Get Updates
Get notified of breaking news, exclusive insights, and must-see stories!

ವೈರಲ್ ಆಡಿಯೋ : ರಾಮುಲು, ಮುರಳೀಧರ ರಾವ್‌ ರಿಂದ ಬಿಸಿ ಪಾಟೀಲ್‌ಗೆ ಆಮಿಷ

Recommended Video

      B.C. Patil Audio Released: ಎಷ್ಟು ಹಣ ಬೇಕು ನಿಂಗೆ ಹೇಳು ಅಂದ ಶ್ರೀರಾಮುಲು | Oneindia Kannada

      ಬೆಂಗಳೂರು, ಮೇ 19: ಯಡಿಯೂರಪ್ಪ, ಜನಾರ್ದನ ರೆಡ್ಡಿ ಬಳಿಕ ಈಗ ಶ್ರೀರಾಮುಲು ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಅವರು ಆಪರೇಷನ್‌ ಕಮಲ ಮಾಡುತ್ತಾರೆಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದ ಆಡಿಯೋವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ.

      ಹಿರೇಕೆರೂರು ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ್ ಗೆ ಶ್ರೀರಾಮುಲು ಮತ್ತು ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

      ಈ ಮುಂಚೆ ಯಡಿಯೂರಪ್ಪ ಅವರು ಬಿ.ಸಿ.ಪಾಟೀಲ್‌ಗೆ ಕರೆ ಮಾಡಿ ಮಾತನಾಡಿದ್ದ ಆಡಿಯೋವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿತ್ತು, ಅದರಲ್ಲಿಯೂ ಕೂಡ ಬಿಎಸ್‌ವೈ ಅವರದ್ದು ಎನ್ನಲಾಗುವ ಧ್ವನಿ ಬಿ.ಸಿ.ಪಾಟೀಲ್‌ಗೆ ಆಮಿಷ ನೀಡಲಾಗಿತ್ತು.

      Sriramulu and Muralidhar Rao talked with MLA BC Patil

      ಆಡಿಯೋ ಕ್ಲಿಪ್‌ನಲ್ಲಿ ಶ್ರೀರಾಮುಲು ಅವರನ್ನೇ ಹೋಲು ಧ್ವನಿ, ಬಿ.ಸಿ.ಪಾಟೀಲ್‌ ಅವರಿಗೆ 25 ಕೊಡುತ್ತೇವೆಂದು, ಬಿ.ಸಿ.ಪಾಟೀಲ್ ಬೆಂಬಲಿಗರಿಗೆ 15 ಕೊಡುತ್ತೇವೆಂದು ಜತೆಗೆ ಎಲ್ಲರನ್ನೂ ಸಚಿವರನ್ನಾಗಿ ಮಾಡುತ್ತೇವೆಂದು ಹೇಳಿರುವ ಧ್ವನಿ ಇದೆ.

      ದೂರವಾಣಿ ಸಂಭಾಷಣೆಯಲ್ಲಿ ಏನೇನು ಮಾತನಾಡಲಿಗೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ...

      ಶ್ರೀರಾಮುಲು: ನಾನು ರಾಮುಲು ಮಾತಡ್ತಾ ಇದ್ದೇನೆ..

      ಬಿ.ಸಿ. ಪಾಟೀಲ್: ಹಾ... ನಮಸ್ಕಾರ ಹೇಳಿ ಅಣ್ಣಾ... ಬ್ರದರ್...

      ಶ್ರೀರಾಮುಲು: ಏನು ಎಕ್ಸ್ ಪೆಕ್ಟ್ (ನಿರೀಕ್ಷೆ) ಮಾಡ್ತೀರಾ?

      ಬಿ.ಸಿ.ಪಾಟೀಲ್: 'ಸಾಹೇಬ್ರು' ಹಂಗೆ ಹೇಳಿದ್ರು... ಆದರೆ ಅಮೌಂಟ್ ಬಗ್ಗೆ ಏನೂ ಹೇಳಲಿಲ್ಲ.

      ಶ್ರೀರಾಮುಲು: ಹೇಳಿ ಏನು ಅಮೌಂಟ್ ಎಕ್ಸ್ ಪೆಕ್ಟ್ ಮಾಡ್ತೀರಾ?

      ಬಿಸಿಪಾಟೀಲ್: ನೀವೇ ಹೇಳಬೇಕು.

      ಶ್ರೀರಾಮುಲು: 25 ಅಂತ ಹೇಳಿದ್ದೆ.

      ಬಿಸಿಪಾಟೀಲ್: ನನ್ನ ಜತೆಯಲ್ಲಿ 3-4 ಜನರಿದ್ದಾರೆ... ಅವರಿಗೆ ಕ್ಲಾರಿಫೈ ಮಾಡಬೇಕು

      ಶ್ರೀರಾಮಯ್ಯ: ಅವರಿಗೆ 10ರಿಂದ 15 ಕೊಡ್ತೀವಿ

      ಬಿಸಿಪಾಟೀಲ್: ಅಣ್ಣಾ... ಅಣ್ಣಾ...ಅವರ ಪೊಸಿಷನ್ ಏನು?

      ಶ್ರೀರಾಮುಲು: ಅವರನ್ನೂ ಮಂತ್ರಿ ಮಾಡ್ತೀವಿ...

