ಎಸ್.ಕೆ.ಮುಖರ್ಜಿ ಕರ್ನಾಟಕ ಹೈಕೋರ್ಟ್ ನೂತನ ಸಿಜೆ
ಬೆಂಗಳೂರು, ಜೂ. 25 : ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುಭ್ರೋ ಕಮಲ್ ಮುಖರ್ಜಿ ಅವರನ್ನು ಕಾಯಂಗೊಳಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಜೂನ್ 1ರಿಂದ ಎಸ್.ಕೆ.ಮುಖರ್ಜಿ ಅವರು ಹಂಗಾಮಿ ಸಿಜೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ಎಚ್.ವಘೇಲಾ ಅವರನ್ನು ಒಡಿಸ್ಸಾ ಹೈಕೋರ್ಟ್ ಸಿಜೆಯಾಗಿ ವರ್ಗಾವಣೆ ಮಾಡಲಾಗಿತ್ತು. ನಂತರ ಎಸ್.ಕೆ.ಮುಖರ್ಜಿ ಅವರನ್ನು ಹಂಗಾಮಿ ಸಿಜೆಯಾಗಿ ನೇಮಿಸಲಾಗಿತ್ತು. ಬುಧವಾರ ಕಾಯಂಗೊಳಿಸಿ ಆದೇಶ ಹೊರಡಿಸಲಾಗಿದೆ. [ಬೆಂಗಳೂರು-ಮಂಗಳೂರು ನಡುವೆ ಹೆಚ್ಚು ರೈಲು ಓಡಿಸಿ]

ಸೇವಾ ಹಿರಿತನ ಪರಿಗಣಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಎಸ್.ಕೆ.ಮುಖರ್ಜಿ ಅವರನ್ನು ಕಾಯಂ ಸಿಜೆಯನ್ನಾಗಿ ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಮುಖರ್ಜಿ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಏ.15ರಂದು ಪ್ರಮಾಣವಚನ ಸ್ವೀಕರಿಸಿದ್ದರು.
1955ರ ಅಕ್ಟೋಬರ್ 10ರಂದು ಜನಿಸಿದ ಎಸ್.ಕೆ.ಮುಖರ್ಜಿ ಅವರು ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂಎ ಮತ್ತು ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 1982ರಲ್ಲಿ ಮುಖರ್ಜಿ ಅವರು ವಕೀಲರಾಗಿ ವೃತ್ತಿ ಆರಂಭಿಸಿದರು.

2000ದಿಂದ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಎಸ್.ಕೆ.ಮುಖರ್ಜಿ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಏ.15ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಅವರು, ಜೂನ್ 1ರಿಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.












Click it and Unblock the Notifications