• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಸಿದ್ದರಾಮಯ್ಯ ವಿರುದ್ಧ ಸೋತ ವಿಶ್ವನಾಥ್

|

ಬೆಂಗಳೂರು, ಜೂನ್ 04: ದೇವೇಗೌಡ, ಕುಮಾರಸ್ವಾಮಿ ಕೊನೆಗೆ ತಮ್ಮನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದ ಜಿ.ಟಿ.ದೇವೇಗೌಡ ಅವರೊಂದಿಗೂ ಸ್ನೇಹದ ಹಸ್ತ ಲಾಘವ ಮಾಡಿದ ಸಿದ್ದರಾಮಯ್ಯ, ವಿಶ್ವನಾಥ್ ಅವರನ್ನು ಮಾತ್ರ ಅಪ್ಪತಪ್ಪಿಯೂ ಅಪ್ಪಿಕೊಳ್ಳಲಿಲ್ಲ. ಅವರಿಬ್ಬರ ನಡುವಿನ ರಾಜಕೀಯ ದ್ವೇಷವೇ ಅಂತಹದ್ದು.

ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಕರೆತರುವಲ್ಲಿ ಅವರದ್ದೇ ಜಿಲ್ಲೆಯವರಾದ ಆಗ ಕಾಂಗ್ರೆಸ್‌ನ ಪ್ರಮುಖರಾಗಿದ್ದ ವಿಶ್ವನಾಥ್ ಅವರ ಪಾತ್ರ ದೊಡ್ಡದಿತ್ತು. ಇದನ್ನು ಸಿದ್ದರಾಮಯ್ಯ ಅಲ್ಲಗಳೆಯುತ್ತಾರಾದರೂ ರಾಜ್ಯ ರಾಜಕಾರಣವನ್ನು ಹತ್ತಿರದಿಂದ ಗಮನಿಸಿದವರಿಗೆಲ್ಲಾ ಇದು ಸತ್ಯವೆಂಬುದು ಗೊತ್ತು.

ರೆಕ್ಕೆ ಕತ್ತರಿಸಿದ ಹಳ್ಳಿ ಹಕ್ಕಿಯ ನೋವಿನ ಹಾಡು

ಒಂದೇ ಜಾತಿಯವರಾಗಿದ್ದರೂ ಸಹ ವಿಶ್ವನಾಥ್ ಅವರು ಅಂದು ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಕರೆತಂದರು. ಆದರೆ ವಿಶ್ವನಾಥ್ ಅವರು ಊಹಿಸಿದ್ದೆಲ್ಲಾ ತಲೆಕೆಳಗಾಗಿ ಸಿದ್ದರಾಮಯ್ಯ ಅವರು ಯಾರೂ ಊಹಿಸದ ಮಟ್ಟದಲ್ಲಿ ಕಾಂಗ್ರೆಸ್‌ನಲ್ಲಿ ಬೆಳವಣಿಗೆ ಕಂಡರು, ಕೊನೆಗೆ ಮೂಲೆಗುಂಪಾದ ವಿಶ್ವನಾಥ್ ಅವರು ಪಕ್ಷವನ್ನೇ ಬಿಡಬೇಕಾಯಿತು.

ಹಳೆಯ ರಾಜಕೀಯ ವೈಷಮ್ಯ

ಹಳೆಯ ರಾಜಕೀಯ ವೈಷಮ್ಯ

ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿ ಬೆಳವಣಿಗೆ ಪ್ರಾರಂಭವಾದಾಗಿನಿಂದಲೇ ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ವೈಷಮ್ಯ ಬೆಳೆಯಿತು. ಯಾವ ಮಟ್ಟಿಗೆಂದರೆ ವಿಶ್ವನಾಥ್ ಅವರು ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಸಿದ್ದರಾಮಯ್ಯ ತಮ್ಮ ರಾಜಕೀಯ ಪಟ್ಟುಗಳನ್ನು ಬಳಿಸಿ ಕಾಂಗ್ರೆಸ್‌ನಲ್ಲಿ ಅವರನ್ನು ಮೂಲೆಗುಂಪು ಮಾಡಿದರು.

ಜೆಡಿಎಸ್ ಸೇರಿದರೂ ಸಿದ್ದರಾಮಯ್ಯ ತಂತ್ರ ಬೆಂಬಿಡಲಿಲ್ಲ

ಜೆಡಿಎಸ್ ಸೇರಿದರೂ ಸಿದ್ದರಾಮಯ್ಯ ತಂತ್ರ ಬೆಂಬಿಡಲಿಲ್ಲ

ವಿಶ್ವನಾಥ್ ಅವರು ಜೆಡಿಎಸ್‌ ಸೇರ್ಪಡೆಗೊಂಡರೂ ಸಹ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರ ವಿಶ್ವನಾಥ್ ಅವರ ಬೆನ್ನು ಬಿಡಲಿಲ್ಲ. ಮತ್ತೊಬ್ಬ ಕುರುಬ ನಾಯಕ ರಾಜ್ಯದಲ್ಲಿ ಉದಯಿಸುವುದು ಸಿದ್ದರಾಮಯ್ಯ ಅವರಿಗೆ ಬಹುಷಃ ಬೇಕಿರಲಿಲ್ಲ. ಆದರೆ ಅವರಿಗೆ ವಿಶ್ವನಾಥ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ದೊರೆತಾದ ಸಿದ್ದರಾಮಯ್ಯ ಅವರಿಗೆ ಅಲ್ಪ ಹಿನ್ನಡೆ ಆದ ಅನುಭವವಾಗಿದ್ದು ಸುಳ್ಳಲಲ್ಲ.