      ಬಿಸಿಪಾಟೀಲ್: ನನ್ನ ಕ್ಷೇತ್ರದಲ್ಲಿ ಯು.ಬಿ. ಬಣಕಾರ್ ಇದ್ದು, ಅವರು ತುಂಬಾ ಸ್ಟ್ರಾಂಗ್ ಇದ್ದಾರೆ... ಅವರು ಮತ್ತೊಂದು ಪಕ್ಷಕ್ಕೆ ಹೋಗಿ ನನ್ನ ವಿರುದ್ಧ ಚುನಾವಣೆಗೆ ನಿಂತರೆ...?

      ಶ್ರೀರಾಮುಲು: ಡೋಂಟ್ ವರಿ... ಎಲೆಕ್ಶನ್ ಇರುವುದಿಲ್ಲ...ನಾವು ನಮ್ಮದೇ ಸ್ಪೀಕರ್ ಎಲೆಕ್ಟ್ ಮಾಡ್ತೀವಿ. ಮೆಜಾರಿಟಿ ಪ್ರೂವ್ ಮಾಡ್ತೀವಿ. ಆಂಧ್ರ ಪ್ರದೇಶ್ ದಲ್ಲಿ ಏನಾಯ್ತು ಗೊತ್ತಲ್ಲಾ ಅಣ್ಣಾ... ಎಂಎಲ್ ಎ ಗಳನ್ನು ಅಮಾನತ್ತು ಮಾಡೋದಿಲ್ಲ. ನಮ್ಮದೇ.. ಸೆಂಟ್ರಲ್ ಗೌರ್ನಮೆಂಟ್ ಕೂಡ ಇದೆ. ನಮ್ಮದೇ ಎಲೆಕ್ಶನ್ - ಗಿಲೆಕ್ಶನ್ ಏನೂ ಇರಲ್ಲ. ನಾನು ಫೋನ್ ಈಗ ಮುರಳೀಧರ್ ರಾವ್ ಗೆ ಕೊಡ್ತೀನೀ... ಅವರಹತ್ತಿರ ಮಾತಾಡಿ...

      ಬಿ.ಸಿ.ಪಾಟೀಲ್: ಅವೆಲ್ಲಾ ಏನೂ ಬೇಡಾ ಬ್ರದರ್...

      ಶ್ರೀರಾ: ಇಲ್ಲಾ ಮಾತನಾಡಿ...

      ಬಿ.ಸಿ.ಪಾಟೀಲ್: ಓ.ಕೆ. ಓ.ಕೆ. ಓ.ಕೆ. ಬ್ರದರ್

      ಮುರಳಿಧರ ರಾವ್: ನೀವು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ...ನೀವು ಎಲೆಕ್ಶನ್ ಗೆ ಹೋಗುವ ಅಗತ್ಯವೇ ಬಾರದು

      ಬಿಸಿಪಾ: ನನ್ನ ಜತೆ 3ರಿಂದ ನಾಲ್ಕು ಶಾಸಕರಿದ್ದು, ಅವರ ಪರವಾಗಿ ನಾನೇ ಕೇಳಬೇಕು... ನೀವು ಒಂದು ಫಿಗರ್ ಹೇಳಿ...

      (ರಾಮುಲು ಮಧ್ಯಪ್ರವೇಶ)

      ಶ್ರೀರಾಮುಲು: ಪಾಟೀಲ್ ಸಾಹೇಬರೆ ನಾನು ಈಗಾಗಲೇ 15 ಹೇಳಿದ್ದೇನೆ. ಇವರ ಬಳಿ ನೀವು ಫಿಗರ್ ಕೇಳಬೇಡಿ

      ಮುರಳಿಧರರಾವ್: ನಾವು ರೆಡಿ ಇದ್ದೇವೆ. ಯಾರಿಗೂ ಎಲೆಕ್ಶನ್ ಇಲ್ಲ...ಎಲ್ಲಾ ಸ್ಪೀಕರ್ ಗೆ ಬಿಟ್ಟಿದ್ದು... ಎಲ್ಲ ರಾಜ್ಯಗಳಲ್ಲೂ ಇದೇ same. ನಾವು ನಿಮ್ಮೊಂದಿಗೆ ಎಂದಿಗೂ ಇದ್ದೇವೆ. ಇದು ನನ್ನ ಮಾತು... ಆಂಧ್ರ ತೆಲಂಗಾಣದಲ್ಲೂ ಹೀಗೆ ಆಗಿತ್ತು...

      ಬಿಸಿಪಾಟೀಲ್: ಸಾರ್ ನಾನು ಇಲ್ಲೂ ಮಿನಿಸ್ಟರ್ ಆಗ್ತೀನೀ ಸಾರ್...

      ಮುರಳೀಧರ್ ರಾವ್: ಸಾರ್... ನೂರಾ ನಾಲ್ಕೇ ಸ್ಟೇಬಲ್ ಆಗಿಲ್ಲ ಅಂದರೆ... 38 ಹೇಗೆ ಸ್ಟೇಬಲ್ ಆಗುತ್ತದೆ.

      ಬಿಸಿಪಾಟೀಲ್: ಯೆಸ್ ಸಾರ್. ಯೆಸ್ ಸಾರ್...!!

      ಅಲ್ಲಿಗೆ ದೂರವಾಣಿ ಕರೆ ಕಟ್‌ ಆಗುತ್ತದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+