Karnataka Rails: ಯಶವಂತಪುರ, ಹುಬ್ಬಳ್ಳಿಯಿಂದ ಇಲ್ಲಿಗೆ ದೀಪಾವಳಿ ವಿಶೇಷ ರೈಲು ಸೇವೆ, ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 07: ಮುಂಬರುವ ದೀಪಾವಳಿ ಹಾಗೂ ಛತ್ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಇರುತ್ತದೆ. ಜನರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಭಾರತೀಯ ರೈಲ್ವೆಯು ಮುಜಫರ್‌ಪುರ-ಹುಬ್ಬಳ್ಳಿ ಮತ್ತು ದಾನಾಪುರ-ಯಶವಂತಪುರ ನಡುವೆ ವಿಶೇಷ ರೈಲು ಸೇವೆ ಕಾರ್ಯಾಚರಣೆ ನಡೆಸುತ್ತಿದೆ. ಹಬ್ಬಗಳಿಗೆ ಊರುಗಳಿಗೆ ತೆರಳು ಪ್ರಯಾಣಿಕರು ಈ ಸೇವೆಯ ಲಾಭ ಪಡೆದುಕೊಳ್ಳಬಹುದೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಜಫರ್‌ಪುರ- ಹುಬ್ಬಳ್ಳಿ-ಮುಜಫರ್‌ಪುರ ರೈಲು
ಮುಜಫರ್‌ಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ-ಮುಜಫರ್‌ಪುರ ವಿಶೇಷ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 05543) 2025 ಅಕ್ಟೋಬರ್ 10 ರಿಂದ ನವೆಂಬರ್ 14 ರವರೆಗೆ ಪ್ರತಿ ಶುಕ್ರವಾರ 12:45 ಗಂಟೆಗೆ ಮುಜಫರ್ ಪುರದಿಂದ ಹೊರಡುತ್ತದೆ. ಸೋಮವಾರ ಮಧ್ಯಾಹ್ನ 12:20 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್‌ಗೆ ಬಂದು ತಲುಪುತ್ತದೆ. ಮರಳಿ ಇದೇ ರೈಲು (05544) ಅಕ್ಟೋಬರ್ 14 ರಿಂದ ನವೆಂಬರ್ 18 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 09:00 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡುತ್ತದೆ. ಶುಕ್ರವಾರ ಬೆಳಗ್ಗೆ 05:00 ಗಂಟೆಗೆ ಮುಜಫರ್‌ಪುರ ನಿಲ್ದಾಣಕ್ಕೆ ಬರುತ್ತದೆ. ಈ ರೈಲು ಒಟ್ಟು ಆರು ಟ್ರಿಪ್‌ಗಳ ಸೇವೆ ನೀಡಲಿದೆ.

ನಿಲುಗಡೆ ನಿಲ್ದಾಣಗಳು ಯಾವುವು?
ಈ ರೈಲು ಎರಡು ಬದಿ ಸಂಚಾರದ ವೇಳೆ ಮೋತಿಪುರ, ಚಕಿಯಾ, ಬಾಪುಧಾಮ್ ಮೋತಿಹಾರಿ, ಸಗೌಲಿ ಜಂಕ್ಷನ್, ಬೆತ್ತಿಯಾ, ನರ್ಕಟಿಯಾಗಂಜ್ ಜಂ., ಬಗಹಾ, ಕಪ್ತಾನಗಂಜ್ ಜಂಕ್ಷನ್, ಗೋರಖ್ಪುರ ಜಂಕ್ಷನ್, ಗೋಂಡಾ ಜಂಕ್ಷನ್, ಐಶ್‌ಬಾಗ್, ಕಾನುರ ಸೆಂಟ್ರಲ್, ಓರೈ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ಬೀನಾ ಜಂಕ್ಷನ್, ಭೋಪಾಲ್ ಜಂಕ್ಷನ್, ಇಟಾರ್ಸಿ ಜಂಕ್ಷನ್, ಆಮ್ಲಾ ಜಂಕ್ಷನ್, ನಾಗೂರ, ಚಂದ್ರಪುರ, ಬಲ್ಲಾರ್ಷಾ, ರಾಮಗುಂಡಂ, ಕಾಜೀಪೇಟ್ ಜಂಕ್ಷನ್, ಕಾಚೇಗುಡ, ಮಹೆಬೂಬ್ನಗರ, ಧೋಣ, ಧರ್ಮಾವರಂ ಜಂಕ್ಷನ್, ಹಿಂದೂಪುರ, ಯಲಹಂಕ ಜಂಕ್ಷನ್, ತುಮಕೂರು, ಅರಸೀಕೆರೆ ಜಂಕ್ಷನ್, ಬೀರೂರು ಜಂಕ್ಷನ್, ಚಿಕ್ಕಜಾಜೂರು ಜಂಕ್ಷನ್, ದಾವಣಗೆರೆ, ರಾಣೇಬೆನೂರು, ಮತ್ತು ಎಸ್‌ಎಂಎಂ ಹಾವೇರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
22 ಬೋಗಿಗಳನ್ನು ಹೊಂದಿರುವ ರೈಲಿನಲ್ಲಿ 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 12 ಸ್ವೀಪರ್ ವರ್ಗ, 4 ಸಾಮಾನ್ಯ ದ್ವಿತೀಯ ದ್ವತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್-ಕಮ್-ಬ್ರೇಕ್ ಲಗೇಜ್-ಕ ವ್ಯಾನ್ (ದಿವ್ಯಾಂಗಜನ ಕೋಚ್ ಸಹಿತ) ಸಹ ಇವೆ.
