ರಾಮುಲುಗೆ 7 ಕ್ಷೇತ್ರಗಳ ಉಸ್ತುವಾರಿ: ದಲಿತ ಮತ ಸೆಳೆಯಲು ಬಿಜೆಪಿ ತಂತ್ರ
Recommended Video

ಬೆಂಗಳೂರು, ಫೆಬ್ರವರಿ 23: ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ದೊಡ್ಡ ಸಂಖ್ಯೆಯ ದಲಿತರನ್ನು ಪಕ್ಷದೆಡೆಗೆ ಸೆಳೆಯಲು ಬಿಜೆಪಿಯು ತಂತ್ರ ರೂಪಿಸಿದ್ದು, ಏಳು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಬಿಜೆಪಿಯ ದಲಿತ ನಾಯಕ ರಾಮುಲು ಅವರ ಹೆಗಲಿಗೆ ಹೇರಿದೆ.
ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಗೆ ದಲಿತ ಮತದಾರರು ಕಡಿಮೆ ರಾಜ್ಯದಲ್ಲಿಯಂತೂ ದಲಿತ ಸಂಘಟನೆಗಳು ವಿವಿಧ ಕಾರಣಗಳಿಗೆ ಬಿಜೆಪಿಯನ್ನು ವಿರೋಧಿಸುತ್ತಲೇ ಬಂದಿವೆ. ಅದರಲ್ಲಿ ಅನಂತ್‌ಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆ ಪ್ರಮುಖವಾದುದು.
ಆದರೆ ಈ ಬಾರಿ ಚುನಾವಣೆಯಲ್ಲಿ ದಲಿತರನ್ನು ಪಕ್ಷದೆಡೆಗೆ ಸೆಳೆಯುವ ಉದ್ದೇಶದಿಂದಾಗಿ ಬಿಜೆಪಿಯ ಪ್ರಭಾವಿ ದಲಿತ ನಾಯಕ ಶ್ರೀರಾಮುಲು ಅವರಿಗೆ ಬರೋಬ್ಬರಿ ಏಳು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ನೀಡಲಾಗಿದೆ.
ಮೀಸಲು ಕ್ಷೇತ್ರಗಳಾದ ವಿಜಯಪುರ(ಎಸ್ಸಿ), ಬಳ್ಳಾರಿ(ಎಸ್ಟಿ), ಕಲ್ಬುರ್ಗಿ(ಎಸ್ಸಿ), ರಾಯಚೂರು(ಎಸ್ಟಿ), ಚಿತ್ರದುರ್ಗ(ಎಸ್ಸಿ), ಚಾಮರಾಜನಗರ(ಎಸ್ಸಿ) ಹಾಗೂ ಕೋಲಾರ(ಎಸ್ಸಿ) ಕ್ಷೇತ್ರಗಳನ್ನು ರಾಮುಲು ಅವರ ಸುಪರ್ದಿಗೆ ನೀಡಲಾಗಿದ್ದು, ಏಳರಲ್ಲಿ ಐದರಲ್ಲಿ ಗೆಲ್ಲುವ ಗುರಿ ಹೊಂದಲಾಗಿದೆ.

ಬಿಜೆಪಿಯ ದಲಿತ ಮುಖ ರಾಮುಲು
ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಭಾರಿ ಪ್ರಮಾಣದಲ್ಲಿ ದಲಿತ ಮತದಾರರನ್ನು ತಮ್ಮತ್ತ ಸೆಳೆಯಲು ರಾಮುಲು ಯಶಸ್ವಿಯಾಗಿದ್ದರು. ಅಲ್ಲದೆ ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ರಾಮುಲು ಅವರಷ್ಟು ಪ್ರಭಾವಿ ದಲಿತ ನಾಯಕರು ಮತ್ತೊಬ್ಬರಿಲ್ಲ ಹಾಗಾಗಿ ಅವರನ್ನು ಬಿಜೆಪಿ ಹೆಚ್ಚಿಗೆ ನೆಚ್ಚಿಕೊಂಡಿದೆ.

ಬಳ್ಳಾರಿ ಉಪಚುನವಣೆಯಲ್ಲಿ ಮುಗ್ಗರಿಸಿದ್ದ ರಾಮುಲು
ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಸ್ವತಃ ತಮ್ಮ ಸಹೋದರಿಯನ್ನು ತಮ್ಮದೇ ಕ್ಷೇತ್ರ ಬಳ್ಳಾರಿಯಲ್ಲಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ರಾಮುಲು ವಿಫರಾಗಿದ್ದರು. ಹಾಗಾಗಿ ಬಿಜೆಪಿ ಈಗ ರಾಮುಲು ಅವರಿಗೆ ಜವಾಬ್ದಾರಿ ನೀಡಿರುವುದು ಕಠಿಣವಾದ ನಿರ್ಣಯ ಎನ್ನಲಾಗಿದೆ.

ರಾಜ್ಯದ ಪ್ರಭಾವಶಾಲಿ ದಲಿತ ಬಿಜೆಪಿ ಮುಖಂಡ
ರಾಜ್ಯ ರಾಜಕಾರಣದಲ್ಲಿ ಪ್ರಭಾವಶಾಲಿ ದಲಿತ ಮುಖಂಡರ ಕೊರತೆ ಬಿಜೆಪಿ ಇದ್ದ ಕಾರಣದಿಂದಲೇ ರಾಮುಲು ಅವರನ್ನು ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ತರಲಾಗಿದೆ ಎಂಬ ಮಾತುಗಳೂ ಇವೆ. ಅದರಂತೆ ಈಗ ಪಕ್ಷವು ಜವಾಬ್ದಾರಿ ನೀಡಿದ್ದು, ರಾಮುಲು ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಏಳರಲ್ಲಿ ಆರು ಕಾಂಗ್ರೆಸ್ ಮಡಿಲಲ್ಲಿವೆ
ರಾಮುಲು ಅವರಿಗೆ ನೀಡಲಾಗಿರುವ ಏಳು ಕ್ಷೇತ್ರಗಳಲ್ಲಿ ಆರರಲ್ಲಿ ಕಾಂಗ್ರೆಸ್ ಸಂಸದರು ಇದ್ದಾರೆ. ವಿಜಯಪುರ ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿ ಕಳೆದ ಬಾರಿ ಗೆದ್ದಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ , ರಾಯಚೂರು ಬಿ,ವಿ.ನಾಯಕ್ ಕಾಂಗ್ರೆಸ್, ಚಿತ್ರದುರ್ಗ ಬಿ.ಎನ್.ಚಂದ್ರಪ್ಪ ಕಾಂಗ್ರೆಸ್, ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಆರ್.ಧೃವನಾರಾಯಣ್ , ಕೋಲಾರ ಕೆ.ಎಚ್.ಮುನಿಯಪ್ಪ ಅವರು ಕಳೆದ ಬಾರಿ ಗೆದ್ದಿದ್ದಾರೆ.












Click it and Unblock the Notifications