ದೇಶಕ್ಕೆ ಪ್ರಾಣ ತ್ಯಾಗ ಮಾಡಿ ತವರಲ್ಲಿ ಮಣ್ಣಾದ ಯೋಧರು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 01: ಜಮ್ಮುವಿನಲ್ಲಿ ನಡೆದ ಉಗ್ರರ ಬಾಂಬ್ ದಾಳಿಯಲ್ಲಿ ಮೃತಪಟ್ಟ ನವಲಗುಂದ ತಾಲೂಕು ಸೈದಾಪುರ ಗ್ರಾಮದ ಯೋಧ ಹಸನಸಾಬ್ ಇಮಾಮಸಾಬ್ ಖುದಾವಂದ್ (24) ಅವರ ಅಂತ್ಯಕ್ರಿಯೆ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.

ಅಂತ್ಯಕ್ರಿಯೆಗೂ ಮೊದಲು ಯೋಧನ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಜಿಟಿಜಿಟಿ ಮಳೆಯನ್ನು ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಯೋಧನ ಅಂತಿಮ ದರ್ಶನ ಪಡೆದರು.[ಧಾರವಾಡದಲ್ಲಿ ಇಂದು ಯೋಧ ಹಸನ್ ಸಾಬ ಅಂತ್ಯಕ್ರಿಯೆ]

ಅತ್ತ ಬೆಳಗಾವಿ ಜಿಲ್ಲೆ ಗೋಕಾಕದ ನಬಾಪುರ ಗ್ರಾಮದ ಯೋಧ ಸುಬೇದಾರ ಬಸವರಾಜ ಚನ್ನಪ್ಪ ಪಾಟೀಲ(45) ಅಂತ್ಯಕ್ರಿಯೆ ಸಹ ಸರ್ಕಾರಿ ಗೌರವಗಳೊಂದಿಗೆ ಜರುಗಿತು.

ಗೋವಾ ಮೂಲಕ ಬಂದ ಪಾರ್ಥಿವ ಶರೀರ

ಗೋವಾ ಮೂಲಕ ಬಂದ ಪಾರ್ಥಿವ ಶರೀರ

ಗೋವಾ ಮೂಲಕ ಸೋಮವಾರ ಬೆಳಗ್ಗೆ ಪಾರ್ಥಿವ ಶರೀರವನ್ನು ತರಲಾಗಿತ್ತು. ಗ್ರಾಮದ ರಸ್ತೆಯುದ್ದಕ್ಕೂ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಅಂತಿಮ ನಮನ ಸಲ್ಲಿಸಿ ಗೌರವ ಸೂಚಿಸಿದರು.

ಸಚಿವ ವಿನಯ್ ಕುಲಕರ್ಣಿ ನಮನ

ಸಚಿವ ವಿನಯ್ ಕುಲಕರ್ಣಿ ನಮನ

ಯೋಧ ಹಸನ್‌ಸಾಬ್‌ ಇಮಾಮ್‌ಸಾಬ್‌ ಖುದಾವಂದ ಅವರಿಗೆ ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರಿಂದ ನಮನ.

 ಸರ್ಕಾರಿ ಗೌರವ

ಸರ್ಕಾರಿ ಗೌರವ

ಸಕಲ ಸರ್ಕಾರಿ ಗೌರವಗಳೊಂದಿದೆ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ನಾಗರಿಕರು ಮತ್ತು ಅಧಿಕಾರಿ ಸಮೂಹ.

ನೆಲಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದರು

ನೆಲಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದರು

ಜಮ್ಮು-ಕಾಶ್ಮೀರ ಗಡಿಭಾಗ ದಲ್ಲಿನ ಬೆಟಾಲಿಕ್‌ ಸೆಕ್ಟರ್‌ನಲ್ಲಿ ನಡೆದ ನೆಲಬಾಂಬ್‌ ಸ್ಫೋಟಕ್ಕೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಸೈದಾಪುರ ಗ್ರಾಮದವರಾದ ಬಿಎಸ್‌ಎಫ್ ಯೋಧ ಹಸನ್‌ಸಾಬ್‌ ಇಮಾಮ್‌ಸಾಬ್‌ ಖುದಾವಂದ (24), ಬೆಳಗಾವಿ ಜಿಲ್ಲೆ ಗೋಕಾಕದ ನಬಾಪುರ ಗ್ರಾಮದ ಯೋಧ ಸುಬೇದಾರ ಬಸವರಾಜ ಚನ್ನಪ್ಪ ಪಾಟೀಲ(45) ಸಾವನ್ನಪ್ಪಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Soldier Hasansab Khudavand last rites take place at Dharwad on Monday, August 1, 2016. Hasansab Khudavand killed near the Line of Control (LoC) in the Kargil sector on July 30, 2016.
Please Wait while comments are loading...