SSLC Exam Results 2026: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 'ಟಿವಿ–ಮೊಬೈಲ್ ಸ್ವಿಚ್ ಆಫ್' ಟಾಸ್ಕ್
SSLC Exam Results 2026: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಇದೀಗ ಹೊಸ ರೀತಿಯ ಟಾಸ್ಕ್ ಒಂದನ್ನು ಪರಿಚಯಿಸಿದೆ. ವಿದ್ಯಾರ್ಥಿಗಳ ಗಮನವನ್ನು ಓದಿನತ್ತ ಕೇಂದ್ರೀಕರಿಸಲು 'ಟಿವಿ ಮತ್ತು ಮೊಬೈಲ್ ಸ್ವಿಚ್ ಆಫ್' ಎಂಬ ಅಭಿಯಾನಕ್ಕೆ ಚಾಲನೆ ನೀಡಲು ಇಲಾಖೆ ಮುಂದಾಗಿದೆ.
ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆ, ಪ್ರತಿದಿನ ಸಂಜೆ 7ರಿಂದ 9 ಗಂಟೆಯವರೆಗೆ ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳು ಮೊಬೈಲ್ ಫೋನ್ ಹಾಗೂ ಟಿವಿಯನ್ನು ಬಳಸದಂತೆ ಇರಬೇಕೆಂದು ಸೂಚಿಸಲಾಗಿದೆ. ಮೊಬೈಲ್ ಗೀಳು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಡ್ಡಿ ಆಗುತ್ತಿರುವುದರಿಂದ, ಈ ಸಮಯವನ್ನು ಓದಿಗೆ ಮೀಸಲಿಡುವಂತೆ ಇಲಾಖೆ ಸಲಹೆ ನೀಡಿದೆ.

ಫಲಿತಾಂಶ ಸುಧಾರಣೆಗೆ ಹೊಸ ಅಭಿಯಾನ: ಈ ಅಭಿಯಾನ ಯಶಸ್ವಿ ಆಗಲು ಪೋಷಕರ ಸಹಕಾರವೂ ಅಗತ್ಯ ಆಗಿದ್ದು, ಪಿಡಿಓಗಳ ಮಟ್ಟದಲ್ಲಿಯೇ ಪೋಷಕರಿಗೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಮುಖ್ಯಶಿಕ್ಷಕರು ಸಹ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಅಗತ್ಯ ಇದ್ದರೆ ಡಂಗೂರ ಸಾರುವ ಮೂಲಕವೂ ಜಾಗೃತಿ ಮೂಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಓದಿನ ಮೇಲೆ ಹೆಚ್ಚು ಗಮನ ಕೇಂದ್ರೀಕೃತವಾಗಲಿದೆ ಎಂಬ ನಿರೀಕ್ಷೆ ಶಿಕ್ಷಣ ಇಲಾಖೆಯದ್ದಾಗಿದೆ.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸುವುದು, ಓದಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದು ಹಾಗೂ ಪರೀಕ್ಷಾ ಭಯವನ್ನು ಕಡಿಮೆ ಮಾಡುವುದು ಈ ಕ್ರಮಗಳ ಪ್ರಮುಖ ಗುರಿಯಾಗಿದೆ.
ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆ ಶಾಲೆಗಳಲ್ಲಿ ಹೆಚ್ಚುವರಿ ತರಗತಿಗಳು, ಪುನರಾವರ್ತನಾ ಪಾಠಗಳು ಹಾಗೂ ಮಾದರಿ ಪರೀಕ್ಷೆಗಳ ಆಯೋಜನೆಗೆ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಷ್ಟಕರ ವಿಷಯಗಳನ್ನು ಗುರುತಿಸಿ ಸುಧಾರಿಸಿಕೊಳ್ಳಲು ಶಿಕ್ಷಕರು ವೈಯಕ್ತಿಕವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಹಾಗೆಯೇ ಇದೀಗ ಶಿಕ್ಷಣ ಇಲಾಖೆ 'ಟಿವಿ ಮತ್ತು ಮೊಬೈಲ್ ಸ್ವಿಚ್ ಆಫ್' ಎಂಬ ಅಭಿಯಾನವನ್ನೂ ಆರಂಭಿಸಿದೆ. ಪ್ರತಿದಿನ ಸಂಜೆ 7ರಿಂದ 9 ಗಂಟೆಯವರೆಗೆ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿ ಬಳಕೆಯನ್ನು ತಪ್ಪಿಸಿ ಓದಿಗೆ ಸಮಯ ಮೀಸಲಿಡುವಂತೆ ಸೂಚನೆ ನೀಡಲಾಗಿದೆ. ಇದರಿಂದ ಮೊಬೈಲ್ ಗೀಳು ಕಡಿಮೆಯಾಗುತ್ತದೆ ಮತ್ತು ಓದಿನ ಮೇಲೆ ಗಮನ ಹೆಚ್ಚುತ್ತದೆ ಎಂಬ ನಿರೀಕ್ಷೆಯಿದೆ.
ಪೋಷಕರ ಪಾತ್ರವೂ ಮಹತ್ವವಾಗಿರುವುದರಿಂದ, ಅವರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಮಕ್ಕಳ ಓದಿನ ಬಗ್ಗೆ ಗಮನ ವಹಿಸುವಂತೆ ಹಾಗೂ ಮನೆಮಟ್ಟದಲ್ಲಿಯೇ ಸಹಕಾರ ನೀಡುವಂತೆ ಇಲಾಖೆ ಮನವಿ ಮಾಡಿದೆ. ಈ ಎಲ್ಲಾ ಕ್ರಮಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.












Click it and Unblock the Notifications