Christmas Holidays: ಬೆಂಗಳೂರು-ಬೆಳಗಾವಿಗೆ ವಿಶೇಷ ರೈಲು ಸೇವೆ, ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ
Bengaluru Special Trains: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಜೆಗಳು ಹೆಚ್ಚಿರುತ್ತವೆ. ಆಗ ಪ್ರಯಾಣಿಕರ ಸಂಚಾರವು ಅಧಿಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಿಲ್ಲೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಸಂಚಾರಕ್ಕೆ ಬಿಡಲು ನಿರ್ಧರಿಸಿದೆ. ಈ ವಿಶೇಷ ರೈಲು ಒಂದೇ ಟ್ರಿಪ್‌ನ ಆಧಾರದ ಮೇಲೆ ಸಂಚಾರ ಮಾಡಲಿದೆ. ಪ್ರಯಾಣಿಕರು ಹೆಚ್ಚಿದ ದಟ್ಟಣೆಯನ್ನು ನಿಭಾಯಿಸಲು, ಬೆಂಗಳೂರಿನ ಯಲಹಂಕದಿಂದ ಹೊರಡುವ ವಿಶೇಷ ರೈಲುಗಳನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರು ನಿಲ್ದಾಣದಿಂದ ಬೆಳಗಾವಿವರೆಗೆ ಡಿಸೆಂಬರ್ 24ರಂದು ಒಂದು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಎರಡು ಬದಿ ತಲಾ ಒಂದೊಂದು ಟ್ರಿಪ್ ಸೇವೆ ಸಿಗಲಿದೆ. ಎಸ್‌ಎಂವಿಟಿ ಬೆಂಗಳೂರು–ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು (06503) ಬುಧವಾರ ಸಂಜೆ 7 ಗಂಟೆಗೆ 19:00 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 08:25 ಗಂಟೆಗೆ ಬೆಳಗಾವಿ ನಿಲ್ದಾಣ ತಲುಪುತ್ತಿದೆ.

ಡಿಸೆಂಬರ್ 28ರಂದು ಬೆಳಗಾವಿ–ಎಸ್‌ಎಂವಿಟಿ ಬೆಂಗಳೂರು ರೈಲು (06504) ಡಿಸೆಂಬರ್ 28 ಭಾನುವಾರದಂದು ಸಂಜೆ 5:30ಗಂಟೆಗೆ ಬೆಳಗಾವಿಯಿಂದ ಹೊರಡಲಿದೆ. ಮುಂದಿನ ದಿನ ಬೆಳಗ್ಗೆ 05 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ಈ ಎರಡು ಬದಿ ಸಂಚಾರ ವೇಳೆ ಮಾರ್ಗ ಮಧ್ಯೆ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಸೆಮ್‌ಎಮ್ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳನವರ್, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.
23 ಬೋಗಿಗಳ ವಿಶೇಷ ರೈಲು
ಪ್ರಯಾಣಿಕರ ಹೆಚ್ಚಿದ ಸಂಖ್ಯೆಯನ್ನು ಗಮನಿಸಿ ವಿಶೇಷ ರೈಲಿಗೆ ಒಟ್ಟು 23 ಬೋಗಿಗಳನ್ನು ಅಳವಡಿಸಲಿವೆ. ಇದರಲ್ಲಿ ಎಸಿ, ಎಸಿ ಸ್ಲೀಪರ್, ಜನರಲ್ ಸೇರಿದಂತೆ ಎಲ್ಲ ಬಗೆಯ ಕೋಚ್‌ಗಳು ಇವೆ. ಪ್ರಯಾಣಿಕರು ರೈಲುಗಳ ವೇಳಾಪಟ್ಟಿ ಮತ್ತು ಇತರ ಮಾಹಿತಿಗೆ enquiry.indianrail.gov.in ಗೆ ಸಂಪರ್ಕಿಸಬೇಕು. ಇಲ್ಲವೇ ಸಹಾಯವಾಣಿ 139 ಗೆ ಕರೆ ಮಾಡಬಹುದು.
ಸಂತ್ರಾಗಾಚಿ-ಯಲಹಂಕ ವಿಶೇಷ ರೈಲು ಸೇವೆಗಳ ವಿಸ್ತರಣೆ
ಪ್ರಯಾಣಿಕರು ಹೆಚ್ಚಿದ ದಟ್ಟಣೆಯನ್ನು ನಿಭಾಯಿಸಲು, ಸಂತ್ರಾಗಾಚಿ-ಯಲಹಂಕ-ಸಂತ್ರಾಗಾಚಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ (02863/02864) ಸೇವೆ ವಿಸ್ತರಿಸಲಾಗಿದೆ. ಸಂತ್ರಾಗಾಚಿ ಯಲಹಂಕ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (02863) ನವೆಂಬರ್ 27ರ ಬದಲಾಗಿ ಡಿಸೆಂಬರ್ 4ರಿಂದ ಡಿಸೆಂಬರ್ 25 ವಿಸ್ತರಣೆಯಾಗಲಿದೆ. ಈ ರೈಲು ಪ್ರತಿ ಗುರುವಾರದಂದು ಕಾರ್ಯಾಚರಣೆ ಮಾಡುತ್ತದೆ.
ಯಲಹಂಕ - ಸಂತ್ರಾಗಾಚಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (02864) ಈ ಹಿಂದೆ ನವೆಂಬರ್ 29ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು. ಇದೀಗ ಡಿಸೆಂಬರ್ 6 ರಿಂದ ಡಿಸೆಂಬರ್ 27 ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ರೈಲು ಪ್ರತಿ ಶನಿವಾರ ಪ್ರಯಾಣಿಸುತ್ತದೆ.
ಯಲಹಂಕ ನಿಲ್ದಾಣದಲ್ಲಿ ಪರಿಷ್ಕೃತ ಆಗಮನ/ನಿರ್ಗಮನ ನೋಡುವುದಾದರೆ, ರೈಲು (02863) ಪ್ರತಿ ಶನಿವಾರ 00:55 ಗಂಟೆಗೆ (ಮಧರಾತ್ರಿ 12:55) ಯಲಹಂಕ ಜಂಕ್ಷನ್ ಆಗಮಿಸಲಿದೆ. ಮರಳಿ ರೈಲು (02864) ಪ್ರತಿ ಶನಿವಾರ 04:45 ಗಂಟೆಗೆ ಯಲಹಂಕ ಜಂಕ್ಷನ್‌ನಿಂದ ಹೊರಡಲಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications