ಬೊಮ್ಮಾಯುಲ್ಲಾ ಖಾನ್, ಜಬ್ಬಾರ್ ಖಾನ್, ಮಹಮದ್ ಗಡ್ಕರಿ ಶೇಕ್ ಎನ್ನಬಹುದೇ?: ಕಾಂಗ್ರೆಸ್‌ ಟಾಂಗ್

ಬೆಂಗಳೂರು, ಡಿಸೆಂಬರ್ 07: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾಖಾನ್ ಎಂದಿದ್ದ ಬಿಜೆಪಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ತಿರುಗೇಟು ನೀಡಿದೆ. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರ ಹೆಸರು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದೆ.

ಬಿಜೆಪಿ ಸರಣಿ ಟ್ವಿಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ನಿಮ್ಮ ಹಲವು ನಾಯಕರಿಗೆ ​​ಈ ಹೆಸರಿಂದ ಕರೆಯಬಹುದೇ? ಎಂದು ಪ್ರಶ್ನಿಸಿದೆ. ಮುಖ್ಯಮಂತ್ರಿ ಬಸವರಾಜ್ ಬೊಯ್ಮಾಯಿಗೆ 'ಬೊಮ್ಮಾಯುಲ್ಲಾ ಖಾನ್' ಎನ್ನಬಹುದೇ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ 'ಜಬ್ಬಾರ್ ಖಾನ್', ಕಂದಾಯ ಸಚಿವ ಆರ್‌.ಅಶೋಕ್ 'ಅಶ್ವಾಖ್ ಇನಾಯತ್ ಖಾನ್' ಎಂದು ಹೆಸರಿಡುತ್ತೀರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರು ಟ್ಯಾಗ್ ಮಾಡಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ 'ಮಹಮದ್ ಗಡ್ಕರಿ ಶೇಕ್' ಎಂದು ಹೆಸರಿಡುವಿರಾ? ಎಂದು ಟ್ವೀಟ್​ ಮೂಲಕ ಕಾಂಗ್ರೆಸ್‌ ತಿರುಗೇಟು ನೀಡಿದೆ. ಏಕೆಂದರೆ ಈ ಎಲ್ಲ ಬಿಜೆಪಿ ನಾಯಕರು ಈ ಹಿಂದೆ ಯಾವಾಗಲೋ ಮುಸ್ಲಿಮರ ಟೋಪಿ, ಟಿಪ್ಪು ಪೇಟಾ ಧರಿಸಿರುವ ಫೋಟೊವನ್ನು ಕರ್ನಾಟಕ ಕಾಂಗ್ರೆಸ್ ಹಂಚಿಕೊಂಡಿದೆ.

 Siddaramulla Khan War In Between BJP Congress, KPCC Hit Back To BJP

ಇತ್ತೀಚೆಗಷ್ಟೇ ಸಿಟಿ ರವಿ ಅವರು ಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಕಾಂಗ್ರೆಸ್ ಗೆ ಉರಿ ಹತ್ತಿಕೊಂಡಿದೆ ಎಂದು ಟೀಕಿಸಿದ್ದರು.

ಇದೇ ವಿಚಾರವಾಗಿ ಬಿಜೆಪಿ ಸಹ ಟ್ವಿಟ್ ಮಾಡಿ ಸಿದ್ರಾಮುಲ್ಲಾ ಖಾನ್ ಎನ್ನುವ ಜೊತೆಗೆ ಅದಕ್ಕೆ ಸಮರ್ಥನೆ ನೀಡಿತ್ತು. ಇದೀಗ ತಿರುಗೇಟು ನೀಡುವ ಮೂಲಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಟ್ವಿಟ್ ವಾರ್ ಮುಂದುವರಿಸಿದೆ.

