ಕ್ಯಾನ್ಸರ್‌ನಿಂದ ಬಳಲುತ್ತಿರುವ ಸರ್ಕಾರಿ ನೌಕರರಿಗೆ ವಿಶೇಷ ರಜೆ

ಬೆಂಗಳೂರು, ಜುಲೈ 13; ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ನೀಡುವ ಕುರಿತು ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯನ್ನು ಪರಿಶೀಲಿಸಿ ಈ ಕುರಿತು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಉಪಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-1) ಬಿ. ಎಸ್. ಸುವರ್ಣ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪತ್ರ ದಿನಾಂಕ 26/8/2020 ಉಲ್ಲೇಖ ಮಾಡಿದ್ದಾರೆ.

Special Occasional Leave For Karnataka Govt Employee Who Suffering From Cancer

ಈ ಆದೇಶವು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ/ ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯ ಮಂಜೂರಾತಿ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಪ್ರಸ್ತಾವನೆ ಏನಿತ್ತು?; ರಾಜ್ಯದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಕೆಲವು ಸರ್ಕಾರಿ ನೌಕರರು ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರ ಸಲಹೆಯ ಮೇರೆಗೆ ಕಿಮೋ/ ರೇಡಿಯೋ ಥೆರಪಿಯಂತಹ ಚಿಕಿತ್ಸೆಗೆ ಒಳಪಡಬೇಕಿದ್ದು, ಆ ನಿಮಿತ್ತವಾಗಿ ಕಡ್ಡಾಯವಾಗಿ ವಿಶ್ರಾಂತಿಯನ್ನು ಪಡೆಯಬೇಕಿರುವ ಅವಶ್ಯಕತೆ ಇರುತ್ತದೆ.

ಈ ಚಿಕಿತ್ಸೆ ಪಡೆಯುವಾಗ ವಿಶ್ರಾಂತಿಯ ಅಗತ್ಯತೆಯಿಂದಾಗಿ ಕಛೇರಿಗೆ ಹಾಜರಾಗಲು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಈ ಅವಧಿಯನ್ನು ಸಕ್ಷಮ ವೈದ್ಯಕೀಯ ಪ್ರಾಧಿಕಾರವು ನೀಡುವ ಪ್ರಮಾಣಪತ್ರವನ್ನು ಹಾಜರು ಪಡಿಸುವ ಷರತ್ತಿಗೊಳಪಟ್ಟ ವಿಶೇಷ ಸಾಂದರ್ಭಿಕ ರಜೆಯನ್ನಾಗಿ ಪರಿಗಣಿಸುವಂತೆ ಮನವಿ ಮಾಡಲಾಗಿತ್ತು.

ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಪಾರ್ಕ್, ಬೆಂಗಳೂರು ಇವರು ಈ ಕುರಿತು ಕೋರಿದ್ದರು. ಈ ವಿಷಯವನ್ನು ಸರ್ಕಾರವು ಪರಿಶೀಲಿಸಿದ್ದು, ಅದರಂತೆ ಈ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ; ಸರ್ಕಾರದ ಆದೇಶ ದಿನಾಂಕ 22/06/2021 ಅಡಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನಬಂಧ-ಬಿ ರಲ್ಲಿನ ನಿಯಮ 11(ಐ)ರ ನಂತರದಲ್ಲಿ, ಈ ಆದೇಶವನ್ನು ಹೊರಡಿಸಿದ ದಿನಾಂಕದಿಂದ ಜಾರಿಗೊಳ್ಳುವಂತೆ ನಿಯಮ 11(ಜೆ) ಎಂಬ ಹೊಸ ನಿಯಮವನ್ನು ಸೇರ್ಪಡೆಗೊಳಿಸಿದೆ.

ಕೆಎಸ್ಆರ್‌ಟಿಸಿ ಸುತ್ತೋಲೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) 3/7/2023ರಂದು ಸುತ್ತೋಲೆಯೊಂದನ್ನು ಹೊರಡಿಸಿದೆ. ವ್ಯವಸ್ಥಾಪಕ ನಿರ್ದೇಶಕರು ವಿ. ಅನ್ಬುಕುಮಾರ್ ಹೆಸರಿನಲ್ಲಿ ಈ ಸುತ್ತೋಲೆ ಪ್ರಕಟವಾಗಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ನಿಗಮದ ಅಧಿಕಾರಿ/ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ/ ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆ ನೀಡುವ ಕುರಿತು ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸಾ ತಜ್ಞರು ರೂಪಿಸುವ ಯೋಜನೆಯನುಸಾರ ಪಡೆಯುವ ಕಿಮೋ/ ರೇಡಿಯೋ ಥೆರಪಿ ಚಿಕಿತ್ಸೆ ಮತ್ತು ಸಂಬಂಧದಲ್ಲಿ ಅಗತ್ಯವಾಗುವ ವಿಶ್ರಾಂತಿಯ ಅವಧಿಯ ದಿನಗಳಿಗೆ, ಸಕ್ಷಮ ವೈದ್ಯಕೀಯ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಪಡೆದು ಒದಗಿಸುವ ಷರತ್ತಿಗೊಳಪಟ್ಟು, ಈ ಚಿಕಿತ್ಸೆಯ ಅವಧಿಯಲ್ಲಿ ಮಾತ್ರ ಗರಿಷ್ಠ 6 ತಿಂಗಳುಗಳ ಮಿತಿಗೊಳಪಟ್ಟು ಪ್ರಸ್ತುತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪ್ರಕರಣಗಳನ್ನು ಒಳಗೊಂಡಂತೆ ವಿಶೇಷ ಸಾಂದರ್ಭಿಕ ರಜೆಯನ್ನು ಸರ್ಕಾರದಲ್ಲಿರುವಂತೆ ನಿಗಮದ ಅಧಿಕಾರಿ/ ನೌಕರರಿಗೆ ನೀಡುವ ಪ್ರಸ್ತಾವನೆಗೆ ನಿಗಮದ ನಿರ್ದೇಶಕರ ಮಂಡಳಿಯು ಠರಾವುದಿನಾಂಕ 27/6/2023 ರನ್ವಯ ಒಪ್ಪಿಗೆ ನೀಡಿರುತ್ತದೆ.

ಸಂಬಂಧಪಟ್ಟವರೂ ಮೇಲಿನ ಒಪ್ಪಿಗೆಯನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+