ಸಿದ್ದರಾಮಯ್ಯ ಕೈಗೊಂಬೆಯಾಗಬೇಕಾಯಿತು: ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಆಕ್ರೋಶ

ಸಮನ್ವಯ ಸಮಿತಿಯಿಂದ ದೂರವಿಟ್ಟರು

ಸಮನ್ವಯ ಸಮಿತಿಯಿಂದ ದೂರವಿಟ್ಟರು

ಆದ್ದರಿಂದಲೇ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿಯಿಂದ ವಿಶ್ವನಾಥ್ ಅವರನ್ನು ಹೊರಗಿಟ್ಟಿದ್ದರು. ಪಕ್ಷದ ರಾಜ್ಯಾಧ್ಯಕ್ಷರನ್ನೇ ಸಮನ್ವಯ ಸಮಿತಿಯಿಂದ ಹೊರಗಿಡುವ ಮೂಲಕ ವಿಶ್ವನಾಥ್ ಅವರು ರಾಜಕೀಯವಾಗಿ ಮುನ್ನೆಲೆಗೆ ಬರುವ ಅವಕಾಶವನ್ನು ಹೊಸಕಿಹಾಕಿದರು.

ಮೈಸೂರಿಗೆ ಜೆಡಿಎಸ್ ಟಿಕೆಟ್ ಕೇಳಿದ್ದ ವಿಶ್ವನಾಥ್

ಮೈಸೂರಿಗೆ ಜೆಡಿಎಸ್ ಟಿಕೆಟ್ ಕೇಳಿದ್ದ ವಿಶ್ವನಾಥ್

ಲೋಕಸಭೆ ಚುನಾವಣೆಯಲ್ಲಿ ಸಹ ವಿಶ್ವನಾಥ್ ಅವರು ಜೆಡಿಎಸ್‌ಗೆ ಟಿಕೆಟ್ ಕೇಳಿದ್ದರು, ಆದರೆ ಸಿದ್ದರಾಮಯ್ಯ ಅವರ ಹಠದಿಂದಾಗಿ ಮೈಸೂರು ಟಿಕೆಟ್ ಕಾಂಗ್ರೆಸ್ ಪಾಲಾಯಿತು. ಮೈಸೂರು ಮಹಾನಗರ ಪಾಲಿಕೆಯಲ್ಲೂ ಸಿದ್ದರಾಮಯ್ಯ ಅವರು ಕೈಯಾಡಿಸಿ ವಿಶ್ವನಾಥ್ ಅವರಿಗೆ ರಾಜಕೀಯ ಸೋಲುಣಿಸಿದರು.

'ಮಾಸ್ ರಾಜಕಾರಣ'ದ ಎದುರು ನಿಲ್ಲಲಾಗದ ವಿಶ್ವನಾಥ್

'ಮಾಸ್ ರಾಜಕಾರಣ'ದ ಎದುರು ನಿಲ್ಲಲಾಗದ ವಿಶ್ವನಾಥ್

ವಿಶ್ವನಾಥ್ ಅವರು ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಬೆಳೆಸಿರಲಿಲ್ಲವಾದರೂ ಜೆಡಿಎಸ್ ತೊರೆದಾಗ ಕಾಂಗ್ರೆಸ್‌ನಲ್ಲಿ ಉತ್ತಮ ನೆಲೆ ಸಿಗಲು ನೆರವಾಗಿದ್ದರು. ಆದರೆ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ನಡವೆ ವರ್ಷಗಳಿಂದ ನಡೆದುಕೊಂಡು ಬಂದ ಒಳ ರಾಜಕೀಯ ಯುದ್ಧದಲ್ಲಿ ಅಂತಿಮ ಜಯ ಸಿದ್ದರಾಮಯ್ಯ ಅವರದ್ದೇ ಆಗಿದೆ ಎನ್ನಬಹುದು. ಆದರೆ ವಿಶ್ವನಾಥ್ ಅವರಂತಹ ಪ್ರಬುದ್ಧ ರಾಜಕಾರಣಿ 'ಮಾಸ್ ರಾಜಕಾರಣ'ದ ಎದುರು ನಿಲ್ಲಲಾಗದಿದ್ದು, ಪ್ರಸ್ತುತ ರಾಜಕೀಯ ಸಾಗುತ್ತಿರುವ ಬಗ್ಗೆ ಆತಂಕದಿಂದ ನೋಡುವಂತೆ ಮಾಡುತ್ತದೆ.

English summary
H Vishwanath and Siddaramaiah were political opponents from years. At one time Both were in Congress, but Siddaramaiah grove in party H Vishwanath leave the party. Now he resigns to JDS state president post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X