Kavya Gowda: ನಟಿ ಕಾವ್ಯಾ ಗೌಡಗೆ ಸಣ್ಣ ರಿಲೀಫ್, ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ತಡೆ

Kavya Gowda: ಕೌಟುಂಬಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯಾಗೌಡ ಹಾಗೂ ಅವರ ಪತಿ ಸೋಮಶೇಖರ್ ಅವರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯಗೌಡ ಹಾಗೂ ಸೋಮಶೇಖರ್ ಅವರ ಮೇಲೆ ಎಫ್‌ಐಆರ್ ಹಾಗೂ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಇನ್ನು ಈ ಪ್ರಕರಣದಲ್ಲಿ ಎಫ್‌ಐಆರ್‌ಗೆ ತಡೆ ನೀಡುವಂತೆ ಕೋರಿ ಕಾವ್ಯ ಗೌಡ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿ ಈ ಕುರಿತಂತೆ ಮಹತ್ವದ ಆದೇಶವನ್ನು ನೀಡಿದೆ. ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿರುವ ನ್ಯಾಯಪೀಠವು ಪೊಲೀಸರು ಹಾಗೂ ಪ್ರತಿವಾದಿ ಪ್ರೇಮಾ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಇನ್ನು ಈ ಪ್ರಕರಣದಲ್ಲಿ ದೂರು ಮತ್ತು ಪ್ರತಿ ದೂರು ಸಹ ದಾಖಲಾಗಿದೆ.

Kavya Gowda

ನ್ಯಾಯಪೀಠವು ಅರ್ಜಿದಾರರು ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ. ಇದು ತದ್ವಿರುದ್ಧವಾಗಿದೆ ಎಂದು ವಕೀಲರು ವಾದಿ ಮಂಡಿಸಿದ್ದಾರೆ. ಇನ್ನು ಜನವರಿ 26ರಂದು ನಡೆದ ಸಹೋದರರ ನಡುವಿನ ಜಗಳದಲ್ಲಿ ದೂರುದಾರರು ಅರ್ಜಿದಾರರ ಮೇಲೆ ಹಲ್ಲೆ ನಡೆಸಿದ್ದು, ಮಾತಿನಲ್ಲಿ ಪ್ರಾರಂಭವಾಗಿದ್ದ ಜಗಳವು ಇಬ್ಬರ ಮೇಲೆ ಹಲ್ಲೆಗೆ ಕಾರಣವಾಗಿತ್ತು. ಜನವರಿ 27 ರಂದು ದೂರುದಾರರ ವಿರುದ್ಧ ದಾಖಲಿಸಿದ ಅಪರಾಧದಲ್ಲಿ ಅರ್ಜಿದಾರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಕೀಲರು ಫೋಟೊಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದ್ದಾರೆ ಎಂದು ಹೇಳಿದೆ.

ಎರಡನೇ ಅರ್ಜಿದಾರರಾದ ಪತಿ ಸೋಮಶೇಖರ್‌ ಐಸಿಯುನಲ್ಲಿದ್ದರು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಅರ್ಜಿದಾರರು ದಾಖಲಿಸಿದ್ದ ದೂರಿಗೆ ಪ್ರತಿಯಾಗಿ ಈ ದೂರು ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಅರ್ಜಿದಾರರ ವಿರುದ್ಧದ ತನಿಖೆಗೆ ಮುಂದಿನ ವಿಚಾರಣೆಯನ್ನು ದಿನಾಂಕದವರೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗುವುದು ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ ಏನು ?

ಸೋಮಶೇಖರ್‌ ಎನ್ನುವವರನ್ನು ಕಾವ್ಯ ಗೌಡ ಮದುವೆಯಾಗಿದ್ದರು. ಸಹೋದರರಾದ ಸೋಮಶೇಖರ್‌ ಹಾಗೂ ನಂದೀಶ್‌ ಒಂದೇ ಮನೆಯಲ್ಲಿ ವಾಸವಿದ್ದರು. ಆದರೆ ನಂದೀಶ್‌ ಅವರ ಪತ್ನಿ ಪ್ರೇಮ ಹಾಗೂ ಕಾವ್ಯ ಗೌಡ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು ಎಂದು ಹೇಳಲಾಗಿದೆ. ಕಾವ್ಯಗೌಡ ಅವರ ಮಗಳನ್ನು ಆರೈಕೆ ಮಾಡಿಕೊಳ್ಳಲು ಇದ್ದ ಹುಡುಗಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿ, ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು ಎಂದು ಹೇಳಲಾಗಿತ್ತು.

ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್‌ ಮೇಲೆ ಕುಟುಂಬದ ಸದಸ್ಯರು ಕೌಟುಂಬಿಕ ಕಾರಣಕ್ಕೆ ಹಲ್ಲೆ ಆಗಿತ್ತು. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿ ದೂರು ದಾಖಲಾಗಿತ್ತು. ಸೋಮಶೇಖರ್ ಮತ್ತು ಅವರ ಅಣ್ಣ ನಂದೀಶ್‌ಕುಮಾರ್‌, ಕಲ್ಕೆರೆ ಬಳಿಯ ಎನ್‌ಆರ್‌ಐ ಲೇಔಟ್‌ನ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಆದರೆ ಕೌಟುಂಬಿಕ ಕಾರಣಕ್ಕೆ ಸೋಮಶೇಖರ್, ಕಾವ್ಯಾ ಗೌಡ ದಂಪತಿ ಹಾಗೂ ನಂದೀಶ್‌ಕುಮಾರ್, ಪ್ರೇಮಾ ದಂಪತಿ ನಡುವೆ ಜಗಳವಾಗಿತ್ತು. ಬಳಿಕ ಕಾವ್ಯಾ ಗೌಡ ಮತ್ತು ಪ್ರೇಮಾ ಪ್ರತ್ಯೇಕ ದೂರು ದಾಖಲಿಸಿದ್ದರು. ದೂರು ಹಾಗೂ ಪ್ರತಿ ದೂರು ದಾಖಲಿಸಿಕೊಂಡು ಎರಡೂ ಕಡೆಯವರನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+