Bengaluru-Bidar Train: ಬೆಂಗಳೂರು-ಬೀದರ್ ನಡುವೆ ವಿಶೇಷ ರೈಲು: ಯಾವಾಗ? ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು, ಆಗಸ್ಟ್ 01: ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್ 15) ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀದರ್ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಿದೆ. ಆಗಸ್ಟ್ 15ರಂದು ಶುಕ್ರವಾರ ಬಂದಿದ್ದು, ಅದರ ಆಸು ಪಾಸು ದಿನಗಳಲ್ಲಿ ಜನ ಸಂಚಾರ ಹೆಚ್ಚಿರುತ್ತದೆ. ಹೀಗಾಗಿ ಈ ವಿಶೇಷ ರೈಲು ಹೆಚ್ಚಿನ ಅನುಕೂಲ ಒದಗಿಸಲಿದೆ.

ಎಸ್‌ಎಂವಿಟಿ ಬೆಂಗಳೂರು - ಬೀದರ್ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06519) 2025 ಆಗಸ್ಟ್ 14 ರಂದು ಗುರುವಾರ ರಂದು ಎಎಂವಿಟಿ ಬೆಂಗಳೂರಿನಿಂದ ರಾತ್ರಿ 9:15ಕ್ಕೆ ಈ ರೈಲು ಹೊರಟು, ಮರುದಿನ ಬೆಳಗ್ಗೆ 11:30ಕ್ಕೆ ಬೀದ‌ರ್ ತಲುಪಲಿದೆ. ಮರಳಿ ಬೀದರ್ - ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ಪ್ರಯಾಣದಲ್ಲಿ ರೈಲು (06520) 2025 ಆಗಸ್ಟ್ 15 (ಶುಕ್ರವಾರ) ರಂದು ಬೀದರ್‌ನಿಂದ ಮಧ್ಯಾಹ್ನ 2:30ಕ್ಕೆ ಪ್ರಯಾಣ ಆರಂಭಿಸಿ ಮರುದಿನ ಬೆಳಗಿನ ಜಾವ 4:30ಕ್ಕೆ ಎಸ್‌ಎಂವಿಟಿ ಬೆಂಗಳೂರಿಗೆ ಬಂದು ಸೇರಲಿದೆ.

Special Train Between Bengaluru and Bidar for Aug 15th Independence Day Rush

ಎಸ್‌ಎಂವಿಟಿ ಬೆಂಗಳೂರು - ಬೀದರ್ ವಿಶೇಷ ರೈಲು ಮಾರ್ಗ ಮಾರ್ಗ ಮಧ್ಯ 'ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಬಾದ್, ಕಲಬುರಗಿ, ಹುಮನಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಎರಡು ಬದಿಯಲ್ಲಿ ಈ ಇದೇ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಈ ವಿಶೇಷ ರೈಲು 20 ಸೆಕೆಂಡ್ ಕ್ಲಾಸ್ ಸ್ಪೀಪರ್ ಬೋಗಿಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಹಾಗೂ ವಿಶೇಷಚೇತನ ಸ್ನೇಹಿ ಬೋಗಿಗಳು ಸೇರಿದಂತೆ ಒಟ್ಟು 22 ಬೋಗಿಗಳನ್ನು ಹೊಂದಿದೆ. ಈ ರೈಲು ಸಂಚಾರದಿಂದ ಬೆಂಗಳೂರು, ಗುಂತಕಲ್ ಹಾಗೂ ಕಲಬುರಗಿ, ಬೀದವರೆಗೆ ಬರುವ ಅನೇಕ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ ಒದಗಿಸುತ್ತದೆ.

ವಿಂಡೋ ಟ್ರೇಲಿಂಗ್ ಪರಿಶೀಲನೆ

ಡಿಆರ್‌ಎಂ ಬೇಲಾ ಮೀನಾ ಅವರು ಮೀರಜ್-ಹುಬ್ಬಳ್ಳಿ ಮಾರ್ಗದಲ್ಲಿ ವಿಂಡೋ ಟ್ರೇಲಿಂಗ್ ಪರಿಶೀಲನೆ ನಡೆಸಿದರು ಹಾಗೂ ರಾಯಬಾಗ, ಚಿಕ್ಕೋಡಿ ರೋಡ್ ಮತ್ತು ಗೊಕಾಕ್ ರೋಡ್ ರೈಲು ನಿಲ್ದಾಣಗಳಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯ ಪ್ರಗತಿಯನ್ನು, ಪ್ರಯಾಣಿಕರ ಸೌಲಭ್ಯಗಳು, ಭದ್ರತಾ ಕ್ರಮಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಪರಿಶೀಲಿಸಿದರು. ಈ ವೇಳೆ ಕಾಮಗಾರಿ ಬಗ್ಗೆ ಅಧಿಕಾರಿಗಳು ಅಗತ್ಯ ಮಾಹಿತಿ ಒದಗಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+