ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಿಎಂ : ಶಿವಾಚಾರ್ಯ ಸ್ವಾಮೀಜಿ ಭವಿಷ್ಯ
ದಾವಣಗೆರೆ, ಸೆಪ್ಟೆಂಬರ್ 14: ರಾಜ್ಯದಲ್ಲಿ ಹಲವು ಕಾಂಗ್ರೆಸ್ ನಾಯಕರು, ನಾನು ಸಿಎಂ, ಅವರು ಸಿಎಂ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಶ್ರೀಗಳೊಬ್ಬರು ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ಸಚಿವ ಎಸ್.ಎಸ್‌ಮಲ್ಲಿಕಾರ್ಜುನ್ ಅವರು ಮುಂದೆ ಮುಖ್ಯಮಂತ್ರಿ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ದಾವಣಗೆರೆ ಜಿಲ್ಲೆಯ ಆನಗೋಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಣೇಹಳ್ಳಿ ಶ್ರೀಗಳು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಿಎಂ ಆಗಲಿ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉತ್ತಮ ನೇತಾರರಾಗುವ ಅರ್ಹತೆ ಇದ್ದು,ಮನಸ್ಸು ಮಾಡಿದರೆ ಮುಂದೆ ಅವರು ಸಿಎಂ ಕೂಡ ಆಗ ಬಹುದು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದ್ದಾರೆ.

ಎಸ್.ಎಸ್.ಮಲ್ಲಿಕಾರ್ಜುನ್ ಕಳೆದ ಬಾರಿ ಸೋತಾಗ ಏಳು ಬೀಳು ಇದ್ದೇ ಇರುತ್ತದೆ ಎಂದು ಹೇಳಿದ್ದೇ. ಸೋತಾಗ ರಾಜಕೀಯ ಬೇಡ ಎಂದು ಮೌನಕ್ಕೆ ಶರಣಾಗಿದ್ದು, ಸನ್ಯಾಸಿಯಾಗಿ ಆಗಿದ್ದರು ಎಂದರು. ನಾನು ಇಷ್ಟೇಲ್ಲಾ ಕೆಲಸ ಮಾಡಿದರೂ ಜನರು ಕೈ ಹಿಡಿಯಲಿಲ್ಲಾ ಎಂದು ಬೇಸರಗೊಂಡಿದ್ದರು. ಆಗ ಸೋತಾಗ ನಿಮ್ಮ ಕೆಲಸದ ಜೊತೆ ಜನರೊಂದಿಗೆ ಇರುವಂತೆ ಹೇಳಿದ್ದೇ ಎಂದರು. ನಮ್ಮ ಸಮಾಜದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಉತ್ತಮ ನೇತಾರರಾಗುವ ಅರ್ಹತೆ ಇದ್ದು, ಮನಸ್ಸು ಮಾಡಿದರೆ ಅವರು ಮುಂದೆ ಸಿಎಂ ಕೂಡ ಆಗುವ ಅರ್ಹತೆ ಇದೇ ಎಂದಿದ್ದಾರೆ.
ಸಾಣೇಹಳ್ಳಿ ಶ್ರೀಗಳ ಮಾತನ್ನು ದಾವಣಗೆರೆ ಜನ ಕೂಡ. ಸ್ವಾಗತಿಸಿದ್ದು, ವೀರಶೈವ ಲಿಂಗಾಯಿತ ಸಮಾಜದಲ್ಲಿ ಶಾಸಕ ಶಾಮನೂರು ಬಿಟ್ಟರೇ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉತ್ತಮ ನಾಯಕತ್ವ ಹೊಂದಿರುವರು. ಅವರು ಸಿಎಂ ಆದರೆ ಎಲ್ಲ ವರ್ಗದವರಿಗೂ ಸಮಾನ ನ್ಯಾಯ ನೀಡುತ್ತಾರೆ ಎಂಬುದು ಹಲವರು ಮಾತು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ದಾವಣಗೆರೆಯಲ್ಲಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರವಾಸೋದ್ಯಮಕ್ಕೂ ಒತ್ತು ನೀಡುತ್ತಿದ್ದಾರೆ. ಇಂದು ದಾವಣಗೆರೆ ಅಭಿವೃದ್ಧಿ ಹೊಂದಲು ಶಾಮನೂರು ಕುಟುಂಬವೇ ಕಾರಣವಾಗಿದ್ದು, ರಾಜ್ಯವನ್ನು ಅಭಿವೃದ್ಧಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಿಎಂ ಆಗಲಿ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications