ಉತ್ತರ ಕರ್ನಾಟಕ ಮಂದಿಗೆ ಗುಡ್ ನ್ಯೂಸ್: ಸೌದತ್ತಿ ರೇಣುಕಾ ಯಲ್ಲಮ್ಮ ಹಾಗೂ ಬದಾಮಿ ಬನಶಂಕರಿ ದೇವಿ ಜಾತ್ರೆಗೆ ಸ್ಪೆಷಲ್ ಬಸ್!
ಸೌದತ್ತಿ ರೇಣುಕಾ ಯಲ್ಲಮ್ಮ & ಬದಾಮಿ ಬನಶಂಕರಿ ದೇವಿ ಜಾತ್ರೆಗೆ ಹೋಗಿ ಬರುವ ಭಕ್ತರಿಗಾಗಿ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗುಡ್ ನ್ಯೂಸ್ ಕೊಟ್ಟಿದೆ. ಅದರಲ್ಲೂ ಜಾತ್ರೆಯ ಸಮಯದಲ್ಲಿ ಉತ್ತರ ಕರ್ನಾಟಕದ ಮಂದಿಗೆ ಇದರಿಂದ ಸಿಹಿಸುದ್ದಿ ಸಿಕ್ಕಿದೆ. ಹಾಗಾದರೆ ಏನದು ಸಿಹಿಸುದ್ದಿ? ಬಸ್ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಹೌದು, ಕೋಟ್ಯಂತರ ಭಕ್ತರ ಶಕ್ತಿ ಕ್ಷೇತ್ರ ಸೌದತ್ತಿ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಇನ್ನೇನು ಆರಂಭವಾಗಲಿದೆ. ಹಾಗೇ ಬದಾಮಿ ಬನಶಂಕರಿ ದೇವಿ ಜಾತ್ರೆಯೂ ಹತ್ತಿರದಲ್ಲಿ ಇದೆ. ಇದೇ ಸಮಯದಲ್ಲಿ ಈಗ ಗುಡ್ ನ್ಯೂಸ್ ಸಿಕ್ಕಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಜನವರಿ 23 ರಿಂದ 30ರವರೆಗು ಹುಬ್ಬಳ್ಳಿ ಹಾಗೂ ನವಲಗುಂದದಿಂದ ಜಾತ್ರಾ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಬಸ್‌ಗಳು ಓಡಾಡುವುದು ಯಾವಾಗ?
ಅಂದಹಾಗೆ ಸೌದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ & ಬಾದಾಮಿ ಶ್ರೀ ಬನಶಂಕರಿ ದೇವಿ ಜಾತ್ರೆ ಜನವರಿ 23 ರಿಂದ 30ರವರೆಗೆ ಜರುಗಲಿದೆ. ಈ ಜಾತ್ರೆಗಳಿಗೆ ಹೋಗಿ ಬರುವ ಭಕ್ತರಿಗಾಗಿ, ಅವರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡ & ಶ್ರೀ ಕ್ಷೇತ್ರವಾದ ಬನಶಂಕರಿ ಸೇರಿದಂತೆ ನವಲಗುಂದದಿಂದ ಯಲ್ಲಮ್ಮನ ಗುಡ್ಡಕ್ಕೆ ಹೆಚ್ಚುವರಿ ಜಾತ್ರಾ ವಿಶೇಷ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರಿಗಾಗಿ 100ಕ್ಕೂ ಹೆಚ್ಚು...
ಇದಕ್ಕಾಗಿ ಹುಬ್ಬಳ್ಳಿಯಿಂದ 25 ಹಾಗೂ ನವಲಗುಂದ ದಿಂದ 10 ಬಸ್ಸುಗಳು, 100ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಮೇಲ್ವಿಚಾರಣೆಗೆ 10 ಅಧಿಕಾರಿಗಳು ಹಾಗೂ 20 ಮೇಲ್ವಿಚಾರಕ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಯಾಣಿಕರ ಒತ್ತಡಕ್ಕೆ ತಕ್ಕಂತೆ ಬಸ್ಸುಗಳ ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಈಗ ಮಾಹಿತಿ ನೀಡಿದ್ದಾರೆ. ಹೀಗಾಗಿ ಹುಬ್ಬಳ್ಳಿಯಿಂದ ಜಾತ್ರಾ ವಿಶೇಷ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ. ಬಸ್ ಮಾರ್ಗದ ಮಾಹಿತಿಗೆ ಮುಂದೆ ಓದಿ.
ಹುಬ್ಬಳ್ಳಿ TO ಯಲ್ಲಮ್ಮನ ಗುಡ್ಡ
ಈ ಬಸ್ಸುಗಳು ಧಾರವಾಡ, ಸೌದತ್ತಿ ಮಾರ್ಗವಾಗಿ ಯಲ್ಲಮ್ಮನ ಗುಡ್ಡಕ್ಕೆ ಸಂಚರಿಸುತ್ತವೆ.

ಹುಬ್ಬಳ್ಳಿ TO ಬನಶಂಕರಿ
ಈ ಮಾರ್ಗದ ಬಸ್ಸು ನವಲಗುಂದ, ನರಗುಂದ, ಕೊಣ್ಣೂರು & ಕುಳಗೇರಿ ಸೇರಿ ಬಾದಾಮಿ ಮಾರ್ಗವಾಗಿ ಸಂಚರಿಸುತ್ತವೆ ಎಂದು ತಿಳಿಸಲಾಗಿದೆ.
ನವಲಗುಂದ TO ಯಲ್ಲಮ್ಮನ ಗುಡ್ಡ
ಈ ಬಸ್ಸುಗಳು ನವಲಗುಂದ ಬಸ್ ನಿಲ್ದಾಣ ಮಾರ್ಗವಾಗಿ ಹೊರಡುತ್ತವೆ ಹೀಗೆ ಗೊಬ್ಬರ ಗುಂಪಿ ಕ್ರಾಸ್, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ ಅಂತಾ ಇದೀಗ ಮಾಹಿತಿ ನೀಡಲಾಗಿದೆ.












Click it and Unblock the Notifications