SSLC ಪರೀಕ್ಷಾ ಕೇಂದ್ರದಲ್ಲಿ ಹೊಸ ಐಡಿಯಾ ಪ್ರಯೋಗಿಸಲು ಮುಂದಾದ ಶಿಕ್ಷಣ ಇಲಾಖೆ
ಬೆಂಗಳೂರು, ಆಗಸ್ಟ್ 12: SSLC ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಏನೇ ಸರ್ಕಸ್ ಮಾಡಿದರೂ ಒಂದಲ್ಲ ಒಂದು ಕಡೆ ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಿರುವ ಘಟನೆ ಬೆಳಕಿಗೆ ಬಂದೇ ಬರುತ್ತೆ. ಇಂತಹ ಘಟನೆಗಳ ಕಡಿವಾಣ ಹಾಕಲು ನಾನಾ ಕಸರತ್ತು ನಡೆಸುವಲ್ಲಿ ಈಗ ಶಿಕ್ಷಣ ಇಲಾಖೆ ತೊಡಗಿ ಕೊಂಡಿದೆ. ಈ ಬಾರಿ ಹೇಗಾದಾರು ಮಾಡಿ ನಕಲು ಬ್ರೇಕ್ ಹಾಕಲೇಬೇಕು ಅಂತ ನಿರ್ಧಾರ ಮಾಡಿರುವ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಪರೀಕ್ಷಾ ಕೇಂದ್ರಗಳಿಗೆ ಕೊಕ್ ಹಾಕಲು ನಿರ್ಧಾರ ಕೈ ಗೊಂಡಿದೆ. ಈ ನಕಲು ತಡೆಗೆ ಈಗ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕೈಗೊಂಡಿರುವ ಮಹತ್ವದ ನಿರ್ಧಾರ ಬಗ್ಗೆಯೇ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಈ ಬಾರಿ ಗ್ರಾಮೀಣ ಪರೀಕ್ಷಾ ಕೇಂದ್ರಗಳ ಸಂಖ್ಯೆಗೆ ಕತ್ತರಿ ಹಾಕಿರುವ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಬಾರಿ ಪಟ್ಟಣ, ನಗರ ಕೇಂದ್ರಿತ SSLC ಪರೀಕ್ಷಾ ಕೇಂದ್ರ ಗಳಿಗೆ ಹೆಚ್ಚು ಒತ್ತು ಕೊಟ್ಟಿದೆ.

ಕಳೆದ ಬಾರಿ ಮೂರನೇ ಒಂದರಷ್ಟು ಭಾಗ ಗ್ರಾಮೀಣ ಪರೀಕ್ಷಾ ಕೇಂದ್ರವಿತ್ತು. ಆದರೆ, ಈ ಬಾರಿ ಕಂಪ್ಲೀಟ್ ಆಗಿ ಕೈ ಬಿಡಲಾಗಿದೆ. 10 ಕಿಮೀ ವ್ಯಾಪ್ತಿಯೊಳಗೆ 8/10 ಶಾಲೆ ಸೇರಿಸಿ ಕ್ಲಸ್ಟರ್ ಹಂತದಲ್ಲಿ ಪರೀಕ್ಷಾ ಕೇಂದ್ರ ರಚನೆ ಮಾಡಲು ನಿರ್ಧಾರ ಮಾಡಲಾಗಿದ್ದು , ಜಿಲ್ಲಾ ಉಪ ನಿರ್ದೇಶಕರು, ನೋಡಲ್ ಅಧಿಕಾರಿಗಳು , BEO ಗಳಿಗೆ ಪರೀಕ್ಷಾ ಕೇಂದ್ರ ಸಂಪೂರ್ಣ ಜವಾಬ್ದಾರಿ ಕೊಡಲಾಗಿದೆ.
ಇನ್ನೂ ಪ್ರತೀ ಪರೀಕ್ಷಾ ಕೇಂದ್ರದಲ್ಲಿ 400-800 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಹಾಗೇ ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಮಾತ್ರ ಕುಳಿತು ಕೊಳ್ಳಲು ವ್ಯವಸ್ಥೆ ಇರುವಂತೆ ನೋಡಿ ಕೊಳ್ಳಬೇಕು, ಜೊತೆಗೆ ಮೂಲಭೂತ ಸೌಕರ್ಯಗಳ ಹೊಂದಿರುವ ಕಡೆ ಪರೀಕ್ಷೆ ನಡೆಸಲು ಸೂಚನೆ ಕೊಡಲಾಗಿದೆ.
ಹಿಂದಿನ ವರ್ಷಗಳಲ್ಲಿನ ಸಾಮೂಹಿಕ ನಕಲು ಪ್ರಕರಣಗಳಿಗೆ ಪಾಲಕ ವರ್ಗದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರಿಂದ ಶಿಕ್ಷಣ ಇಲಾಖೆಗೆ ಕೂಡ ಸಾಕಷ್ಟು ಮುಜುಗರ ಉಂಟಾಗಿತ್ತು.
ನಕಲು ತಡೆಗಟ್ಟಲು ಆಗದೇ ಇಲಾಖೆಗೆ ಸಾಕಷ್ಟು ಮುಜುಗರ ಆಗಿದ್ದರಿಂದ ಈ ಬಾರಿ ಎಲ್ಲ ಹಂತದ ಅಧಿಕಾರಿಗಳು ಮತ್ತು ಶಿಕ್ಷಕರು ನಕಲು ತಡೆಗಟ್ಟಲು ಪ್ಲಾನ್ ಮೇಲೆ ಪ್ಲಾನ್ ಮಾಡಲಾಗುತ್ತಿದೆ.
ಹಾಗಾದರೆ, ಕಳೆದ ಬಾರಿಯ ಪರೀಕ್ಷಾ ಕೇಂದ್ರಗಳ ಸಂಖ್ಯೆ ಎಷ್ಟಿತ್ತು ಅಂತ ನೋಡೋದಾದರೆ ಕಳೆದ ವರ್ಷ 724-ಜಿಲ್ಲಾ, 755-ತಾಲೂಕು, 604 ಹೋಬಳಿ ಮತ್ತು 1,222-ಗ್ರಾಮೀಣ ಪ್ರದೇಶದ ಕೇಂದ್ರಗಳು ಹಾಗೆ ರಾಜ್ಯಾದ್ಯಂತ ಒಟ್ಟಾರೆ 3,305 ಕೇಂದ್ರಗಳಲ್ಲಿ SSLC ಮುಖ್ಯ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿ ಕೊಡಲಾಗಿತ್ತು.
ತೀರಾ ಅವಶ್ಯಕತೆ ಇದ್ದರೆ, ಬೆಟ್ಟಗುಡ್ಡ, ಅಣೆಕಟ್ಟು, ಅರಣ್ಯ, ನದಿ ತಪ್ಪಲಿನ ಪ್ರದೇಶ ಮತ್ತು ಇನ್ನಿತರ ನೈಸರ್ಗಿಕ ಕಾರಣಗಳಿದ್ದಲ್ಲಿ ಪರೀಕ್ಷಾ ಕೇಂದ್ರದ ರಚನೆಯ ನಿಯಮಗಳನ್ನು ಸಡಿಲಗೊಳಿಸುವಂತೆ ಇಲಾಖೆಯ ಕಡೆಯಿಂದ ಸೂಚನೆ ಕೊಡಲಾಗಿದೆ.
ಇನ್ನು ಪರೀಕ್ಷಾ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವುದು ಸಿಸಿಟಿವಿ ಅಳವಡಿಕೆ, ಎಲ್ಲಾ ಕ್ರಮಗಳನ್ನು ಜಾರಿಗೆ ಡಿಸಿ, ಸಿಇಒ, ಎಸ್‌ಪಿ ನೇತೃತ್ವದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಸಭೆ ನಡೆಸಬೇಕು ಎಂದು ಮಂಡಳಿ ಡೈರೆಕ್ಷನ್ ಕೊಟ್ಟಿದೆ. ಒಟ್ಟಿನಲ್ಲಿ ಈ ಬಾರಿ ಪರೀಕ್ಷೆ ನಕಲು ಪ್ರಕರಣ ದಾಖಲು ಆಗದ ರೀತಿ ಸಕಲ ರೀತಿಯಲ್ಲಿ ಶಿಕ್ಷಣ ಇಲಾಖೆ ಸಜ್ಜಾಗಿದೆ. (ಸಾಂದರ್ಭಿಕ ಚಿತ್ರ)
-
SSLC Exam: ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಿದ ನಂತರ ನಿಮ್ಮ ಮುಂದಿನ 3 ಗಂಟೆ ಹೇಗಿರಬೇಕು? ಇಲ್ಲಿದೆ ಮಾಹಿತಿ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
ಇಂದಿನಿಂದ SSLC ಪರೀಕ್ಷೆ: 8.66 ಲಕ್ಷ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಶುಭಹಾರೈಕೆ; ಆತಂಕಬೇಡ ಎಂದ ಸರ್ಕಾರ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಉನ್ನತ ಶಿಕ್ಷಣದಲ್ಲಿ 'ಕೇಂದ್ರೀಕರಣ'ದ ಆತಂಕ: ಉದ್ದೇಶಿತ VBSA ಮಸೂದೆ 2025ರ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ -
ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ: 1-8ನೇ ತರಗತಿಗೆ ಹೊಸ ಪಠ್ಯಪುಸ್ತಕ ಬಿಡುಗಡೆ ಮಾಡಿದ NCERT -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ












Click it and Unblock the Notifications