ದಾನಾಪುರ-ಯಶವಂತಪುರ-ದಾನಾಪುರ ವಿಶೇಷ ರೈಲು
ದಾನಾಪುರ-ಯಶವಂತಪುರ-ದಾನಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (03261) 2025 ಅಕ್ಟೋಬರ್ 11 ರಿಂದ ಡಿಸೆಂಬರ್ 27ರವರೆಗೆ ಪ್ರತಿ ಶನಿವಾರ ಬೆಳಗ್ಗೆ 10:00 ಗಂಟೆಗೆ ದಾನಾಪುರದಿಂದ ಹೊರಡುತ್ತದೆ. ಮಂಗಳವಾರ ರಾತ್ರಿ 09:30 ಗಂಟೆಗೆ ಯಶವಂತಪುರ ತಲುಪುತ್ತದೆ.
ಮರಳಿ ಇದೇ ಈ ರೈಲು (03262) 2025 ಅಕ್ಟೋಬರ್ 14 ರಿಂದ ಡಿಸೆಂಬರ್ 30ರವರೆಗೆ ಪ್ರತಿ ಮಂಗಳವಾರ ಬೆಳಗ್ಗೆ 07:00 ಗಂಟೆಗೆ ಯಶವಂತಪುರದಿಂದ ಹೊರಡುತ್ತದೆ. ಗುರುವಾರ ಮಧ್ಯಾಹ್ನ 12:00 ಗಂಟೆಗೆ ದಾನಾಪುರ ತಲುಪುತ್ತಿದೆ. ಈ ರೈಲು ಪ್ರತಿ ದಿಕ್ಕಿನಲ್ಲಿಯೂ ಒಟ್ಟು ಹನ್ನೆರಡು ಟ್ರಿಪ್‌ಗಳ ಸೇವೆ ಒದಗಿಸಲಿದೆ.
ನಿಲುಗಡೆ ನಿಲ್ದಾಣಗಳು ಯಾವುವು?
ಈ ವಿಶೇಷ ರೈಲು ಎರಡು ಬದಿ ಸಂಚಾರ ವೇಳೆ ಅರಾ ಜಂಕ್ಷನ್, ಬಕ್ಸರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಪ್ರಯಾಗ್‌ರಾಜ್ ಛವೋಕಿ ಜಂಕ್ಷನ್ ಮಾಣಿಕ್‌ಪುರ ಜಂಕ್ಷನ್, ಸತ್ನಾ, ಕಟ್ಟಿ ಜಂಕ್ಷನ್, ಜಬಲ್‌ಪುರ, ನರಸಿಂಗ್‌ಪುರ, ಪಿಪರಿಯಾ, ಇಟಾರ್ಸಿ ಜಂಕ್ಷನ್, ಆಮ್ಲಾ ಜಂಕ್ಷನ್, ನಾಗುರ, ಚಂದ್ರಪುರ, ಬಲ್ಲರ್ಷಾ, ರಾಮಗುಂಡಂ, ಕಾಜೀಪೇಟ್ ಜಂಕ್ಷನ್, ಕಾಚೆಗುಡ, ಮಹೆಬೂಬ್ ನಗರ, ಧೋಣ, ಧರ್ಮಾವರಂ ಜಂಕ್ಷನ್, ಹಿಂದೂಪುರ, ಮತ್ತು ಯಲಹಂಕ ನಿಲ್ದಾಣಗಳಲ್ಲಿ ಎರಡು ದಿಕ್ಕುಗಳಲ್ಲಿ ನಿಲುಗಡೆ ನೀಡಲಿದೆ.
ಒಟ್ಟು 20 ಬೋಗಿಗಳನ್ನು ಹೊಂದಿರುವ ಈ ರೈಲು 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 9 ಸ್ವೀಪರ್ ವರ್ಗ, 5 ಸಾಮಾನ್ಯ ದ್ವಿತೀಯ ದ್ವಿತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗಜನ ಕೋಚ್ ಸಹಿತ) ಕೋಚ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
-
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications