ನೈಋತ್ಯ ರೈಲ್ವೆ 38 ಪ್ಯಾಸೆಂಜರ್ ರೈಲು ಎಕ್ಸ್‌ಪ್ರೆಸ್‌ ಆಗಿ ಬದಲಾವಣೆ

ಬೆಂಗಳೂರು, ಜೂನ್ 19 : ನೈಋತ್ಯ ರೈಲ್ವೆ 38 ಪ್ಯಾಸೆಂಜರ್‌ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತನೆ ಮಾಡಲಿದೆ. ಹುಬ್ಬಳ್ಳಿ, ಚಾಮರಾಜನಗರ ಮತ್ತು ಶಿವಮೊಗ್ಗಕ್ಕೆ ಸಂಚಾರ ನಡೆಸುವ ರೈಲುಗಳು ಇದರಲ್ಲಿ ಸೇರಿವೆ.

Recommended Video

      2011 ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ತನ್ನನ್ನ ಮಾಡಿಕೊಂಡಿತ್ತು | 2011 world cup |Oneindia Kannada

      ರೈಲ್ವೆ ಇಲಾಖೆಗೆ ಈ ಕುರಿತು ನೈಋತ್ಯ ರೈಲ್ವೆ ಪ್ರಸ್ತಾವನೆಯನ್ನು ಕಳಿಸಿದೆ. 200 ಕಿ. ಮೀ.ಗಿಂತ ದೂರ ಸಂಚಾರ ನಡೆಸುವ ಪ್ಯಾಸೆಂಜರ್‌ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತನೆ ಮಾಡಲಾಗುತ್ತದೆ. ಶುಕ್ರವಾರ ಸಂಜೆ 4 ಗಂಟೆಗೆ ನಡೆಯುವ ರೈಲ್ವೆ ಇಲಾಖೆಯ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ಸಿಗಲಿದೆ.

      ನೈಋತ್ಯ ರೈಲ್ವೆ ಕಳಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದ ಬಳಿಕ ಪ್ಯಾಸೆಂಜರ್ ರೈಲುಗಳ ನಿಲ್ದಾಣಗಳನ್ನು ಕಡಿಮೆ ಮಾಡುವ ಮೂಲಕ ಅವುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಮಾಡಲಾಗುತ್ತದೆ. ಈಗಾಲೇ ಕಡಿಮೆ ಜನರು ಇರುವ ನಿಲ್ದಾಣಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

      South Western Railway To Convert 38 Passenger Trains Into Express

      ಬೆಂಗಳೂರು-ಶಿವಮೊಗ್ಗ, ಮೈಸೂರು-ಶಿವಮೊಗ್ಗ, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಹೊಸಪೇಟೆ, ಯಶವಂತಪುರ-ಸೇಲಂ, ಯಶವಂತಪುರ-ಮೈಸೂರು ನಡುವೆ ಸಂಚಾರ ನಡೆಸುವ ಪ್ಯಾಸೆಂಜರ್‌ ರೈಲುಗಳ ನಿಲ್ದಾಣಗಳನ್ನು ರದ್ದುಗೊಳಿಸಲಾಗುತ್ತದೆ.

      ಲಾಕ್ ಡೌನ್ ಪರಿಣಾಮ ಆಗಿರುವ ನಷ್ಟವನ್ನು ಕಡಿಮೆ ಮಾಡಲು ಭಾರತೀಯ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಡಿಮೆ ದೂರ ಸಂಚಾರ ನಡೆಸುವ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.

      ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿರುವ ಪರಿಣಾಮ ದೇಶಾದ್ಯಂತ ಕೆಲವು ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಲಾಕ್ ಡೌನ್ ತೆರವುಗೊಂಡ ಬಳಿಕ ಪ್ಯಾಸೆಂಜರ್ ರೈಲು, ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತನೆಗೊಳ್ಳುವ ನಿರೀಕ್ಷೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+