ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಟಾಪರ್ಸ್ ಲಿಸ್ಟ್‌ ಹೀಗಿದೆ

ಬೆಂಗಳೂರು, ಆಗಸ್ಟ್ 10: ಕರ್ನಾಟಕದ 2020ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ.

Recommended Video

      SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

      ಆರು ಮಂದಿ 625ಕ್ಕೆ 625 ಅಂಕವನ್ನು ಗಳಿಸಿದ್ದಾರೆ. ಕಳೆದ ವರ್ಷ ಇಬ್ಬರು ಮಾತ್ರ ಪೂರ್ಣ ಅಂಕವನ್ನು ಗಳಿಸಿದ್ದರು.ಶಿರಸಿಯ ಮಾರಿಕಾಂಬಾ ಶಾಲೆಯ ಸನ್ನಿಧಿ ಮಹಾಬಲೇಶ್ವರ ಹೆಗಡೆ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.

      ನಾಗಸಂದ್ರದ ಸೇಂಟ್ ಮೇರಿಸ್ ಹೈಸ್ಕೂಲಿನ ಚಿರಾಯು ಕೆಎಸ್ ಅವರು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಬೆಂಗಳೂರಿನ ಪೂರ್ಣ ಪ್ರಜ್ಞಾ ಎಜುಕೇಷನ್ ಸೆಂಟರ್‌ನ ನಿಖಿಲೇಶ್ ಎನ್ ಮರಳಿ, ಹುಬ್ಬಳ್ಳಿಯ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮೀಡಿಯಂ ಬಾಯ್ಸ್ ಹೈಸ್ಕೂಲ್ ಮಾರದೇವನಹಳ್ಳಿಯ ಧೀರಜ್ ರೆಡ್ಡಿ ಎಂಪಿ, ಸುಳ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲಿನ ಅನುಷ್ ಎಎಲ್, ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್‌ ಹೈಸ್ಕೂಲಿನ ತನ್ಮಯಿ ಐಪಿ ಪೂರ್ಣ ಅಂಕ ಗಳಿಸಿದ್ದಾರೆ.

      SSLC Result 2020 Karnataka Released Check Topper List

      ಉತ್ತರ ಕನ್ನಡದ ಸಿದ್ದಾಪುರದ ಪ್ರಶಾಂತಿ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲ್‌ನ ಅನಿರುಧ್ ಸುರೇಶ್ ಗುತ್ತೀಕಾರ್ ಹಾಗೂ ಬೆಂಗಳೂರು ರಾಜಾಜಿನಗರದ ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಹೈಸ್ಕೂಲ್ ನ ಅಮೋಘ್ ಜಿಕೆ 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.

      52,219 ಮೌಲ್ಯಮಾಪಕರು ಸುಮಾರು 8 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ್ದಾರೆ. ಜುಲೈ 14 ರಿಂದ ಮೌಲ್ಯಮಾಪನ ಆರಂಭವಾಗಿತ್ತು. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಲಾಕ್‌ಡೌನ್ ಇದ್ದ ಕಾರಣ ಎರಡು ದಿನ ತಡವಾಗಿ ಆರಂಭವಾಗಿತ್ತು.

      71.80 ಶೇಕಡಾವಾರು ಫಲಿತಾಂಶವಾಗಿದೆ. ಕಳೆದ ವರ್ಷ 73.70 ಫಲಿತಾಂಶವಾಗಿತ್ತು. 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 72.79 ಅಷ್ಟಿದೆ. ಅನುದಾನಿತ ಶಾಲೆಗಳು 70.60, ಶೇ. 82.31, 2,28,734 ಅನುತ್ತೀರ್ಣ ರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+