Land Acquisition: ರೈತರಿಗೆ ಭರ್ಜರಿ ಆಫರ್: ಜಮೀನು ಬಿಟ್ಟುಕೊಟ್ಟರೆ 1 ಎಕ್ರೆಗೆ ಕೋಟ್ಯಂತರ ರೂ ಪರಿಹಾರಕ್ಕೆ ಶಿಫಾರಸು

ಬೆಂಗಳೂರು: ಕರ್ನಾಟಕ ಬೃಹತ್ ಮತ್ತು ಮಧ್ಯ ಕೈಗಾರಿಕೆ ಇಲಾಖೆ ಕೈಗೊಂಡ ಕ್ರಮಗಳಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅನೇಕ ಹೂಡಿಕೆಗಳು ಬಂದಿವೆ. ಕೈಗಾರಿಕಾ ಸ್ನೇಹಿ ನೀತಿಯಿಂದಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಅತ್ಯಧಿಕ ವಿದೇಶಿ ಕಂಪನಿಗಳು ಕೈಗಾರಿಕೆಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಈ ಸಂಬಂಧ ಭೂಮಿ ನೀಡುವ ರೈತರಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಭರ್ಜರಿ ಆಫರ್ ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದಲ್ಲಿ ಕೈಗಾರಿಕಾ 120 ಎಕರೆ ಜಮೀನು ಅಗತ್ಯವಿತ್ತು. ಇಷ್ಟು ಜಮೀನು ಬಿಟ್ಟು ಕೊಡಲು ರೈತರು ಸ್ವಯಂಪ್ರೇರಿತವಾಗಿ ಒಪ್ಪಿದ್ದಾರೆ ಎಂದು ಕೈಗಾರಿಕೆ ಇಲಾಖೆ ತಿಳಿಸದೆ. ಆದರೆ ಆ ರೈತರಿಗೆ ಪ್ರತಿ ಎಕ್ರೆಗೆ ಇಂತಿಷ್ಟು ಪರಿಹಾರ ಎಂಬುದು ಈಗ ನಿರ್ಧಾರವಾಗಿದೆ. ಲಭ್ಯ 120 ಎಕರೆ ಜಮೀನಿಗೆ ಪ್ರತೀ ಎಕರೆಗೆ 2.70 ಕೋಟಿ ರೂ. ಪರಿಹಾರವನ್ನು ಭೂದರ ನಿರ್ಧಾರಣಾ ಸಲಹಾ ಸಮಿತಿ ನಿಗದಿಪಡಿಸಿ KIADB ಶಿಫಾರಸು ಮಾಡಿದೆ.

Devanahalli Landowners

ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಎ.ಎನ್.ರಘುನಂದನ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿನ ಅರವಿಂದ ಭವನದಲ್ಲಿ ನಡೆದ ಅಧಿಕಾರಿಗಳು ಹಾಗೂ ಭೂಮಾಲೀಕರ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ತೀರ್ಮಾನವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (KIADB) ಅನುಮೋದನೆಗಾಗಿ ಕಳಿಸಿ ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

'2006ರ ಬಿಡದಿ ಟೌನ್‌ಶಿಪ್ ಫೈಲ್' ತೆರೆದ ರಾಮಲಿಂಗಾ ರೆಡ್ಡಿ: ಬಿಜೆಪಿ-ಜೆಡಿಎಸ್ ಆರೋಪಗಳಿಗೆ ಹೊಸ ಟ್ವಿಸ್ಟ್‌
'2006ರ ಬಿಡದಿ ಟೌನ್‌ಶಿಪ್ ಫೈಲ್' ತೆರೆದ ರಾಮಲಿಂಗಾ ರೆಡ್ಡಿ: ಬಿಜೆಪಿ-ಜೆಡಿಎಸ್ ಆರೋಪಗಳಿಗೆ ಹೊಸ ಟ್ವಿಸ್ಟ್‌

ಹಣಕ್ಕೆ ಬದಲಾಗಿ ಬಡಾವಣೆಯಲ್ಲಿ ಜಾಗ

ಇನ್ನೂ ರೈತರು ಸದರಿ ಜಮೀನುಗಳ ಪರಿಹಾರವನ್ನು ಹಣದ ರೂಪದಲ್ಲಿ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಪ್ರತೀ ಎಕರೆ ಕೃಷಿ ಜಮೀನಿಗೆ ಅಭಿವೃದ್ಧಿ ಪಡಿಸಿದ ಕೈಗಾರಿಕಾ ಬಡಾವಣೆಯಲ್ಲಿ 10,781 ಚದರ ಅಡಿ ಜಾಗವನ್ನು ಪಡೆದುಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ರಘುನಂದನ್ ವಿವರಿಸಿದ್ದಾರೆ.