ರೌಡಿಗಳ ಜತೆಗಿನ ನಂಟು ಜಗ್ಗಜ್ಜಾಹೀರು

ಬಿಜೆಪಿ ರೌಡಿ ಮೋರ್ಚಾದ ಪಟ್ಟಿ ಬೆಳೆಯುತ್ತಲೇ ಇದೆ. ಒಂಟೆ ರೋಹಿತ್, ಮಾರ್ಕೆಟ್ ವೇಡಿ ಎಂಬ ರೌಡಿ ಶೀಟರ್‌ಗಳೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್. ಅಶ್ವಥ್ ನಾರಾಯಣ್ ಗೆಳೆತನ ಜಗಜ್ಜಾಹೀರಾಗಿದೆ. ಬಿಜೆಪಿಯ ರೌಡಿ ಮೋರ್ಚಾ ಬಹು ದೊಡ್ಡದಾಗಿ ರೂಪುಗೊಳ್ಳುತ್ತಿದೆ. ರೌಡಿಗಳಿಗೆಲ್ಲ ಬಿಜೆಪಿಯೇ ಅಚ್ಚುಮೆಚ್ಚಿನ ಪಕ್ಷವಾಗಿದೆ, ಮತ್ತೊಬ್ಬ ಮಾಜಿ ರೌಡಿ ಶೀಟರ್ ಜಗದೀಶ್ ಚೌಧರಿಗೆ ಬಿಜೆಪಿ ಕೆಂಪು ಹಾಸು ಹಾಕಿ ಕರೆಯುತ್ತಿದೆ ಎಂದು ಬಿಜೆಪಿ ನಾಯಕರು ರೌಡಿ ಶೀಟರ್‌ ಜತೆಗಿನ ಫೋಟೋಗಳನ್ನು ಕಾಂಗ್ರೆಸ್‌ ಹಂಚಿಕೊಂಡು ಬಿಜೆಪಿಯ ಕಾಲೆಳೆದಿದೆ.

 Siddaramulla Khan War In Between BJP Congress, KPCC Hit Back To BJP

ರೌಡಿಗಳಿಂದ ಬೆದರಿಸಿ ಮತ ಪಡೆಯಲು ಬಿಜೆಪಿ ಸಜ್ಜು?

ಬಿಜೆಪಿಯು ಸದ್ದಿಲ್ಲದೆ ರೌಡಿ ಶೀಟರ್ ಮಾರ್ಕೆಟ್ ವೇಡಿ ಬಿಜೆಪಿ ಸೇರಿದ್ದು, ರೌಡಿ ರಾಜಕಾರಣ ಶುರುವಾಗುತ್ತಿದೆ.

ದುಷ್ಟ ಆಡಳಿತದಿಂದಾಗಿ ಮತದಾರರನ್ನು ಓಲೈಸಿ ಮತ ಪಡೆಯಲು ಅಸಾಧ್ಯವೆಂದು ಅರಿತ ಬಿಜೆಪಿಯು ರೌಡಿ ಮೋರ್ಚಾ ಕಟ್ಟಿಕೊಂಡು ಬೆದರಿಸಿ ಮತ ಪಡೆಯಲು ಸಿದ್ಧವಾಗುತ್ತಿದೆ. ರಾಮರಾಜ್ಯ ಮಾಡುತ್ತೇವೆ ಎಂದವರು ರೌಡಿರಾಜ್ಯ ಮಾಡುತ್ತಿದ್ದಾರೆ. ದೊಣ್ಣೆ ಹಿಡಿದು ಜನರನ್ನು ಬೆದರಿಸುತ್ತಿದ್ದ ಆರ್‌ಎಸ್‌ಎಸ್ ಈಗ ಲಾಂಗು, ಮಚ್ಚು ಹಿಡಿದು ಸಂಸ್ಕೃತಿ ರಕ್ಷಣೆಗೆ ಮುಂದಾಗಿದೆಯೇ?. ರೌಡಿ ಮೋರ್ಚಾ ತೆರೆಯುವಂತೆ ಬಿಜೆಪಿಗೆ ಆರ್‌ಎಸ್‌ಎಸ್‌ ಅದೇಶಿಸಿದೆಯೇ? ಎಂದು ಕಾಂಗ್ರೆಸ್‌ ಪ್ರಹಾರ ನಡೆಸಿದೆ. ರೌಡಿಗಳಿಗೂ, ಬಿಜೆಪಿ ಕೆಲ ನಾಯಕರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+