SSLC ಫಲಿತಾಂಶ ಸೋರಿಕೆ: ಶಿಕ್ಷಣ ಸಚಿವರ ಘೋಷಣೆ ಮುಂಚೆಯೇ APPನಲ್ಲಿ ಲಭ್ಯ
ಬೆಂಗಳೂರು, ಮೇ. 19: 2021-22 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಶಿಕ್ಷಣ ಸಚಿವರ ಘೋಷಣೆ ಮೊದಲೇ ಮೊಬೈಲ್ ಆ್ಯಪ್‌ಗಳಲ್ಲಿ ಲಭ್ಯಾಗುತ್ತಿರುವುದು ಗೊಂದಲಕ್ಕೆ ಎಡೆಮಾಡಿದೆ.
ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಮೇ. 19 ರಂದು ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಹಿಂದೆ ಸ್ಪಷ್ಟಪಡಿಸಿದ್ದರು. ಅದರ ಪ್ರಕಾರ ಇಂದು ಮಧ್ಯಾಹ್ನ 12. 30 ರ ನಂತರ ಫಲಿತಾಂಶವನ್ನು ಘೋಷಣೆ ಮಾಡಿದ ಬಳಿಕ ಅಧಿಕೃತ ವೆಬ್ ತಾಣಗಳಲ್ಲಿ ಫಲಿತಾಂಶ ಪ್ರಕಟವಾಗಬೇಕಿತ್ತು.
ಇದೇ ವಿಚಾರವಾಗಿ ಗುರುವಾರ ಮಧ್ಯಾಹ್ನ 12.30 ಗಂಟೆಗೆ ಈ ಕುರಿತು ವಿವರ ನೀಡುವ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಸುದ್ದಿಗೋಷ್ಠಿ ನಡೆಸುವ ಮೊದಲೇ ಫಲಿತಾಂಶ ವೆಬ್ ತಾಣದಲ್ಲಿ ಪ್ರಕಟವಾಗಿದೆ.

ಎಸ್ಎಸ್ಎಲ್ ಸಿ ಫಲಿತಾಂಶವನ್ನು ಶಿಕ್ಷಣ ಸಚಿವರು ಪ್ರಕಟಿಸಿದ ಅರ್ಧ ತಾಸಿನ ಬಳಿಕ ವೆಬ್ ತಾಣದಲ್ಲಿ ಪ್ರಕಟ ಮಾಡಬೇಕಿತ್ತು. ಈ ಹಿಂದೆ ಎಸ್ಎಸ್ಎಲ್ ಸಿ ಫಲಿತಾಂಶ ಘೋಷಣೆ ಮುನ್ನ ಆ್ಯಪ್‌ಗಳಲ್ಲಿ ಅಥವಾ ಸುದ್ದಿ ಮಾಧ್ಯಮಗಳಲ್ಲಿ ಫಲಿತಾಂಶ ಪ್ರಕಟ ಮಾಡಿದ್ದಲ್ಲಿ, ಅವರಿಗೆ ಸಮನ್ಸ್ ಜಾರಿ ಮಾಡಿ ಶಿಷ್ಠಾಚಾರ ಉಲ್ಲಂಘನೆ ಮಾಡಿದ್ದೀರಾ ಎಂದು ಎಚ್ಚರಿಕೆ ನೀಡುತ್ತಿದ್ದರು. ಆದರೆ ಈ ಭಾರಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಫಲಿತಾಂಶ ಘೋಷಣೆ ಎರಡು ತಾಸು ಮೊದಲೇ ಪ್ರಕಟ ಮಾಡಿದೆ.
ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯೊಬ್ಬ ಖಾಸಗಿ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಆಗಿರುವುದು ಕಂಡು ಬಂದಿದೆ. ಫಲಿತಾಂಶ ಘೋಷಣೆ ಮೊದಲೇ ಫಲಿತಾಂಶವನ್ನು ಮಂಡಳಿಯೇ ಈ ರೀತಿ ಲಭ್ಯ ಆಗಿದ್ದು ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದೆ. ಅಧಿಕೃತವಾಗಿ ಫಲಿತಾಂಶ ಪ್ರಕಟ ಆದ ಬಳಿಕವೂ ಇದೇ ಫಲಿತಾಂಶ ಇರುತ್ತದೆಯೇ ಎಂಬ ಸಂದೇಹ ಮೂಡಿಸಿದೆ.












Click it and Unblock the Notifications