ಪ್ರಯಾಣಿಕರಿಗೆ ಪ್ರಮುಖ ಸೂಚನೆ.. ಇಂದು ಬೆಂಗಳೂರಿಗೆ ಬರುವ ಹಲವು ರೈಲುಗಳು ರದ್ದು...

ಬೆಂಗಳೂರು ಮೇ 29: ಹಲವೆಡೆ ಕಾಮಗಾರಿ ನಡೆಯುತ್ತಿರುವ ಕಾರಣ ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಬರುವ ಕೆಲವು ರೈಲುಗಳನ್ನು ಇಂದಿನಿಂದ (ಮೇ 29) ಮೇ 31ರವರೆಗೆ ರದ್ದು ಮಾಡಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ಹಂಚಿಕೊಂಡಿದೆ. ಹಾಗಾದರೆ ಯಾವೆಲ್ಲಾ ರೈಲುಗಳು ರದ್ದಾಗಲಿವೆ ಎಂದು ತಿಳಿಯೋಣ.

ನೀವೇನಾದ್ರೂ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರೆ ರದ್ದಾಗಿರುವ ರೈಲುಗಳ ಬಗ್ಗೆ ಮಾಹಿತಿ ಪಡೆದಿರುವುದು ಅತ್ಯಾವಶ್ಯಕ. ವಾರ್ಷಿಕ ಕೇಬಲ್ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ಬೈಯ್ಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ ಮತ್ತು ಬೈಯ್ಯಪ್ಪನಹಳ್ಳಿ-ಸರ್‌ ಎಂ.ವಿಶೇಶ್ವರಯ್ಯ ಟರ್ಮಿನಲ್ ನಡುವೆ ಇಂದು ಮೂರು ಮೆಮು ರೈಲುಗಳು ರದ್ದುಗೊಳ್ಳಲಿವೆ. ನೈರುತ್ಯ ರೈಲ್ವೆ ಮಾಹಿತಿ ಪ್ರಕಾರ ಒಟ್ಟು ಎಂಟು ಮೆಮು ರೈಲುಗಳು ಭಾಗಶ: ರದ್ದಾಗಿವೆ.

south western and konkan railways bengaluru trains are cancelled till may 31st

ಹಾಗೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ ಭಟ್ಕಳ ನಿಲ್ದಾಣದಲ್ಲಿ ಮೇ 29 ರಿಂದ 31 ರವರೆಗೆ ಕೆಲವು ರೈಲುಗಳನ್ನು ಭಾಗಶ: ರದ್ದುಗೊಳ್ಳಲಿವೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.

ಮೂರು ವಿಶೇಷ ಮೆಮು ರೈಲು ರದ್ದು:

ರೈಲು ಸಂಖ್ಯೆ (01799) ವೈಟ್‌ಫಿಲ್ಡ್-ಕೆಎಸ್‌ಆರ್‌ ಬೆಂಗಳೂರು ವಿಶೇಷ ಮೆಮು ರೈಲು, ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟ (06561) ಮತ್ತು ಬಂಗಾರಪೇಟ-ಕೆಎಸ್‌ಆರ್ ಬೆಂಗಳೂರು (01773) ವಿಶೇಷ ಮೆಮು ರೈಲು ಬುಧವಾರ (ಮೇ 29) ತಾತ್ಕಾಲಿಕವಾಗಿ ರದ್ದಾಗಿವೆ.

ಎಂಟು ವಿಶೇಷ ಮೆಮು ಭಾಗಶ: ರದ್ದು:

*ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟ ಮೆಮು ವಿಶೇಷ ರೈಲು ಸಂಖ್ಯೆ (06389) ಕೆಎಸ್‌ಆರ್ ಬೆಂಗಳೂರು-ವೈಟ್‌ಫಿಲ್ಟ್ ನಡುವೆ ಭಾಗಶ: ರದ್ದಾಗಲಿದೆ.

south western and konkan railways bengaluru trains are cancelled till may 31st

*ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ರೈಲು ಸಂಖ್ಯೆ (06535) ಯಲಹಂಕ-ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶ: ರದ್ದಾಗಲಿದೆ.

*ಮರಿಕುಪ್ಪಂ-ಕೆಎಸ್‌ಆರ್‌ ಬೆಂಗಳೂರು ಮೆಮು ವಿಶೇಷ ರೈಲು ಸಂಖ್ಯೆ (01776) ಕೆಎಸ್‌ಆರ್‌ ಬೆಂಗಳೂರು-ಕೃಷ್ಣರಾಜಪುರಂ ಮಧ್ಯೆ ಭಾಗಶ: ರದ್ದಾಗಲಿದೆ.

*ಕೆಎಸ್‌ಆರ್‌ ಬೆಂಗಳೂರು-ಮರಿಕುಪ್ಪಂ ಮೆಮು ವಿಶೇಷ ರೈಲು ಸಂಖ್ಯೆ (01775) ಕೆಎಸ್‌ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಾಗಶ: ರದ್ದಾಗಲಿದೆ.

*ಮರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು ಸಂಖ್ಯೆ (01793) ಬಂಗಾರಪೇಟ-ಕೃಷ್ಣರಾಜಪುರಂ ನಡುವೆ ಭಾಗಶ: ರದ್ದಾಗಲಿದೆ.

*ಕೃಷ್ಣರಾಜಪುರಂ-ಮರಿಕುರಪ್ಪಂ ಮೆಮು ವಿಶೇಷ ರೈಲು ಸಂಖ್ಯೆ (01794) ಕೃಷ್ಣರಾಜಪುರಂ-ಬಂಗಾರಪೇಟ ನಡುವೆ ಭಾಗಶ: ರದ್ದಾಗಲಿದೆ.

*ಕೆಎಸ್‌ಆರ್ ಬೆಂಗಳೂರು-ಕುಪ್ಪಂ ಮೆಮು ವಿಶೇಷ ರೈಲು ಸಂಖ್ಯೆ (06529) ಕೆಎಸ್ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಾಗಶ: ರದ್ದಾಗಲಿದೆ.

*ರೈಲು ಸಂಖ್ಯೆ 16585 ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸಪ್ರೆಸ್ ರೈಲು ಶಿರೂರು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಈ ರೈಲು ಮೇ 29ರಂದು ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುತ್ತದೆ. ಶಿರೂರು-ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ.

*ರೈಲು ಸಂಖ್ಯೆ 16586 ಮುರುಡೇಶ್ವರ-ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸಪ್ರೆಸ್ ರೈಲು ಮೇ 30ರಂದು ಶಿರೂರು ನಿಲ್ದಾಣದಿಂದ ಮಧ್ಯಾಹ್ನ 2.35 ಗಂಟೆಗೆ ಪ್ರಾರಂಭವಾಗಲಿದ್ದು, ಮುರುಡೇಶ್ವರ ಮತ್ತು ಶಿರೂರು ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+