ಕೈ ತಪ್ಪಿದ ಟಿಕೆಟ್? ಬಿಜೆಪಿ ಹಾಲಿ ಸಂಸದರಿಗೆ ಕಾಂಗ್ರೆಸ್ ಆಹ್ವಾನ: ಹೊಸ ಬಾಂಬ್‌ ಸಿಡಿಸಿದ ಡಿ ಕೆ ಶಿವಕುಮಾರ್‌

ಬೆಂಗಳೂರು, ಮಾರ್ಚ್‌ 13: ಬೆಂಗಳುರು ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಬಾರಿ ಹಾಲಿ ಸಂಸದರಾದ ಡಿ ವಿ ಸದಾನಂದ ಗೌಡರಿಗೆ ಟಿಕೆಟ್‌ ಕೈ ತಪ್ಪಿದ್ದು, ಮಾಜಿ ಸಿಎಂ ಸದಾನಂದ ಗೌಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಊಹಾಪೋಹಗಳು ಹರಿದಾಡುತ್ತಿವೆ.

ಲೋಕಸಭೆ ಚುನಾವಣೆಯಲ್ಲಿ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ವದಂತಿಗಳ ಬೆನ್ನಲ್ಲೇ ಮತ್ತೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗುಸುಗುಸು ಕೇಳಿ ಬರುತ್ತಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರ ಎಚ್ಚರಿ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

Spculations About MP DV Sadananda Gowda May Join Congress See What DK Shivakumar Says

ಈ ಕುರಿತು ಕಲಬುರ್ಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರವಾಗಿ ಬಹಳಷ್ಟು ಜನ ನಮ್ಮನ್ನು ಬೇಟಿಯಾಗಿದ್ದಾರೆ. ಹಾಲಿ ಸಂಸದರು ಮೂರು ಜನ ಪಕ್ಷಕ್ಕೆ ಬರೋದ್ರ ಬಗ್ಗೆ ಕೂಡ ಮಾತಾಡಿದ್ದಾರೆ. ಯಾರ್ಯಾರು ಅನ್ನೋದ್ರ ಬಗ್ಗೆ ನಾನು ಇವಾಗ ಬಹಿರಂಗ ಮಾಡಲ್ಲ. ನಮ್ಮ ಪಕ್ಷವನ್ನ ಒಪ್ಪಿ ಬರೋದಾದ್ರೆ ಬನ್ನಿ ಅಂತಾ ಹೇಳಿದ್ದೇನೆ. ಬಹಳ ಜನ ಬಿಜೆಪಿಗೆ ಬರುವವರು ಇದ್ದಾರೆ ಎಂದು ಹೇಳಿದರು.

ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದಾರ ಸದಾನಂದ ಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಡಿಕೆ ಶಿವಕುಮಾರ್, ಅವರು ಪಕ್ಷಕ್ಕೆ ಬಂದರೆ ಸ್ವಾಗತ ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ 15 ಕ್ಕೆ ಬಿಡುಗಡೆಯಾಗಲಿದೆ. ದೆಹಲಿಯಲ್ಲಿ ಚುನಾವಣಾ ಸಮಿತಿ ಸಭೆಯ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ನಾವು ಚುನಾವಣೆ ಸಲುವಾಗಿ ಗ್ಯಾರೆಂಟಿ ಕೊಡುತ್ತಿಲ್ಲ. ನಾವು ಜನರ ಬದುಕಿಗಾಗಿ ಗ್ಯಾರೆಂಟಿ ಕೊಟ್ಟಿದ್ದೇವೆ. ನಮಗೆ ವೋಟ್ ಮುಖ್ಯ ಅಲ್ಲ ಕರೋನಾ ಸಂಧರ್ಭದಲ್ಲಿ ಮೂರರಷ್ಟು ದುಪ್ಪಟ್ಟು ಹಣ ಪಡೆಯುತ್ತಿದ್ದರು, ಆಗ ಕ್ಷಣಾರ್ಧದಲ್ಲೆ ಉಚಿತ ಬಸ್ ನೀಡುವ ಯೋಜನೆ ನೀಡಲಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ 20 ಸೀಟ್ ಗೆಲುತ್ತೇವೆ. ಬಿಜೆಪಿಯವರು ಹಾಲಿ ಹತ್ತು ಸಂಸದರನ್ನ ಬದಲಾವಣೆ ಮಾಡ್ತಿದ್ದಾರೆ, ಡಾ ಮಂಜುನಾಥ , ದೇವೆಗೌಡರು , ಕುಮಾರಸ್ವಾಮಿ ಬಗ್ಗೆ ಗೌರವ ಇದೆ.

ಹೆಚ್‌ ಡಿ ದೇವಗೌಡರ ಮುಂದೆ ಹೆಣ್ಣು ಮಗಳನ್ನ ನಿಲ್ಲಿಸಿ ಗೆದ್ದಿದ್ದೆವೆ, ಕುಮಾರಸ್ವಾಮಿ , ದೇವೆಗೌಡರ ಮೇಲೆ ಗೆದ್ದಿದ್ದೆವೆ, ಮಂಜುನಾಥ್ ನಿಲ್ತಿದ್ದಾರೆ ನಿಲ್ಲಲಿ ಪರವಾಗಿಲ್ಲ. ಡಿ ಕೆ ಸುರೇಶ್ ಸಂಸದ ಅಷ್ಟೆ ಅಲ್ಲ ಪಂಚಾಯತಿ ಮೆಂಬರ್ ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಹಳ ನಾಯಕರು ಮುಂದಾಗಿದ್ದಾರೆ. ನಿನ್ನೆ ಕೂಡ ಬಿಜೆಪಿ ಹಾಗೂ ಜೆಡಿಎಸ್ ನಿಂದ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇನ್ನು ಮೂವರು ಹಾಲಿ ಸಂಸದರು, ಅನೇಕ ಹಾಲಿ ಶಾಸಕರು ಪಕ್ಷಕ್ಕೆ ಸೇರಲು ಮುಂದಾಗಿದ್ದು ನಾನು ಅವರ ಹೆಸರು ಬಹಿರಂಗಪಡಿಸಲು ಬಯಸುವುದಿಲ್ಲ" ಎಂದು ತಿಳಿಸಿದರು.

ಜೇವರ್ಗಿ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಭೀಮಾ ನದಿ ನೀರು ಬಿಡುವಂತೆ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, "ನಮ್ಮ ಸರ್ಕಾರ ಈಗಾಗಲೇ ಪತ್ರ ಬರೆದಿದ್ದು, ತೆಲಂಗಾಣದವರೂ ಕೇಳುತ್ತಿದ್ದಾರೆ. ಇಲ್ಲಿ ಸ್ವಲ್ಪ ಪ್ರಮಾಣದ ನೀರು ಮಾತ್ರ ಇದೆ. ನಮ್ಮ ರಾಜ್ಯ ಕಾಪಾಡಿಕೊಂಡು ಬೇರೆ ರಾಜ್ಯಕ್ಕೆ ಸಹಕಾರ ನೀಡಲು ನಾವು ಸಿದ್ಧವಿದ್ದೇವೆ. ಬೇರೆ ರಾಜ್ಯಗಳು ನಮಗೆ ಸಹಕಾರ ನೀಡಬೇಕು" ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+