ಸೌತ್ ಫಸ್ಟ್ ಚುನಾವಣಾ ಪೂರ್ವ ಸಮೀಕ್ಷೆ: ಚುನಾವಣೆಯಲ್ಲಿ ಫಲಿತಾಂಶ ನಿರ್ಧರಿಸುವವರು ಯಾರು ಗೊತ್ತೆ?

ಬೆಂಗಳೂರು, ಏಪ್ರಿಲ್. 13: ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ನಡೆಯಲಿದ್ದು, ಮತದಾನಕ್ಕೆ ರಾಜ್ಯ ಸಿದ್ಧವಾಗುತ್ತಿದೆ. ಇದರ ನಡುವೆ ಹಲವು ಸಂಸ್ಥೆಗಳು, ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಚುನಾವಣಾ ಸಮೀಕ್ಷೆಗಳ ಫಲಿತಾಂಶವನ್ನು ತಿರುಗು ಮುರುಗು ಮಾಡುವ ಒಂದು ಅಂಶವಿದೆ. ಅದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಈ ವರ್ಷದ ಜನವರಿಯಲ್ಲಿ ಸೌತ್ ಫಸ್ಟ್ ತನ್ನ ಮೊದಲ ಟ್ರ್ಯಾಕರ್ ಸಮೀಕ್ಷೆಯನ್ನು ಪ್ರಕಟಿಸಿತ್ತು. ಈಗ ಮತ್ತೆ ಮಾರ್ಚ್ 25 ಮತ್ತು ಏಪ್ರಿಲ್ 10 ರ ನಡುವೆ ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಇದರಲ್ಲಿ ಹಲವು ಮಂದಿ ತಮ್ಮ ಆಯ್ಕೆ ಯಾರು ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಇವರು ಚುನಾವಣ ಫಲಿತಾಂಶವನ್ನು ಬದಲಿಸಬಹುದಾದ ಪ್ರಾಮುಖ್ಯತೆ ಹೊಂದಿದ್ದಾರೆ.

South First Karnataka pre-poll survey: 4 percent Vote Share Set to be Deciding Factor

ಈ ಹಿಂದೆ ನಡೆದಿರುವ ಆರು ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಮೂರರಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿದೆ. ಇನ್ನು ಮೂರರಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಜೊತೆಗೆ ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಚುನಾವಣಾ ಪೂರ್ವ ಸಮೀಕ್ಷೆಯು ಇನ್ನೊಂದು ಸುತ್ತಿನ ಸಮೀಕ್ಷೆ ನಡೆಸಿದ್ದು, ಇದರಲ್ಲಿಯೂ ಕಾಂಗ್ರೆಸ್‌ ಅಧಿಕ ಸ್ಥಾನ ಪಡೆಯಲಿದೆ ಎಂದಿದ್ದು, ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಭವಿಷ್ಯ ನುಡಿದಿದೆ.

ಮಾರ್ಚ್ 25 ಮತ್ತು ಏಪ್ರಿಲ್ 10 ರ ನಡುವೆ ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಇದರಲ್ಲಿ ಕರ್ನಾಟಕ 2023 ರ ಅಸೆಂಬ್ಲಿ ಚುನಾವಣೆಯ ಅಭಿಪ್ರಾಯ ಸಂಗ್ರಹವು ಸರ್ಕಾರವನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ತೋರಿಸಿದೆ. ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

*4% ಮತ ಹಂಚಿಕೆ ಫಲಿತಾಂಶ ನಿರ್ಧರಿಸುವ ಅಂಶ*

2023 ರ ವಿಧಾನಸಭಾ ಚುನಾವಣೆಗಾಗಿ ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಕರ್ನಾಟಕ ಅಭಿಪ್ರಾಯ ಸಂಗ್ರಹವು ಸುಮಾರು ನಾಲ್ಕು ಪ್ರತಿಶತದಷ್ಟು ಮತದಾರರು ಸರ್ಕಾರ ರಚಿಸಲು ತಮ್ಮ ಆಯ್ಕೆಯನ್ನು ವ್ಯಕ್ತಪಡಿಸಿಲ್ಲ ಎಂದು ಬಹಿರಂಗಪಡಿಸಿದೆ. ಮೇ 10 ರಂದು ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಶೇಕಡಾ ನಾಲ್ಕು ಮತಗಳು ನಿರ್ಣಾಯಕ ಅಂಶವಾಗಿ ಪರಿಣಮಿಸುವ ನಿರೀಕ್ಷೆಯಿದೆ.

