ಮೇ 7ಕ್ಕೆ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2018
ಬೆಂಗಳೂರು, ಏಪ್ರಿಲ್ 06: ಮುಂದಿನ ತಿಂಗಳು ಮೇ 7ಕ್ಕೆ ಇಂಟರ್‌ನೆಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು (ಏಪ್ರಿಲ್ 06) ಮುಕ್ತಾಯವಾದ ಕಾರಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ನಡೆದ ರೀತಿಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು.
ಮೇ 7ಕ್ಕೆ ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟವಾಗುತ್ತದೆ, ಮೇ8ಕ್ಕೆ ಶಾಲೆಗಳಲ್ಲಿ ಫಲಿತಾಂಶದ ಪ್ರಕಟಿಸಲಾಗುತ್ತದೆ ಹಾಗೂ ಅಂದೇ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಶ್ನೆ ಪತ್ರಿಕೆ ಕೀ ಉತ್ತರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.

ಮೇ 8 ರಿಂದ 10ರ ವರೆಗೂ ಕೀ ಉತ್ತರ, ಪ್ರಶ್ನೆ ಪತ್ರಿಕೆ, ಫಲಿತಾಂಶಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ ಎಂದು ಅವರು ಮಾಹಿತಿ ನಿಡಿದರು.
ಈ ಬಾರಿ ಪರೀಕ್ಷೆಯು ಶಿಸ್ತುಬದ್ಧವಾಗಿ ನಡೆದಿದ್ದು, ಮುಂದಿನ ಬಾರಿ ಮಂಡಳಿ ವತಿಯಿಂದಲೇ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳನ್ನು ನಡೆಸುವ ಉದ್ದೇಶ ಇದೆ ಎಂದರು.












Click it and Unblock the Notifications