'ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದೇ ರೀತಿ ಪೆನ್ ಕೊಟ್ಟಿದ್ದೆ'

ಬೆಂಗಳೂರು, ಫೆ. 08: ಪ್ರಮಾಣವಚನ ಸ್ವೀಕರಿಸಿದ ಬಳಿಕ ನೂತನ ಸಚಿವ ಎಸ್.ಟಿ. ಸೋಮಶೇಖರ್ ಅವರು ಮೊದಲ ಬಾರಿ ಆರ್ಟ್‌ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಹಿಂದೆ ಉಪ ಚುನಾವಣೆ ಬಳಿಕವೂ ಸಚಿವ ಎಸ್.ಟಿ. ಸೋಮಶೇಖರ್ ಅವರು ಆರ್ಟ್‌ ಆಫ್ ಲಿವಿಂಗ್ ಆಶ್ರಮದಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಮಾಡಿ ಧ್ಯಾನ ಮಾಡಿದ್ದರು. ಇದೀಗ ಮಂತ್ರಿಯಾದ ಬಳಿಕ ಮತ್ತೆ ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.

ನೂತನ ಸಚಿವ ಎಸ್.ಟಿ. ಸೋಮಶೇಖರ್ ಅವರು ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಗುರೂಜಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಉಡುಗೊರೆ ಪಡೆದುಕೊಂಡ ಬಳಿಕ ಸಚಿವ ಎಸ್.ಟಿ. ಸೋಮಶೇಖರ್ ಅತ್ಯುತ್ತಮ ಖಾತೆ ಪಡೆಯುವ ವಿಶ್ವಾಸದಲ್ಲಿದ್ದಾರಂತೆ, ಅದಕ್ಕೆ ಕಾರಣವಾಗಿದ್ದು ಉಡುಗೋರೆ ಜೊತೆಗೆ ಶ್ರೀ ರವಿಶಂಕರ್ ಗುರೂಜಿ ಅವರು ಮಾಡಿರುವ ಆಶೀರ್ವಾದ.

ಶ್ರೀ ರವಿಶಂಕರ್ ಗುರೂಜಿ ಅವರು ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಪೆನ್ ನೀಡಿ ಆಶೀರ್ವದಿಸಿದ್ದಾರೆ. ಜೊತೆಗೆ ಈ ಪೆನ್ ನಿಮ್ಮ ಬಳಿಯೆ ಇಟ್ಟುಕೊಳ್ಳಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಇದೇ ರೀತಿಯ ಪೆನ್ ಕೊಟ್ಟಿದ್ದೆ. ಅವರೂ ಇಟ್ಟುಕೊಂಡಿದ್ದಾರೆ. ನೀವೂ ಇಟ್ಟುಕೊಳ್ಳಿ. ನಿಮಗೂ ಒಳ್ಳೇಯದಾಗುತ್ತದೆ ಎಂದು ಆಶೀರ್ವಾದ ಮಾಡಿದ್ದಾರೆ.

Sri Sri Ravi Shankar Guruji has blessed by giving a pen as a gift

ಶ್ರೀ ಶ್ರೀ ರವಿ ಶಂಕರ್ ಗುರೂಜಿ ಭೇಟಿ ಬಳಿಕ ಎಸ್‌ಟಿಎಸ್ ಹೇಳಿಕೆ: ಶ್ರೀ ಶ್ರೀ ರವಿಶಂಕರ್ ಗುರೂಜಿ ಭೇಟಿ ಬಳಿಕ ಮಾತನಾಡಿರುವ ಸಚಿವ ಎಸ್‌ಟಿಎಸ್ ಅವರು, ಸೋಮವಾರ ನೂತನ ಸಚಿವರಿಗೆ ಖಾತೆ ಹಂಚುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಖಾತೆ ಬಗ್ಗೆ ಅವರ ಮೇಲೆ ಯಾವುದೇ ಒತ್ತಡ ಹೇರಿಲ್ಲ.

Sri Sri Ravi Shankar Guruji has blessed by giving a pen as a gift

ಬಿಜೆಪಿ ಕಚೇರಿ ಸಿಬ್ಬಂದಿ ಸಚಿವ ಗೋಪಾಲಯ್ಯರಿಗೆ ಹೇಳಿದ್ದು...

ನಾನು ಬೆಂಗಳೂರು ಅಭಿವೃದ್ದಿ ಖಾತೆ ಕೇಳಿದ್ದೆ, ನನ್ನ ಆಸಕ್ತಿ ಕ್ಷೇತ್ರ ಅನ್ನೋ ಕಾರಣಕ್ಕಾಗಿ ಕೇಳಿದ್ದೆ. ಖಾತೆ ಮುಖ್ಯ ಅಲ್ಲ, ನಾವು ಹೇಗೆ ಕೆಲಸ ಮಾಡುತ್ತೇವೆ ಅನ್ನುವುದು ಮುಖ್ಯ. ಹಿಂದೆ ಬಸವಪ್ಪನವರಿಗೆ ಪರಿಸರ ಖಾತೆ ಕೊಟ್ಟಿದ್ದರು. ಆ ಖಾತೆಯಲ್ಲಿಯೆ ಅವರು ನಾಡಿನ ಜನರು ಮೆಚ್ಚುವಂತಹ ಕೆಲಸ ಮಾಡಿ ತೋರಿಸಿದ್ದರು. ಯಾವುದೇ ಖಾತೆ ಕೊಟ್ಟರೂ ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+