South First Karnataka pre-poll survey: 4 percent Vote Share Set to be Deciding Factor

* ಕರ್ನಾಟಕ 2023 ರ ಅಭಿಪ್ರಾಯ ಸಂಗ್ರಹವು ಕಾಂಗ್ರೆಸ್ 2.86 ಶೇಕಡಾ ಮತಗಳನ್ನು ಗಳಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯು ತಿಳಿಸಿದೆ.

*2018 ರ ಚುನಾವಣೆಯಲ್ಲಿ 38.14 ಶೇಕಡಾ ಮತಗಳನ್ನು ಗಳಿಸಿದ ಕಾಂಗ್ರೆಸ್ ಈ ಚುನಾವಣೆಯಲ್ಲಿ ತನ್ನ ಪಾಲನ್ನು 41 ಶೇಕಡಾಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. ಮತ ಹಂಚಿಕೆಯಲ್ಲಿನ ಲಾಭವು ವಿರೋಧ ಪಕ್ಷಕ್ಕೆ 18 ಸ್ಥಾನಗಳನ್ನು ಹೆಚ್ಚುವರಿಯಾಗಿ ನೀಡುವ ಸಾಧ್ಯತೆಯಿದೆ.

*2018 ರಲ್ಲಿ 36.35 ಶೇಕಡಾ ಮತಗಳನ್ನು ಪಡೆದಿರುವ ಬಿಜೆಪಿಯು ತನ್ನ ಶೇಕಡಾವಾರು ಮತಗಳ ಪ್ರಮಾಣವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಶೇ.36ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

* 2018ರ ಅಂಕಿಅಂಶಗಳಿಗೆ ಹೋಲಿಸಿದರೆ ಜೆಡಿಎಸ್ ಎರಡು ಶೇಕಡಾವಾರು ಅಂಕಗಳ ಮತ ಹಂಚಿಕೆಯನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಮುಂಬರುವ ಚುನಾವಣೆಯಲ್ಲಿ ಜೆಡಿ ಎಸ್‌ಗೆ ಶೇಕಡಾ 16 ರಷ್ಟು ಮತಗಳ ಹಂಚಿಕೆ ನೀಡುತ್ತದೆ.

* ಮತ ಹಂಚಿಕೆಯಲ್ಲಿನ ನಷ್ಟದಿಂದಾಗಿ ಜೆಡಿಎಸ್ 10 ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.

ಜನವರಿಯಿಂದ ಸೌತ್ ಫಸ್ಟ್ ಟ್ರ್ಯಾಕರ್ ಸಮೀಕ್ಷೆ ಮತ್ತು ಈಗ ಚುನಾವಣಾ ಪೂರ್ವ ಸಮೀಕ್ಷೆಯ ಡೇಟಾದ ಆಧಾರದ ಮೇಲೆ, ಮತದಾರರು ಈಗಾಗಲೇ ಸರ್ಕಾರ ಬದಲಾವಣೆಯ ಬಗ್ಗೆ ನಿರ್ಧರಿಸಿದ್ದಾರೆ ಎಂಬ ಸೂಚನೆ ನೀಡಿದೆ.

ರಾಜ್ಯದಲ್ಲಿ ಏಪ್ರಿಲ್‌ 13 ರಂದು ಉಮೇದುವಾರಿಕೆ ಸಲ್ಲಿಸುವ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್‌ 20ರಂದು ಕೊನೆಯ ದಿನವಾಗಿದೆ. ಮೇ 10 ರಂದು ನಡೆಯಲಿರುವ ಚುನಾವಣೆಯ ಫಲಿತಾಂಶಗಳು ಮೇ 13ರಂದು ಹೊರಬರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+