ಈ ಜಮೀನುಗಳನ್ನು ರೈತರು ತಾವಾಗಿಯೇ ಬಿಟ್ಟುಕೊಡುತ್ತಿದ್ದಾರೆ. ಈ ಸಂಬಂಧ ಕೆಐಎಡಿಬಿ ಕಾಯ್ದೆಯನುಸಾರ ಇದೇ ತಿಂಗಳ 16ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಈಗ ನಿಗದಿಪಡಿಸಿರುವ ಪರಿಹಾರ ದರವು ದೇವನಹಳ್ಳಿ ಭಾಗದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಸಂತ್ರಸ್ತ ರೈತರಿಗೆ ನ್ಯಾಯಯತ ಪರಿಹಾರ ಕೊಡಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದು ಅವರು ಹೇಳಿದರು.

ಬಿಡದಿ ಯೋಜನೆ: ರೈತರ ಜಮೀನು ಭೂಸ್ವಾಧೀನ...

ಇಪ್ಪತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ ಶಿಫ್ ಯೋಜನೆಗೆ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಅಭಿವೃದ್ಧಿ ಯೋಜನೆ) ಅಗತ್ಯವಾಗಿರುವ 7282 ಎಕ್ರೆ ಜಮೀನು ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದ್ದಂತೆ ಈವರೆಗೆ ನಡೆಯುತ್ತಿದ್ದ ರೈತರ ಪ್ರತಿಭಟನೆಗಳು ತೀವ್ರ ಸ್ವರೂಪ ತಾಳಿದವು. ವಿಪಕ್ಷ ನಾಯಕರಿಂದ ಪಾದಯಾತ್ರೆ, ಆಕ್ಷೇಪ, ಆರೋಪಗಳು ಹೆಚ್ಚಾಗಿವೆ. ಈ ನಡುವೆ ಯೋಜನೆ ಭೂಮಿ ನೀಡಲು ಒಪ್ಪಿದವರಿಗೆ ಮೊದಲ ಹಂತದಲ್ಲಿ ಸ್ಥಳೀಯ ಶಾಸಕರಿಂದ ಸರ್ಕಾರ ಪರಿಹಾರ ಸಹ ವಿತರಣೆ ಮಾಡಿದೆ.

ಸದ್ಯ ಈ ಯೋಜನೆ ಸಾಕಷ್ಟು ವಿಚಾರಗಳಿಂದ ಸದ್ದು ಮಾಡುತ್ತಿದೆ. ಎಚ್‌ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರ ಸಮ್ಮುಖದಲ್ಲಿ ಘೋಷಣೆ ಆದ ಯೋಜನೆ, ಈಗ ಕಾಂಗ್ರೆಸ್ ಅನುಷ್ಠಾನಕ್ಕೆ ತಂದರೆ ತಪ್ಪೇನು ಎಂಬ ವಾದ ಸರ್ಕಾರ ಇಟ್ಟಿದೆ. ಜನಸಂಖ್ಯೆ ಹೆಚ್ಚುತ್ತಿರುವ ಬೆಂಗಳೂರನ್ನು ವಿಸ್ತರಣೆ ಮಾಡುವ ಅಗತ್ಯತೆ, ಅನಿವಾರ್ಯತೆ ಇದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಯೋಜನೆಗೆ ವಿರೋಧ ಹೆಚ್ಚುತ್ತಿದ್ದು, ಭೂಸ್ವಾಧೀನ ಹಂತಗಳೂ ಎಲ್ಲಿವರೆಗೆ ನಡೆಯಲಿವೆ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+