ರೋಹಿಣಿ ಸಿಂಧೂರಿ ವಿರುದ್ಧ ಕೊಲೆ ಆರೋಪ ಮಾಡಿದ ಗಾಯಕ ಲಕ್ಕಿ ಅಲಿ, ಪ್ರಕರಣವೇನು ತಿಳಿಯಿರಿ

ಬೆಂಗಳೂರು, ಅಕ್ಟೋಬರ್‌ 05: ಬೆಂಗಳೂರಿನಲ್ಲಿ ದೀರ್ಘಕಾಲದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಬೆಂಗಳೂರಿನ ಭೂಮಾಫಿಯಾ ತನ್ನನ್ನು ಕೊಲ್ಲಲು ಯತ್ನಿಸುತ್ತಿದೆ ಎಂದು ಗಾಯಕ ಲಕ್ಕಿ ಅಲಿ ಆರೋಪಿಸಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಅವರ ಐಎಎಸ್ ಪತಿ ಸುಧೀರ್ ರೆಡ್ಡಿ ಕೂಡ ಭೂ ಮಾಫಿಯಾದೊಂದಿಗೆ ಕೈಜೋಡಿಸಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಕೆಂಚೇನಹಳ್ಳಿ ಯಲಹಂಕ ಬಳಿ ತಮ್ಮ ಜಮೀನನ್ನು ಭೂಮಾಫಿಯಾ ಅಕ್ರಮವಾಗಿ ಒತ್ತುವರಿ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಲಿ ಆರೋಪಿಸಿ ಪೋಸ್ಟ್ ಮಾಡಿದ್ದಾರೆ.

accused-rohini-sindhuri-of-murder

ಕೆಂಚೇನಹಳ್ಳಿ ಯಲಹಂಕದಲ್ಲಿರುವ ಟ್ರಸ್ಟ್ ಆಸ್ತಿಯಾಗಿರುವ ನನ್ನ ಜಮೀನನ್ನು ಬೆಂಗಳೂರು ಲ್ಯಾಂಡ್ ಮಾಫಿಯಾದಿಂದ ಸುಧೀರ್ ರೆಡ್ಡಿ (ಮತ್ತು ಮಧು ರೆಡ್ಡಿ) ಅಕ್ರಮವಾಗಿ ಒತ್ತುವರಿ ಮಾಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಎಂಬ ಐಎಎಸ್ ಅಧಿಕಾರಿಯಾಗಿರುವ ಪತ್ನಿಯ ನೆರವಿನಿಂದ ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಭೂಮಾಫಿಯಾ ಬಲವಂತವಾಗಿ ಮತ್ತು ಅಕ್ರಮವಾಗಿ ನನ್ನ ಜಮೀನಿನನ್ನು ಅತಿಕ್ರಮಿಸುತ್ತಿದ್ದಾರೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ನಿರಾಕರಿಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ನನ್ನ ಕಾನೂನು ಸಲಹೆಗಾರರು ನನಗೆ ತಿಳಿಸುತ್ತಿದ್ದಾರೆ. ಆದರೆ ನಾವು ಆಸ್ತಿಯೊಳಗೆ ಬರಲು ನ್ಯಾಯಾಲಯದ ಆದೇಶವನ್ನು ಹೊಂದಿಲ್ಲ ಮತ್ತು ನಾವು ಸ್ವಾಧೀನಪಡಿಸಿಕೊಂಡಿದ್ದೇವೆ. ಕಳೆದ 50 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದೇವೆ ಎಂದು ಲಕ್ಕಿ ಅಲಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅಲಿ ಅವರು ದಯಾನಂದ ಪೈ, ಸತೀಶ್ ಪೈ, ಅಶ್ವಿನ್ ಪೈ, ಪಾವಿ ಪೈ ಮತ್ತು ಸೆಂಚುರಿ ಬಿಲ್ಡರ್‌ಗಳಾದ ಶೆಣೈ ರಘುನಾಥ್ ಮತ್ತು ಇತರ ಕೆಲವು ವ್ಯಕ್ತಿಗಳು ಸ್ಥಳೀಯ ರೌಡಿಗಳಾದ ಆಸಿಫ್ ಇಕ್ಬಾಲ್ ಅವರನ್ನು ತನ್ನ ಮೇಲೆ ದಾಳಿ ನಡೆಸಲು ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭೂ ವಿವಾದ 1990ರ ದಶಕದಿಂದಲೂ ಇದೆ. ಗಾಯಕ ಲಕ್ಕಿ ಅಲಿ ಅವರ ತಂದೆ ಮೊಹಮ್ಮದ್‌ ಅಲಿ ಅವರು 1969 ರಲ್ಲಿ 400 ಎಕರೆ ಭೂಮಿಯನ್ನು ಖರೀದಿಸಿದ್ದರು. 400 ಎಕರೆಯಲ್ಲಿ 220 ಎಕರೆ ಭೂಮಿಯನ್ನು ಹಲವು ವರ್ಷಗಳಲ್ಲಿ ವಿವಿಧ ತೊಡಕುಗಳಿಂದ ಕಳೆದುಕೊಂಡಿತು. ಉಳಿದ 160 ಎಕರೆ ಭೂಮಿಯನ್ನು ಮೊಹಮ್ಮದ್‌ ಅಲಿ ಅವರ ಆರು ಮಕ್ಕಳಿಗೆ ಟ್ರಸ್ಟ್ ರಚಿಸುವ ಮೂಲಕ ವರ್ಗಾಯಿಸಿದರು. 1991ರಲ್ಲಿ, ಮೊಹಮ್ಮದ್‌ ಅಲಿ ಒಡೆತನದ ಸಂಪೂರ್ಣ ಭೂಮಿಯನ್ನು ಎರಡು ವಿಭಿನ್ನ ರೀಲರ್‌ಗಳಿಗೆ ಮಾರಾಟ ಮಾಡಲಾಯಿತು. ಇದು ಕಾನೂನು ವಿವಾದಗಳಿಗೆ ಕಾರಣವಾಯಿತು.

ಈ ಸಂಬಂಧ ವಕೀಲರು ಮೊಹಮ್ಮದ್‌ ಅಲಿ ಅವರಿಗೆ ಇರುವ ಅನಾರೋಗ್ಯದ ಲಾಭವನ್ನು ಭೂಮಾಫಿಯಾದವರು ಪಡೆದುಕೊಂಡಿದ್ದು ಜಮೀನು ವ್ಯವಹಾರಗಳು ಮತ್ತು ದಾಖಲೆಗಳನ್ನು ತಿರುಚಿದ್ದಾರೆ. ಇದರಿಂದ ವಿವಾದ ಉಂಟಾಗಿದೆ. ಲಕ್ಕಿ ಅಲಿ ಅವರ ಕುಟುಂಬ ಮತ್ತು ಮಕ್ಕಳು ಕೆಂಚೇನಹಳ್ಳಿ ಯಲಹಂಕದಲ್ಲಿರುವ ಜಮೀನಿನಲ್ಲಿ ವಾಸವಾಗಿದ್ದಾರೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+