ಮತದಾರರ ಪಟ್ಟಿ ಪರಿಷ್ಕರಣೆ; ಮನೆ-ಮನೆಗೆ ಉಚಿತ ಜಾತಿ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸುಲಭಗೊಳಿಸಲು ರಾಜ್ಯ ಸರ್ಕಾರವು ಸಾರ್ವಜನಿಕರಿಗೆ 4.8 ಕೋಟಿಗೂ ಹೆಚ್ಚು ಉಚಿತ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲು ಮುಂದಾಗಿದೆ.

ಈ ಕುರಿತು ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಮೊಬೈಲ್ ಆ್ಯಪ್, ಎಸ್‌ಎಂಎಸ್ ಹಾಗೂ ವಾಟ್ಸಾಪ್ ಲಿಂಕ್ ಮೂಲಕ ಮನೆ ಮನೆಗೆ ಪಾರದರ್ಶಕವಾಗಿ ಪ್ರಮಾಣಪತ್ರ ತಲುಪಿಸಲು ಸಿದ್ಧತೆ ನಡೆಸಿದೆ. ಉಚಿತವಾಗಿ ಜಾತಿ ಪ್ರಮಾಣಪತ್ರ ವಿತರಣೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ, ರಾಜ್ಯಾದ್ಯಂತ ಸುಮಾರು 4.8 ಕೋಟಿಗೂ ಹೆಚ್ಚು ಉಚಿತ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ.

SIR

ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ನಡೆಸಲಾಗುತ್ತಿದೆ. ಸದರಿ ಪರಿಷ್ಕರಣೆಯ ಅನುಸಾರ ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರು ಹಾಗೂ ಸಂಬಂಧಪಟ್ಟ ಕುಟುಂಬ ಸದಸ್ಯರ ವಿವರಗಳು ಲಭ್ಯವಿಲ್ಲದಿದ್ದಲ್ಲಿ ಅಥವಾ ಡೇಟಾಬೇಸ್‌ನಲ್ಲಿರುವ ಮಾಹಿತಿಯೊಂದಿಗೆ ತಾಳೆಯಾಗದಿದ್ದಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸಲು ಅಥವಾ ಅರ್ಹತೆಯನ್ನು ಸಾಬೀತುಪಡಿಸಲು ಚುನಾವಣಾ ಆಯೋಗವು ಸೂಚಿಸಿರುವ 11 ದಾಖಲೆಗಳನ್ನು ಸಾರ್ವಜನಿಕರು ಒದಗಿಸಬೇಕಾಗಿರುತ್ತದೆ.

ಈ ಅಗತ್ಯ 11 ದಾಖಲೆಗಳ ಪೈಕಿ ಒಂದಾದ ಜಾತಿ ಪ್ರಮಾಣ ಪತ್ರವನ್ನು ಉಚಿತವಾಗಿ ಮನೆ-ಮನೆಗೆ ತಲುಪಿಸುವುದು ಹಾಗೂ ಸರ್ಕಾರದ ದಾಖಲೆಗಳಲ್ಲಿ ಲಭ್ಯವಿರುವ ದೂರವಾಣಿ ಸಂಖ್ಯೆಗಳಿಗೆ ಡೌನ್‌ಲೋಡ್ ಲಿಂಕ್ ಅನ್ನು SMS ಮತ್ತು Whatsapp ಮೂಲಕ ಕಳುಹಿಸುವ ಕಾರ್ಯವನ್ನು ಕೈಗೊಳ್ಳಲು ಹಾಗೂ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಯನ್ನು ಆರಂಭಿಸಿ ಆದ್ಯತೆಯ ಮೇರೆಗೆ ಸಾರ್ವಜನಿಕರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರಗಳನ್ನು ನೀಡುವಂತೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿರುತ್ತದೆ ಹಾಗೂ ಸರ್ಕಾರವು ದಿನಾಂಕ:20-07-2026 ರಂದು ಮನೆಮನೆಗೆ ಜಾತಿ ಪ್ರಮಾಣ ಪತ್ರವನ್ನು ವಿತರಣೆ ಮಾಡುವ ಅಭಿಯಾನವನ್ನು ಹಾಗೂ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಯನ್ನು ಆರಂಭಿಸಿರುತ್ತದೆ.

* ರಾಜ್ಯದ ಕಂದಾಯ ಇಲಾಖೆಯ ಡಾಟಾ ಬೇಸ್ ಮಾಹಿತಿಯಂತೆ ಒಟ್ಟು 4.81 ಕೋಟಿ ಜಾತಿ ಪ್ರಮಾಣ ಪತ್ರಗಳ PDF ನ್ನು ಜಿಲ್ಲಾವಾರು/ತಾಲ್ಲೂಕುವಾರು/ಗ್ರಾಮವಾರು ವಿಂಗಡಣೆ ಮಾಡಿ, ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದಿಂದ ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ. ಸದರಿ ಪ್ರಮಾಣ ಪತ್ರಗಳನ್ನು ಸೂಕ್ತ ಮುದ್ರಣಾಲಯದಿಂದ ತಮ್ಮ ಹಂತದಲ್ಲಿಯೇ ತಾಲ್ಲೂಕು ಅಥವಾ ಹೋಬಳಿವಾರು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆ 1999 ರನ್ವಯ ಮುದ್ರಣ ಮಾಡಲು ಕ್ರಮ ಕೈಗೊಳ್ಳುವುದು.

* ಈ ಜಾತಿ ಪ್ರಮಾಣ ಪತ್ರದೊಂದಿಗೆ, ಮುಖ್ಯಮಂತ್ರಿಯವರು ನೀಡಲಾಗಿರುವ ಜಾಗೃತಿ ಸಂದೇಶವನ್ನು (colour print) ಹಾಗೂ ಸಂದೇಶದ ಹಿಂಭಾಗದಲ್ಲಿರುವ ದಾಖಲಾತಿಗಳ ಪಟ್ಟಿಯನ್ನು (black and white print) ಸಹ ಮುದ್ರಿಸಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವುದು.

* ಮೇಲೆ ಸೂಚಿರುವ ಮೂರು ಪ್ರತಿಗಳಿಗೆ ಸೇರಿ ರೂ.2.25 ಗಳನ್ನು ಮೀರದಂತೆ ದರ ನಿಗಧಿಪಡಿಸಿ ಮುದ್ರಣ ಕಾರ್ಯವನ್ನು ಕೈಗೊಳ್ಳವುದು.

* ಸಾರ್ವಜನಿಕರಿಗೆ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಿದ ನಂತರ, ಸ್ವೀಕೃತಿಯನ್ನು ಪಡೆಯಲು App ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಸದರಿ APP ನಲ್ಲಿ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ನಮೂದಿಸುವ ಮೂಲಕ ಜಾತಿ ಪ್ರಮಾಣ ಪತ್ರವನ್ನು ವಿತರಿಸಿರುವ ಬಗ್ಗೆ ಮಾಹಿತಿಯನ್ನು ಒದಗಿಸುವುದು ಎಂದು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+