ಕೋಲಾರ : ಟೆಕ್ಕಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕೋಲಾರ, ಜೂ. 09 : ಸಾಫ್ಟ್ ವೇರ್ ಇಂಜಿನಿಯರ್‌ವೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಶ್ರೀನಿವಾಸಪುರ ತಾಲೂಕಿನ ಕಬಿರೇಲಾಗಡ್ಡ ಕೆರೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದವರನ್ನು ಚಿತ್ತೂರು ಜಿಲ್ಲೆ ತಂಬಾಲಪಲ್ಲಿ ತಾಲೂಕಿನ ನಿವಾಸಿ ಕೇಶವ ರೆಡ್ಡಿ (35) ಎಂದು ಗುರುತಿಸಲಾಗಿದೆ. ಕೇಶವ ರೆಡ್ಡಿ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿನ ಆಕ್ಟೀವ್ ಇಂಡಿಯಾ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಶಿಲ್ಪಾ ಎಂಬುವವರನ್ನು ವಿವಾಹವಾಗಿ ಬಾಣಸವಾಡಿಯಲ್ಲಿ ನೆಲೆಸಿದ್ದರು. [ಸಿಡ್ನಿಯಲ್ಲಿ ಟೆಕ್ಕಿ ಪಂಕಜ್ ಸಾವಿಗೆ ಏನು ಕಾರಣ?]

techie

ಸೋಮವಾರ ಸಂಜೆ ಕೇಶವ ರೆಡ್ಡಿ ಅವರು ಶವ ಮದನಪಲ್ಲಿ-ಬೆಂಗಳೂರು ರಸ್ತೆಯಲ್ಲಿನ ತಾಡಗೋಲ್ ಕ್ರಾಸ್ ಬಳಿಯ ಕಬಿರೇಲಾಗಡ್ಡ ಕೆರೆಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಹಿಂದೆ ಕೇಶವ ರೆಡ್ಡಿ ಅವರನ್ನು ಕೊಲೆ ಮಾಡಿ ಶವವನ್ನು ತಂದು ಕೆರೆಯಲ್ಲಿ ಬಿಸಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. [ಮದುವೆ ಮಂಟಪದಿಂದ ಸಾಫ್ಟ್ ವೇರ್ ವರ ಎಸ್ಕೇಪ್!]

ಶವವನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+