ಪರಿಷತ್ ನಾಮ ನಿರ್ದೇಶನ, ಸಿದ್ದರಾಮಯ್ಯಗೆ ಹೊಸ ಸವಾಲು

Posted By:
Subscribe to Oneindia Kannada

ಬೆಂಗಳೂರು, ಮೇ 05 : ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಸ ಸವಾಲು ಎದುರಾಗಿದೆ. ವಿಧಾನಪರಿಷತ್ತಿಗೆ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಅಧಿಕಾರಿವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ.

ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, 'ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಯಿತು' ಎಂದು ಹೇಳಿದರು. [ಹೆಬ್ಬಾಳದಲ್ಲಿ ಸೋತರೂ ಕಾಂಗ್ರೆಸ್ಸಿಗೆ ಲಾಭ! ಹೇಗೆ?]

siddaramaiah

ವಿಧಾನಪರಿಷತ್‌ ಸದಸ್ಯರಾಗಿದ್ದ ಜಗ್ಗೇಶ್ ಮತ್ತು ಕೃಷ್ಣಭಟ್ ಅವರ ಅವಧಿ ಫೆಬ್ರವರಿ ಮೊದಲ ವಾರಕ್ಕೆ ಪೂರ್ಣಗೊಂಡಿದ್ದು, ಅವರು ನಿವೃತ್ತರಾಗಿದ್ದಾರೆ. ಅಂದಿನಿಂದಲೂ ಎರಡು ಸ್ಥಾನಗಳು ಖಾಲಿ ಇವೆ. ಜೂನ್ ಅಂತ್ಯಕ್ಕೆ ಮತ್ತೊಂದು ಸ್ಥಾನವೂ ತೆರವಾಗಲಿದೆ. [ಪರಿಷತ್ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?]

ಜಗ್ಗೇಶ್ ಅವರಿಂದ ತೆರವಾದ ಸ್ಥಾನಕ್ಕೆ ಮಾಜಿ ಸಂಸದೆ ರಮ್ಯಾ, ಬಾಲಭವನದ ಅಧ್ಯಕ್ಷೆ ಭಾವನಾ ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರ ಹೆಸರುಗಳು ಕೇಳಿಬರುತ್ತಿವೆ. ಇವರಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ? ಎಂಬುದು ಕುತೂಹಲ ಮೂಡಿಸಿದೆ. ['ನನ್ನನ್ನು ಎಂಎಲ್ ಸಿ ಮಾಡೋದು ಪಕ್ಷಕ್ಕೆ ಬಿಟ್ಟ ವಿಚಾರ']

ಕೃಷ್ಣಭಟ್ ಅವರಿಂದ ತೆರವಾದ ಸ್ಥಾನಕ್ಕೆ ಸಮಾಜ ಸೇವೆಕರನ್ನು ನೇಮಿಸಬೇಕು. ಈ ಸ್ಥಾನಕ್ಕೆ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಡಿ ಅವರ ಹೆಸರು ಕೇಳಿಬರುತ್ತಿದೆ. ಎರಡೂ ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಚಿವ ಸಂಪುಟ ಸಭೆ ಮುಖ್ಯಮಂತ್ರಿಗಳಿಗೆ ನೀಡಿದೆ.

ಕಾಂಗ್ರೆಸ್ ಬಲ ಹೆಚ್ಚಲಿದೆ : ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಸದ್ಯ ವಿಧಾನಪರಿಷತ್ತಿನಲ್ಲಿ 29 ಸದಸ್ಯ ಬಲ ಹೊಂದಿದೆ. ತೆರವಾದ ಸ್ಥಾನಕ್ಕೆ ಇಬ್ಬರನ್ನು ನಾಮನಿರ್ದೇಶನ ಮಾಡಿದರೆ ಪಕ್ಷದ ಬಲ 31ಕ್ಕೆ ಏರಿಕೆಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After cabinet meeting on May 04, 2016 Law minister T.B.Jayachandra said, Chief Minister Siddaramaiah will finalize two MLC candidate name for legislative council nomination.
Please Wait while comments are loading...