ಸಿದ್ದರಾಮಯ್ಯ ಬಿಜೆಪಿ ಸೇರಲು ರೆಡಿಯಾಗಿದ್ರು; ಯಾವಾಗ ಗೊತ್ತಾ? ಜಿ ಟಿ ದೇವೇಗೌಡ ಹೊಸ ಬಾಂಬ್
ಬೆಂಗಳೂರು, ಸೆಪ್ಟೆಂಬರ್ 08: 2006 ರಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷ ಸೇರ್ಪಡೆಗೆ ರೆಡಿಯಾಗಿದ್ದರು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು, 2006 ರಂದು ಉಪಚುನಾವಣೆ ನಂತರ ವಿರೋಧ ಪಕ್ಷದ ನಾಯಕ ಮಾಡದಿದ್ರೆ ಬಿಜೆಪಿ ಸೇರ್ತಿದ್ರು. ಅದಕ್ಕಾಗಿಯೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆಗೆ ಕಾಗಿನೆಲೆಯಿಂದ ಸುತ್ತೂರಿ ಮಠಕ್ಕೆ ಬಂದಿದ್ರು ಎಂದು ಜಿ ಟಿ ದೇವೇಗೌಡರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನ ಸೀಮೆ ಎಣ್ಣೆ ಪಾರ್ಟಿ ಎಂದಿದ್ರು, ಬಿಜೆಪಿ ಸೇರುವ ಕುರಿತು ಮೋದಿ ಅವರ ಜೊತೆಗೆ ಮಾತನಾಡಿದ್ರು. ವಿರೋಧ ಪಕ್ಷದ ಸ್ಥಾನ ನೀಡದಿದ್ರೆ 100% ಸಿದ್ದರಾಮಯ್ಯ ಬಿಜೆಪಿಗೆ ಹೋಗುತ್ತಿದ್ರು. ರಾಜಕಾರಣದಲ್ಲಿ ಯಾವುದು ಶಾಶ್ವತವನ್ನ ಆದರೆ, ಕಾಂಗ್ರೆಸ್ ನವರಗೆ ಅಧಿಕಾರ ಶಾಶ್ವರ ಎಂದು ಕೊಂಡಿದ್ದಾರೆ. ಇನ್ನೂ ಯಡಿಯೂರಪ್ಪ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸಂಬಂಧ ಉತ್ತಮವಾಗಿದೆ ಎಂದು ಹೇಳಿದರು.
ಬಿಜೆಪಿಯನ್ನ ವಿರೋಧ ಮಾಡುತ್ತಾ ರಾಜಕಾರಣ ಮಾಡಿದರು, ನಾವು ಪೂರ್ಣ ಮನಸ್ಸಿನಿಂದ ಒಂದಾದ್ರೆ 25 ಕ್ಕೂ ಹೆಚ್ಚು ಸ್ಥಾನವನ್ನ ಗೆಲ್ಲುತ್ತೇವೆ, ಕಾಂಗ್ರೆಸ್ ಪಕ್ಷವನ್ನ ಮೂರನೇ ಸ್ಥಾನಕ್ಕೆ ಉಳಿಸಬಹುದು. ಅಭ್ಯರ್ಥಿಗಳು ಯಾರು ಸಮರ್ಥರಿದ್ದಾರೆ ಎಂಬುದನ್ನ ಅಳೆದು ತೂಗಿ ಟಿಕೆಟ್ ಕೊಡಬೇಕು ಆಗ 25 ಕ್ಕೂಹೆಚ್ಚು ಸ್ಥಾನವನ್ನ ಬಿಜೆಪಿ ಹಾಗೂ ಜೆಡಿಎಸ್ ಗೆಲ್ಲುತ್ತದೆ ಎಂದು ಹೇಳಿದರು.
ನಾವು ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ಸೋಲಿಸಲೇ ಬೇಕು ಎಂಬುದು ನಮ್ಮ ಗುರಿ. ಬಿಜೆಪಿ ನಮ್ಮ ಶಕ್ತಿ ಬೇಕು, ನಮಗೆ ಬಿಜೆಪಿ ಶಕ್ತಿ ಬೇಕು. ಮುಕ್ತ ಮನಸ್ಸಿನಿಂದ ಹೋಗಿ ಕಾಂಗ್ರೆಸ್ ಪಕ್ಷವನ್ನ ಸೋಲಿಸಬೇಕು ಎಂದು ತಿಳಿಸಿದರು.
ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಎಫ್ಐಆರ್ ಹಾಕಿಸುತ್ತಿದ್ದಾರೆ. ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತಿಲ್ಲ, ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಸೋಲಿಸಬೇಕು. ಇದೇ ಕಾರಣಕ್ಕೆ ಬಿಜೆಪಿ ಜೊತೆ ಮೈತ್ರಿಗೆ ಎಲ್ಲರೂ ಒಲವು ಹೊಂದಿದ್ದಾರೆ ಎಂದರು.
ಇನ್ನೂ ಕಾಂಗ್ರೆಸ್ ಜೊತೆಗೆ ಹೋಗಲು ನಮಗೆ ಇಷ್ಟವಿಲ್ಲ. ಹೊಟ್ಟೆ ಉರಿಯಿಂದ ಹೆಚ್ಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು. ಕಾಂಗ್ರೆಸ್ ಹೊಡೆತ ತಡೆಯಲು ಆಗುತ್ತಿಲ್ಲ. ಸೆಪ್ಟೆಂಬರ್ 10ರಂದು ಬೆಂಗಳೂರಿನ ಅರಮನೆ ಜೆಡಿಎಸ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications