SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೂ ಮುನ್ನ ಪೋಷಕರೇ ಏನು ಮಾಡಬೇಕು?
ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಮಕ್ಕಳು ಹಾಗೂ ಮಕ್ಕಳ ಪೋಷಕರು ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೇಗವಾಗಿ ಮೌಲ್ಯಮಾಪನ ಕಾರ್ಯ ಕೂಡ ನಡೆಯುತ್ತಿದ್ದು, ಆದಷ್ಟು ಬೇಗ ಎಸ್‌ಎಸ್‌ಎಲ್‌ಸಿ ರಿಸಲ್ಟ್ ನೀಡಲು ತಯಾರಿ ನಡೆಸುತ್ತಿದೆ ಶಿಕ್ಷಣ ಇಲಾಖೆ. ಹೀಗಿದ್ದಾಗ ತಮ್ಮ ತಮ್ಮ ಮಕ್ಕಳ ಭವಿಷ್ಯದ ಕುರಿತು ಪೋಷಕರು ಕೂಡ ಟೆನ್ಷನ್ ಮಾಡಿಕೊಂಡು ಕೂತಿದ್ದಾರೆ. ಹಾಗಾದರೆ, ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೂ ಮುನ್ನ ಪೋಷಕರೇ ಏನು ಮಾಡಬೇಕು? ಬನ್ನಿ ತಿಳಿಯೋಣ.
SSLC ಎಂಬುದು ಮಕ್ಕಳ ಬದುಕಿನ ಪ್ರಮುಖ ಘಟ್ಟವಾಗಿದೆ, ಎಸ್‌ಎಸ್‌ಎಲ್‌ಸಿ ಅಂದ್ರೆ 10ನೇ ತರಗತಿ ಮುಗಿಸಿದ ನಂತರ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಯಾಕೆ ಅಂದ್ರೆ SSLC ನಂತರ ವೃತ್ತಿಪರ ಶಿಕ್ಷಣ ಪಡೆಯುತ್ತಾರೆ. ಮುಂದೆ ಯಾವ ಉದ್ಯೋಗ ಮಾಡಬೇಕು? ಯಾವ ವೃತ್ತಿ ಮಾಡಲು ಯಾವ ಕೋರ್ಸ್ ಪಡೆಯಬೇಕು? ಎಂಬ ಚಿಂತೆ ತಲೆಯಲ್ಲಿ ಓಡುತ್ತಲೇ ಇರುತ್ತದೆ. ಹೀಗಿದ್ದಾಗ, ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೂ ಮುನ್ನ ಪೋಷಕರೇ ಏನು ಮಾಡಬೇಕು ಗೊತ್ತೆ?

PUC ಕೋರ್ಸ್‌ಗಳ ಬಗ್ಗೆ ಹುಡುಕಿ
ಸಾಮಾನ್ಯವಾಗಿ 10ನೇ ತರಗತಿ ನಂತರ ಬಹುತೇಕರು PUC ಸೇರುತ್ತಾರೆ, ಹೀಗಿದ್ದಾಗ PUC ಬಗ್ಗೆ ಪೋಷಕರು ಸಾಮಾನ್ಯ ಜ್ಞಾನ ಹೊಂದಿರಬೇಕು. ಇನ್ನು ಪಿಯುಸಿ ಶಿಕ್ಷಣ 2 ವರ್ಷ ನಡೆಯಲಿದೆ. ಪ್ರಥಮ & ದ್ವಿತೀಯ ಎಂದು 2 ಭಾಗವಾಗಿ ಪಿಯುಸಿ ಶಿಕ್ಷಣ ನಿರ್ಧಾರ ಮಾಡಲಾಗುತ್ತೆ. ದ್ವಿತೀಯ ಪಿಯುಸಿ ಹಂತದಲ್ಲಿ ಮತ್ತೆ ಬೋರ್ಡ್ ಎಕ್ಸಾಮ್ಸ್ ಆಯೋಜನೆ ಮಾಡುತ್ತಾರೆ, ಹಾಗಾದ್ರೆ ಮುಂದೆ ನೀವು ಪಿಯುಸಿ ಸೇರಬೇಕು ಎಂದುಕೊಂಡರೆ ಎಷ್ಟು ಆಯ್ಕೆ ಸಿಗಲಿದೆ? ಮತ್ತು ಯಾವುವು?
ವಿಜ್ಞಾನ ವಿಭಾಗದಲ್ಲಿ ಪಿಯುಸಿ
PUC ಕೋರ್ಸ್‌ಗಳ ಪೈಕಿ ವಿಜ್ಞಾನ ವಿಭಾಗವು ಸಾಕಷ್ಟು ಖ್ಯಾತಿ ಪಡೆದಿದೆ. 1ನೇ ಆಯ್ಕೆ ಆಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ ಅಂದರೆ ಪಿಸಿಎಂಬಿ (PCMB) ಎಂಬ ವಿಭಾಗ ಸಿಗಲಿದೆ. ಹೀಗೆ ವಿಜ್ಞಾನದಲ್ಲಿ 2ನೇ ಆಯ್ಕೆಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ ಸೇರಿ ಗಣಿತಶಾಸ್ತ್ರ & ಕಂಪ್ಯೂಟರ್ ಸೈನ್ಸ್ ಅಂದರೆ ಪಿಸಿಎಂಸಿ (PCMC) ಆಯ್ಕೆ ಸಿಗಬಹುದು. ಇದರ ಜೊತೆಗೆ ಎಲೆಕ್ಟ್ರಾನಿಕ್ಸ್ ಆಯ್ಕೆ ಕೂಡ ಮಾಡಿಕೊಳ್ಳಲು ಅವಕಾಶ ನಿಮಗೆ ಇರಲಿದೆ.
ಕಾಮರ್ಸ್ ಓದಲು ಆಯ್ಕೆಗಳು ಇಲ್ಲಿವೆ
ವಾಣಿಜ್ಯ ವಿಭಾಗ ಅಥವಾ ಕಾಮರ್ಸ್ ವಿಭಾಗದಲ್ಲಿ ಪಿಯುಸಿ ಕಲಿಯಲು ಸಾಕಷ್ಟು ಕೋರ್ಸ್ ಇದ್ದು, ಅರ್ಥಶಾಸ್ತ್ರ ಮತ್ತು ಅಕೌಂಟ್ಸ್ ವಿಷಯದಲ್ಲಿ ಆಸಕ್ತಿ ಹೊಂದಿದವರಿಗೆ ಇಲ್ಲಿ ಅವಕಾಶ ಸದಾ ಲಭ್ಯವಾಗಿರುತ್ತದೆ. ಸಿಇಬಿಎ (CEBA), ಸಿಎಸ್‌ಬಿಎ (CSBA), ಎಂಇಬಿಎ (MEBA) ಮತ್ತು ಎಂಎಸ್‌ಬಿಎ (MSBA) ಆಯ್ಕೆಗಳು ಇರುತ್ತವೆ. ಈ ಪೈಕಿ ಬ್ಯುಸಿನೆಸ್ ಸ್ಟಡೀಸ್ & ಅಕೌಂಟ್ಸ್‌ನ ಕಲಿಕೆ ಕಡ್ಡಾಯ.
ಆರ್ಟ್ಸ್ ಕೂಡ ಲಭ್ಯವಿರುತ್ತದೆ!
ವಿಜ್ಞಾನ & ಕಾಮರ್ಸ್ ರೀತಿಯೇ ಕಲಾ ವಿಭಾಗ ಅಥವಾ ಆರ್ಟ್ಸ್ ಕೂಡ ಲಭ್ಯವಿರುತ್ತದೆ. ಈ ವಿಭಾಗದಲ್ಲಿ ಓದಿದರೆ ಪತ್ರಿಕೋದ್ಯಮ, ಸೋಷಿಯಲ್ ವರ್ಕ್ ಹಾಗೂ ಸರ್ಕಾರಿ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುವ ಸಿವಿಲ್ ಸರ್ವಿಸ್ ಎಕ್ಸಾಮ್‌ಗೆ ಕೂಡ ಅವಕಾಶ ಲಭ್ಯ. ಕಲಾ ವಿಭಾಗ ಕೂಡ ಇತ್ತೀಚೆಗೆ ಸಾಕಷ್ಟು ಮಾನ್ಯತೆ ಪಡೆಯುತ್ತಿದೆ.
ಡಿಪ್ಲೊಮಾ & ಐಟಿಐ ಕೂಡ ಲಭ್ಯವಿದೆ!
10ನೇ ತರಗತಿ ಅಂದ್ರೆ ಎಸ್‌ಎಸ್‌ಎಲ್‌ಸಿ ಮುಗಿದ ನಂತರ ವಿದ್ಯಾರ್ಥಿಗಳು ಡಿಪ್ಲೊಮಾ & ಐಟಿಐ ಕೋರ್ಸ್ ಸೇರಲು ಕೂಡ ಅವಕಾಶ ಇದೆ. ವೃತ್ತಿಪರ ಕೋರ್ಸ್‌ಗೆ ಇದು ಕೂಡ ಸೇರುತ್ತದೆ & ಇದೇ ಕಾರಣಕ್ಕೆ ಡಿಪ್ಲೊಮಾ & ಐಟಿಐಗೆ ಕೂಡ ಡಿಮ್ಯಾಂಡ್ ಇದೆ. ಖಾಸಗಿ ಕಾಲೇಜು ಸೇರಿ ಸರ್ಕಾರಿ ಕಾಲೇಜುಗಳಲ್ಲಿ ಕೂಡ ಡಿಪ್ಲೊಮಾ & ಐಟಿಐ ಮಾಡಲು ಅವಕಾಶ ಇರುತ್ತದೆ. ಹೀಗೆ 10ನೇ ತರಗತಿ ಮುಗಿಸಿದ ಮಕ್ಕಳಿಗೆ ಹಲವು ಆಯ್ಕೆ ಇರುತ್ತವೆ. ಉತ್ತಮವಾಗಿ ಮಾರ್ಕ್ಸ್ ಪಡೆದರೆ ಸುಲಭವಾಗಿ ಸೀಟ್ ಸಿಗುತ್ತದೆ. ಮುಂದೆ ಬಿ.ಟೆಕ್ ಮಾಡಲು ಡಿಪ್ಲೊಮಾ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ.
ನಮ್ಮ ಕರ್ನಾಟಕ ರಾಜ್ಯವೇ ಬೆಸ್ಟ್!
ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನು ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಈಗ 2024 & 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಪ್ರಕಟ ಆಗಲಿದೆ ಹೀಗಾಗಿ, ಮೌಲ್ಯಮಾಪನ ಕೂಡ ವೇಗವಾಗಿ ನಡೆಯುತ್ತಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶವನ್ನು ಆದಷ್ಟು ಬೇಗ ನೀಡಲು ಸಿದ್ಧತೆ ನಡೆಸಿದೆ. ಅಲ್ಲದೆ ಈ ಕುರಿತು ಅಧಿಕೃತವಾಗಿ ನೋಟಿಫಿಕೇಷನ್ ಇನ್ನೇನು ಹೊರ ಬೀಳುವ ನಿರೀಕ್ಷೆ ಕೂಡ ಇದೆ.
ಜಗತ್ತಿನಾದ್ಯಂತ ಕರ್ನಾಟಕದ ಶಿಕ್ಷಣಕ್ಕೆ ಮನ್ನಣೆ
ಕರ್ನಾಟಕ ರಾಜ್ಯದ ಶಿಕ್ಷಣಕ್ಕೆ ಹೊರ ರಾಜ್ಯ ಮಾತ್ರವಲ್ಲ ಹೊರ ದೇಶದಲ್ಲೂ ಭಾರಿ ಬೆಂಬಲ ಇದೆ. ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುತ್ತಾರೆ. ಏಕೆಂದರೆ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಹಾಗೂ ಪರೀಕ್ಷಾ ಪದ್ಧತಿ ಅತ್ಯುತ್ತಮವಾಗಿದೆ. ಹಾಗೂ ಪರೀಕ್ಷೆಗಳು ಕೂಡ ತುಂಬಾ ಕಟ್ಟುನಿಟ್ಟಾಗಿ ನಡೆಯುತ್ತವೆ. ಇದರ ಜೊತೆಗೆ ಭವಿಷ್ಯದ ಶಿಕ್ಷಣಕ್ಕೆ ಬೇಕಿರುವ ಎಲ್ಲಾ ರೀತಿಯ ಸವಲತ್ತು ಹಾಗೂ ಜ್ಞಾನ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಇದೆ. ಬೇರೆ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ನಡೆಯುವುದಿಲ್ಲ ಎಂಬ ಆರೋಪ ಕೂಡ ಇದೆ.
ಒಟ್ನಲ್ಲಿ ಇನ್ನು ಕೆಲವೇ ದಿನಗಳಲ್ಲಿ 2024 & 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆಗಲಿದ್ದು, ಪೋಷಕರು ಇದಕ್ಕಾಗಿ ಈಗಲೇ ತಯಾರಿ ಆರಂಭ ಮಾಡಬೇಕು. ಅವರು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಕಾಲೇಜುಗಳನ್ನ ಆಯ್ಕೆ ಮಾಡಿಕೊಳ್ಳಲು ಈಗಲೇ ತಯಾರಿ ನಡೆಸಿದರೆ ಉತ್ತಮ ಎನ್ನುತ್ತಾರೆ ತಜ್ಞರು. ಹಾಗೂ ಬಹುತೇಕ ಕಾಲೇಜುಗಳು ಕೂಡ ಈಗಲೇ, ಪಿಯುಸಿ ಸೇರಿದಂತೆ ಇತರೆ ಕೋರ್ಸ್‌ಗಳ ದಾಖಲಾತಿಗೆ ಬೇಕಾದ ತಯಾರಿ ಆರಂಭ ಮಾಡಿವೆ. ಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶ ಕೂಡ ಮುಂದಿನ ತಿಂಗಳು ಅಂದರೆ ಮೇ ತಿಂಗಳಲ್ಲಿ ಹೊರ ಬೀಳಲಿದ್ದು, ಎಲ್ಲಾ ಕಡೆ ಈಗ ಪರೀಕ್ಷೆ ಫಲಿತಾಂಶದ ಸುದ್ದಿ ಓಡಾಡುತ್ತಿದೆ. ಕರ್ನಾಟಕದಲ್ಲಿ ಈ ಬಾರಿ ಕೂಡ ಲಕ್ಷಾಂತರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕಾಯುತ್ತಿದ್ದಾರೆ. ಹೀಗಾಗಿ ಶಿಕ್ಷಕರು ಕೂಡ ವಿದ್ಯಾರ್ಥಿಗಳ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ವೇಗವಾಗಿ ಮುಗಿಸುತ್ತಿದ್ದಾರೆ.












Click it and Unblock the Notifications