ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ಹೋರಿ ಪ್ರಾಣ ರಕ್ಷಿಸಿದ ಜಮಾತ್ ಸದಸ್ಯರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಉಡುಪಿ,ಜನವರಿ,16: ಮನುಷ್ಯರಿಗೆ ಏನಾದರೂ ಆಘಾತವಾದಲ್ಲಿ ಅವರ ರಕ್ಷಣೆಗೆ, ಉಪಚಾರಕ್ಕೆ ಸಾವಿರ ಮಂದಿ ಬರುತ್ತಾರೆ. ಆದರೆ ಪ್ರಾಣಿಗಳು ಪ್ರಾಣಾಪಾಯದಿಂದ ನರಳುತ್ತಿದ್ದರೆ ಅವುಗಳ ನೋವನ್ನು ಕಾಣಲು ಯಾರೂ ಮುಂದಾಗುವುದಿಲ್ಲ. ಉಡುಪಿಯ ಬಚಿಲಾದಲ್ಲಿ ಅರ್ಧ ಜೀವದಲ್ಲಿ ನರಳುತ್ತಿದ್ದ ಪ್ರಾಣಿಯನ್ನು ಜಮಾತ್ ಸದಸ್ಯರು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೌದು ಅದೊಂದು ಹೋರಿ, ಉಚ್ಚಿಲ ರೈಲ್ವೆ ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಕಾಲುಮುರಿದುಕೊಂಡು ನರಳುತ್ತಿತ್ತು, ಇದರ ಬಳಲಿಕೆಯನ್ನು ಸಹಿಸದ ಜಮಾತ್ ಸದಸ್ಯರು ಹೋರಿಗಾಗಿ ಒಂದು ಟೆಂಟ್ ನಿರ್ಮಿಸಿ ಅದನ್ನು ಸಲಹಿ ಅದಕ್ಕೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ.[ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]

cow

ಹೋರಿವೊಂದು ಉಚ್ಚಿಲ ಸಮೀಪದ ರೈಲ್ವೆ ಸೇತುವೆ ಬಳಿ ನಡೆದುಕೊಂಡು ಹೋಗುತ್ತಿತ್ತು. ರೈಲು ಬರುವುದರ ಅರಿವಿಲ್ಲದೆ ರೈಲ್ವೆ ಹಳಿ ದಾಟುತ್ತಿತ್ತು. ಆ ವೇಳೆ ಬಂದ ರೈಲು ಆ ಹೋರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಹೋರಿಯ ಕಾಲುಗಳು ಮುರಿದುಹೋದವು.

ಕಾಲು ಮುರಿತದ ನೋವಿನಿಂದ ಹೋರಿ ಬಹಳ ನರಳುತ್ತಿತ್ತು. ಅದರ ನೋವನ್ನು ಹೇಳಿಕೊಳ್ಳಲು ಆ ಮೂಕ ಪ್ರಾಣಿಗೆ ಹೇಗೆ ತಾನೇ ಸಾಧ್ಯವಾಗುತ್ತದೆ? ಅರ್ಧ ಜೀವದಲ್ಲಿ ನರಳಾಡುತ್ತಿದ್ದ ಆ ಹೋರಿಯನ್ನು ನೋಡಿ ಬೇಸರಿಸಿಕೊಂಡ ಜಮಾತ್ ಸದಸ್ಯರು ತಕ್ಷಣವೇ ಅಲ್ಲೇ ಪಕ್ಕದಲ್ಲಿ ಹೋರಿಗಾಗಿ ಒಂದು ಟೆಂಟ್ ನಿರ್ಮಿಸಿ ಅದನ್ನು ಸಲಹಿ ಅದಕ್ಕೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ.[ಸದ್ಯದಲ್ಲೇ ಸೃಷ್ಟಿ ಆಗ್ತಾರಾ ನಮ್ಮಂತಹ ತದ್ರೂಪಿ ವ್ಯಕ್ತಿಗಳು?]

ನೋವಿನಿಂದ ನರಳುತ್ತಿದ್ದ ಹೋರಿಯ ನೋವನ್ನು ಶಮನ ನೀಡಿ, ಪ್ರೀತಿಯಿಂದ ಆರೈಕೆ ಮಾಡುತ್ತಿರುವ ಜಮಾತ್ ಸದಸ್ಯರ ಕಾರ್ಯ ಎಲ್ಲರ ಶ್ಲಾಘನೆಗೆ ಒಳಗಾಗಿದೆ.

English summary
A cow very injured, its leg broken in accident Uchila, Udupi. Some Jamaat members saved its life and gave medical treatment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X