ - ಶೇಕಡ 97.45
* ಶಿರಸಿ - ಶೇಕಡ 97.21
* ಹಾವೇರಿ - ಶೇಕಡ 96.87
* ಕೊಡಗು - ಶೇಕಡ 96.68
* ಶಿವಮೊಗ್ಗ - ಶೇಕಡ 96.56
* ವಿಜಯನಗರ - ಶೇಕಡ 96.39
* ಬೆಂಗಳೂರು ಗ್ರಾಮಾಂತರ - ಶೇಕಡ 95.83
* ಧಾರವಾಡ - ಶೇಕಡ 95.59
* ಕೋಲಾರ - ಶೇಕಡ 95.5
* ಬಾಗಲಕೋಟೆ - ಶೇಕಡ 95.42
* ಬೆಂಗಳೂರು ಉತ್ತರ - ಶೇಕಡ 95.33
* ಗದಗ - ಶೇಕಡ 95.24
* ಚಿಕ್ಕಮಗಳೂರು - ಶೇಕಡ 94.99
* ಬೆಳಗಾವಿ - ಶೇಕಡ 94.75
* ದಾವಣಗೆರೆ - ಶೇಕಡ 94.64
* ಮೈಸೂರು - ಶೇಕಡ 94.45
* ರಾಯಚೂರು - ಶೇಕಡ 94.41
* ವಿಜಯಪುರ - ಶೇಕಡ 94.16
* ಚಿಕ್ಕೋಡಿ - ಶೇಕಡ 94.09
* ಬಳ್ಳಾರಿ - ಶೇಕಡ 93.35
* ಕೊಪ್ಪಳ - ಶೇಕಡ 93.1
* ರಾಮನಗರ - ಶೇಕಡ 92.83
* ಚಿತ್ರದುರ್ಗ - ಶೇಕಡ 92.25
* ಬೀದರ್ - ಶೇಕಡ 92.17
* ತುಮಕೂರು - ಶೇಕಡ 92.04
* ಯಾದಗಿರಿ - ಶೇಕಡ 91.89
* ಚಾಮರಾಜನಗರ - ಶೇಕಡ 91.89
* ಬೆಂಗಳೂರು ದಕ್ಷಿಣ - ಶೇಕಡ 91.64
* ಚಿಕ್ಕಬಳ್ಳಾಪುರ - ಶೇಕಡ 90.88
* ಮಧುಗಿರಿ - ಶೇಕಡ 90.24
* ಕಲಬುರಗಿ - ಶೇಕಡ 85.06
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆದಿವೆ. ದಕ್ಷಿಣ ಕನ್ನಡ ಜಿಲ್ಲೆಯು ಶೇಕಡಾ 98.4 ರಷ್ಟು ಫಲಿತಾಂಶದೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನ ಅಲಂಕರಿಸಿದ್ದರೆ, ಉಡುಪಿ (98.18%) ಮತ್ತು ಉತ್ತರ ಕನ್ನಡ (98.09%) ಜಿಲ್ಲೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. ಮಲೆನಾಡು ಮತ್ತು ಹಳೆಯ ಮೈಸೂರು ಭಾಗದ ಜಿಲ್ಲೆಗಳಾದ ಹಾಸನ ಹಾಗೂ ಮಂಡ್ಯ ಕೂಡ ಶೇಕಡಾ 97ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಅಗ್ರ ಐದು ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿವೆ.
ಮತ್ತೊಂದೆಡೆ ಫಲಿತಾಂಶದ ಪಟ್ಟಿಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳು ಕೂಡ ಉತ್ತಮ ಪೈಪೋಟಿ ನೀಡಿವೆ. ಹಾವೇರಿ, ವಿಜಯನಗರ ಮತ್ತು ಧಾರವಾಡ ಜಿಲ್ಲೆಗಳು ಶೇಕಡಾ 95ಕ್ಕೂ ಹೆಚ್ಚು ಸಾಧನೆ ತೋರಿದ್ದರೆ, ಕಲಬುರಗಿ ಜಿಲ್ಲೆಯು ಶೇಕಡಾ 85.06 ರಷ್ಟು ಫಲಿತಾಂಶದೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಿಸುವುದ್ಹೇಗೆ?
* ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.inಗೆ ಭೇಟಿ ನೀಡಿ.
* SSLC Examination Result 2026 ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
* ಬಳಿಕ 'Submit' ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿ ಫಲಿತಾಂಶ ಲಭ್ಯವಾಗಲಿದೆ.












Click it and Unblock the Notifications