ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕು,ಕರಾವಳಿಯಲ್ಲಿ ದುರ್ಬಲ

ಬೆಂಗಳೂರು, ಜೂನ್ 27: ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಪ್ರದೇಶದಲ್ಲಿ ದುರ್ಬಲವಾಗಿದೆ.

ಕುಣಿಗಲ್‌ನಲ್ಲಿ 14 ಸೆಂ.ಮೀ ಮಳೆಯಾಗಿದೆ. ತಿಪಟೂರು, ಹೊಸದುರ್ಗ, ಆನೇಕಲ್, ಯಲಬುರ್ಗಾ, ಅಥಣಿ, ಮೊಳಕಾಲ್ಮೂರು, ಜಮಖಂಡಿ, ಹೊಸಕೋಟೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ಅಂಕೋಲಾ,ರಾಣೆಬೆನ್ನೂರು,ಚಿತ್ರದುರ್ಗ,ಬೇವೂರು,ಸಿಂಧನೂರು,ರಾಮದುರ್ಗಾ,ರಾಮಗಿರಿ,ಕೋಲಾರ,ಎನ್‌ಆರ್ ಪುರ,ಕಲಬುರಗಿ,ಹೊಳಲ್ಕೆರೆ,ಕುಮಟಾ,ರಾಮನಗರ,ನೆಲಮಂಗಲ,ಮಂಕಿ,ಹೆಸರಘಟ್ಟ,ಬಸವನಬಾಗೇವಾಡಿ,ಬೆಳ್ತಂಗಡಿ,ಜಾಲಹಳ್ಳಿ, ಶಿರಹಟ್ಟಿ,vದೇವನಹಳ್ಳಿ,ಹೊನ್ನಾವರ,ಗದಗ,ಅಫ್ಜಲ್‌ಪುರ,ಹಾವೇರಿ,ಕಂಪ್ಲಿ,ಬುಕ್ಕಪಟ್ನ,ಭರಮಸಾಗರ,ಉಚ್ಚಂಗಿದುರ್ಗ,ಕೂಡ್ಲಿಗಿ,ಥೊಂಡೆಬಾವಿ,ಗದಗ,ಸವನೂರು,ಮಾವಳ್ಳಿ, ಆನವಟ್ಟಿಯಲ್ಲಿ ಹೆಚ್ಚು ಮಳೆಯಾಗಿದೆ.

rain

ಮುಂದಿನ 24 ಗಂಟೆಯಲ್ಲಿ ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ.

ಉತ್ತರ ಒಳನಾಡಿನ ಬಹುತೇಕ ಕಡೆ ಮಳೆ ಜೂನ್ 29ರವರೆಗೂ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೀದರ್, ಹಾವೇರಿ, ರಾಯಚೂರು,ವಿಜಯಪುರ,ಯಾದಗಿರಿಯಲ್ಲಿ ಅಲ್ಪ ಪ್ರಮಾಣದ ಮಳೆ ಬೀಳಲಿದೆ.ಬೆಂಗಳೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಶುಕ್ರವಾರ ಬೆಳಗಿನವರೆಗೆ ಕುಣಿಗಲ್‌ನಲ್ಲಿ 140 ಮಿ.ಮೀ., ತಿಪಟೂರು, ಹೊಸದುರ್ಗ, ಆನೇಕಲ್‌ನಲ್ಲಿ 100 ಮಿ.ಮೀ., ಯಲಬುರ್ಗಾ, ಅಥಣಿಯಲ್ಲಿ 90 ಮಿ.ಮೀ., ಅಂಕೋಲಾದಲ್ಲಿ 60 ಮಿ.ಮೀ., ಮುದ್ಗಲ್‌, ರಾಣೆಬೆನ್ನೂರು, ಮಹಾಲಿಂಗಪುರ, ಕುಕನೂರು, ಚಿತ್ರದುರ್ಗದಲ್ಲಿ 50 ಮಿ.ಮೀ., ಕೋಟ, ಬೇವೂರು, ಸಿಂಧನೂರು, ಹೊಸಹಳ್ಳಿ, ಎನ್‌.ಆರ್‌.ಪುರ, ಮಾಗಡಿಯಲ್ಲಿ 40 ಮಿ.ಮೀ. ಮಳೆಯಾಗಿದೆ.

ಕರಾವಳಿಗೆ ಜೂ.29ರವರೆಗೆ ಆರೇಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್‌, ಹಾವೇರಿ, ರಾಯಚೂರು, ಕಲಬುರಗಿ ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಜೂ.29ರವರೆಗೆ ಯೆಲ್ಲೊಅಲರ್ಟ್‌ ಪ್ರಕಟಿಸಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಜೂ.29 ರವರೆಗೆ ಆರೆಂಜ್‌ ಅಲರ್ಟ್‌ ಹಾಗೂ ಉಳಿದ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+