ಹಲವು ರೈಲುಗಳು ರದ್ದು, ಮಾರ್ಗ ಬದಲಾವಣೆ; ಪಟ್ಟಿ ನೋಡಿ
ಬೆಂಗಳೂರು, ಆಗಸ್ಟ್ 09; ಕಾಮಗಾರಿಗಳ ಹಿನ್ನಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿ ದಕ್ಷಿಣ ಮಧ್ಯ ರೈಲ್ವೆ ವಲಯವು ಆದೇಶಿಸಿದೆ. ರೈಲ್ವೆ ಪ್ರಯಾಣ ಮಾಡುವ ಮೊದಲು ಬದಲಾವಣೆ ಬಗ್ಗೆ ಪ್ರಯಾಣಿಕರು ಮಾಹಿತಿ ತಿಳಿದಿರುವುದುದ ಉತ್ತಮ.
ವಿಜಯವಾಡವಿಭಾಗದ ಮನುಬೋಲು ಮತ್ತು ಗುಡೂರು ನಡುವೆ ನಡೆಯುತ್ತಿರುವ ಇಂಜಿನಿಯರಿಂಗ್ ಕಾಮಗಾರಿಯ ಸಲುವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ದಕ್ಷಿಣ ಮಧ್ಯ ರೈಲ್ವೆ ವಲಯ ಕೆಲವು ರೈಲುಗಳನ್ನು ರದ್ದುಗೊಳಿಸಿದೆ. ಕೆಲವು ರೈಲುಗಳ ನಿಯಂತ್ರಣ ಮತ್ತು ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. ರೈಲುಗಳ ಪಟ್ಟಿ ಇಲ್ಲಿದೆ ನೋಡಿ.
ರೈಲುಗಳು ರದ್ದು; ಹಟಿಯಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 18637 ಹಟಿಯಾ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 12 ರಂದು ರದ್ದುಗೊಳಿಸಲಾಗುತ್ತಿದೆ.
ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 18638 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಹಟಿಯಾ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 15 ರಂದು ರದ್ದುಗೊಳಿಸಲಾಗುತ್ತಿದೆ.
ರೈಲು ನಿಯಂತ್ರಣ
* ಆಗಸ್ಟ್ 13 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 22818 ಮೈಸೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
ರೈಲುಗಳ ಮಾರ್ಗ ಬದಲಾವಣೆ:
* ಆಗಸ್ಟ್ 10 ಮತ್ತು 11 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12509 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಕಟ್ಪಾಡಿ, ಮೇಲ್ಪಕ್ಕಂ, ರೇಣಿಗುಂಟಾ, ಯರಗುಂಟಾ ನಂದ್ಯಾಳ ಮತ್ತು ಗುಂಟೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಅರಕ್ಕೋಣಂ, ಪೆರಂಬೂರ ಮತ್ತು ಒಂಗೋಲ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
* ಆಗಸ್ಟ್ 13 ರಂದು ಗುವಾಹಟಿಯಿಂದ ಹೊರಡುವ ರೈಲು ಸಂಖ್ಯೆ 12510 ಗುವಾಹಟಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಗುಂಟೂರು, ನಂದ್ಯಾಳ, ಯರಗುಂಟ್ನಾ, ರೇಣಿಗುಂಟಾ, ಮೇಲ್ಪಕ್ಕಂ ಮತ್ತು ಕಟ್ಪಾಡಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಆದ್ದರಿಂದ ಪೆರಂಬೂರ ಮತ್ತು ಅರಕ್ಕೋಣಂ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.
* ಆಗಸ್ಟ್ 11ರಂದು ನ್ಯೂ ಟಿನ್ಸುಕಿಯಾದಿಂದ ಹೊರಡುವ ರೈಲು ಸಂಖ್ಯೆ 22502 ನ್ಯೂ ಟಿನ್ಸುಕಿಯಾ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಗುಂಟೂರು, ನಂದ್ಯಾಳ, ಯರಗುಂಟಾ, ರೇಣಿಗುಂಟಾ, ಮೇಲ್ಪಕ್ಕಂ ಮತ್ತು ಕಟ್ಪಾಡಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಒಂಗೋಲ, ನೆಲ್ಲೂರು ಮತ್ತು ಪೆರಂಬೂರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
* ಆಗಸ್ಟ್ 15 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 22501 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ನೂ ಟಿನ್ಸುಕಿಯಾ ಸೂಪರ್‌ಫಾಸ್ಟ್, ಎಕ್ಸ್‌ಪ್ರೆಸ್ ರೈಲು ಕಟ್ಟಾಡಿ, ಮೇಲ್ಪಕ್ಕಂ, ರೇಣಿಗುಂಟಾ, ಯರಗುಂಟ್ಲಾ, ನಂದ್ಯಾಳ, ಗುಂಟೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಆದ್ದರಿಂದ ಪೆರಂಬೂರ, ನೆಲ್ಲೂರು ಮತ್ತು ಒಂಗೋಲ ನಿಲ್ದಾಣದಲ್ಲಿ ನಿಲುಗಡೆ ಇಲ್ಲ.












Click it and Unblock the Notifications