ಗೌರಿ ಹತ್ಯೆ ತನಿಖೆಗೆ ಬಿಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ ರಚನೆ
ಬೆಂಗಳೂರು, ಸೆಪ್ಟಂಬರ್ 6: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಗೆ ಕರ್ನಾಟಕ ಸರಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿದೆ. ಗುಪ್ತಚರ ವಿಭಾಗದ ಐಜಿಪಿ ಬಿಕೆ ಸಿಂಗ್ ಎಸ್ಐಟಿಯ ನೇತೃತ್ವ ವಹಿಸಲಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್ ಅನುಚೇತ್ ಎಸ್ಐಟಿಯ ಮುಖ್ಯ ತನಿಖಾ ಅಧಿಕಾರಿಯಾಗಿದ್ದಾರೆ. ಒಟ್ಟು 19 ಪೊಲೀಸ್ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ.

ಡಿಸಿಪಿ ಜಿತೇಂದ್ರ ಕಣಗಾವಿ, ಡೆಪ್ಯುಟಿ ಡೈರೆಕ್ಟರ್ ಹರೀಶ್ ಪಾಂಡೆ, ಎಸಿಪಿ ಕೆಪಿ ರವಿಕುಮಾರ್, ಡಿವೈಎಸ್ಪಿಗಳಾದ ಎನ್.ಬಿ ಸಕ್ರಿ, ಜಗನ್ನಾಥ್ ರೈ, ಕೆ.ಎಸ್.ನಾಗರಾಜ್ ಹಾಗೂ 13 ಜನ ಪೊಲೀಸ್ ಇನ್ಸ್ ಪೆಕ್ಟರ್ ಗಳು ತಂಡದಲ್ಲಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾ ವಿಶೇಷ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications