Get Updates
Get notified of breaking news, exclusive insights, and must-see stories!

ಪರೀಕ್ಷೆಗೆ ತೆರಳುವ ಮುನ್ನ ಈ 10 ಅಂಶಗಳನ್ನು ಮರೆಯಲೇಬೇಡಿ

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಬರೆಯಲು 10 ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಮರೆಯದೆ ಪಾಲಿಸಿ.

ಬೆಂಗಳೂರು, ಮಾರ್ಚ್ 29: ಸಂಭ್ರಮದ ಯುಗಾದಿ ಕಳೆದು ಗುರುವಾರದಿಂದ ಮಹತ್ವದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗುತ್ತಿದೆ.

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುವುದು ಹಾಗೂ ಪೋಷಕರು ಗಲಿಬಿಲಿಗೆ ಗುರಿಯಾಗುವುದು ಸಾಮಾನ್ಯ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಬರೆಯಲು 10 ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಮರೆಯದೆ ಪಾಲಿಸಿ.[ನಾಳೆಯಿಂದ 8.77 ಲಕ್ಷ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ]

SSLC: 10 tips to remember before entering exam

* ಹಾಲ್ ಟಿಕೆಟ್, ಕಾಲೇಜ್ ಐಡಿ ಕಾರ್ಡ್ ಯಾವುದೇ ಕಾರಣಕ್ಕೂ ಮರೆಯಬೇಡಿ. ಪರೀಕ್ಷೆಗೆ ಬೇಕಾದ ಪೆನ್ಸಿಲ್, ರಬ್ಬರ್, 2-3 ಪೆನ್ ಹಾಗೂ ಇತರ ಸಲಕರಣೆಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಿ. ಸಾಧ್ಯವಾದರೆ ಹಿಂದಿನ ದಿನವೇ ಬ್ಯಾಗಿನಲ್ಲಿ ಇದನ್ನೆಲ್ಲಾ ಹಾಕಿ ಸಿದ್ದಪಡಿಸಿಟ್ಟುಕೊಳ್ಳಿ.

* ನಿಮ್ಮ ರಿಜಿಸ್ಟರ್ ನಂಬರ್ ಬರೆದ ಜಾಗದಲ್ಲೇ ಕುಳಿತುಕೊಳ್ಳಿ. ಪರೀಕ್ಷೆ ಹಾಲಿಗೆ ಕನಿಷ್ಟ ಅರ್ಧ ಗಂಟೆ ಮೊದಲು ತಲುಪಿ. ತಡವಾದರೂ ಚಿಂತೆ ಬೇಡ. ನಿಯಮಗಳ ಪ್ರಕಾರ 9.45ರವರೆಗೆ ಪರೀಕ್ಷಾ ಕೊಠಡಿಗೆ ಪ್ರವೇಶ ಪಡೆಯಲು ನಿಮಗೆ ಅವಕಾಶವಿದೆ.

* ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಗೊತ್ತಿಲ್ಲದ ಪ್ರಶ್ನೆಗಳಿಗೆ ಸಮಯ ಉಳಿದರೆ ಕೊನೆಯಲ್ಲಿ ಉತ್ತರಿಸುವ ಪ್ರಯತ್ನ ಮಾಡಿ

* ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳನ್ನು ವಿವರವಾಗಿ ಓದಿ ಅರ್ಥೈಸಿಕೊಳ್ಳಿ. ಪ್ರಶ್ನೆ ಪತ್ರಿಕೆಯಲ್ಲಿರುವ ಸೂಚನೆಗಳನ್ನು ಸರಿಯಾಗಿ ಓದಿ ಪಾಲಿಸಿ.

* ಉತ್ತರ ಪತ್ರಿಕೆಯ ಮೇಲೆ ನಿಮ್ಮ ಹಾಲ್ ಟಿಕೆಟ್ ನಂಬರನ್ನು ಸರಿಯಾಗಿ ನಮೂದಿಸಿ. ಈ ಬಾರಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಬೇರೆ ಬೇರೆಯಾಗಿರುವುದರಿಂದ ಪ್ರಶ್ನೆಗಳ ಸಂಖ್ಯೆಯನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ನಮೂದಿಸಿ.[ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ]

* ಪರೀಕ್ಷೆಯ ಹಿಂದಿನ ದಿನ ರಾತ್ರಿ ಇಡೀ ಓದಿ ನಿದ್ದೆ ಬಿಡಬೇಡಿ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

* ಯಾವುದೇ ಕಾರಣಕ್ಕೂ ಕಾಪಿ ಮಾಡುವ ಪ್ರಯತ್ನಗಳಿಗೆಲ್ಲಾ ಕೈ ಹಾಕಿ ಇಕ್ಕಟ್ಟಿಗೆ ಸಿಲುಕಿಕೊಳ್ಳಬೇಡಿ. ಫೇಲ್ ಆದರೂ ಪರವಾಗಿಲ್ಲ, ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸ್ ಆಗಬಹುದು. ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರಕ್ಕೆ ನಿರ್ಬಂಧಿತ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಲೇಬೇಡಿ.

* ಕಡಿಮೆ ಅಂಕದ ಪ್ರಶ್ನೆಗೆ ಜಾಸ್ತಿ ಸಮಯ ವ್ಯಯ ಮಾಡಬೇಡಿ. ಹೆಚ್ಚಿನ ಅಂಕದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಯಾವುದಕ್ಕೂ ಸಮಯದ ಬಗ್ಗೆ ಗಮನವಿರಲಿ.

* ಆಹಾರವನ್ನು ಸರಿಯಾಗಿ ಸೇವಿಸಿ. ಆರೋಗ್ಯದ ಮೇಲೆ ಪರಿಣಾಮ ಬೀರುವ ಆಹಾರಗಳಿಂದ ಆದಷ್ಟು ದೂರವಿರಿ. ಯಾವುದೆ ಕಾರಣಕ್ಕೂ ಟೆನ್ಶನ್ ಮಾಡಿಕೊಳ್ಳಬೇಡಿ. ಒತ್ತಡದಲ್ಲಿ ಮರೆತು ಹೋಗುವ ಸಾಧ್ಯತೆಗಳು ಜಾಸ್ತಿಯಾಗಿರುತ್ತವೆ.

* ಕೊನೆಯ 10 ನಿಮಿಷಗಳನ್ನು ಉಳಿಸಿಕೊಂಡು ಬರೆದ ಉತ್ತರ, ರಿಜಿಸ್ಟರ್ ನಂಬರ್ ಸರಿಯಾಗಿದೆಯೇ ಎಂದು ಮರು ಪರೀಕ್ಷಿಸಿಕೊಳ್ಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+