Get Updates
Get notified of breaking news, exclusive insights, and must-see stories!

ಡಿ. ಕೆ. ರವಿ ಆತ್ಮಹತ್ಯೆ; ಸಿದ್ದರಾಮಯ್ಯ ಹೇಳಿದ ಸಂಗತಿಗಳು!

ಬೆಂಗಳೂರು, ಅಕ್ಟೋಬರ್ 03; ಐಎಎಸ್ ಅಧಿಕಾರಿಯಾಗಿದ್ದ ಡಿ. ಕೆ. ರವಿ ಸಾವಿನ ಪ್ರಕರಣದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ. 2015 ಮಾರ್ಚ್ 17ರಂದು ಡಿ. ಕೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಸಹ ವಹಿತ್ತು.

ಐಎಎಸ್ ಅಧಿಕಾರಿ ಡಿ. ಕೆ. ರವಿ ಸಾವಿನ ಕುರಿತು ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ 'ನಗ್ನ ಸತ್ಯ' ಪುಸ್ತಕವನ್ನು ಶನಿವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಡಿ. ಕೆ. ರವಿ ಸಾವಿನ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಅವರು ಪ್ರಕರಣದ ಬಗ್ಗೆ ಹಲವಾರು ಸಂಗತಿಗಳನ್ನು ತೆರೆದಿಟ್ಟಿದ್ದಾರೆ.

ಡಿ. ಕೆ. ರವಿ ಆತ್ಮಹತ್ಯೆ ಮಾಡಿಕೊಂಡಾಗ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು, ಜನರು, ಡಿ. ಕೆ. ರವಿ ಕುಟುಂಬದವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರಾಗಿದ್ದ ಕೆ. ಜೆ. ಜಾರ್ಜ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಈಗ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿರುವ ಸಿದ್ದರಾಮಯ್ಯ, "ಡಿ. ಕೆ. ರವಿ ಆತ್ಮಹತ್ಯೆಗೆ ಸಂಬಂಧಿಸಿದ ಸಿಬಿಐ ವರದಿಯನ್ನು ಸದನದ ಮುಂದಿಟ್ಟು, ಸತ್ಯಸಂಗತಿಯನ್ನು ಜನರಿಗೆ ತಿಳಿಸಬೇಕಿತ್ತು, ನಾವದನ್ನು ಮಾಡಿಲ್ಲ. ನಾವು ಮಾಡಬೇಕಿದ್ದ ಈ ಕೆಲಸವನ್ನು ರಾಮಕೃಷ್ಣ ಉಪಾಧ್ಯ ಮಾಡಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು" ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿರುವುದೇನು?

ಸಿದ್ದರಾಮಯ್ಯ ಹೇಳಿರುವುದೇನು?

"ರಾಮಕೃಷ್ಣ ಉಪಾಧ್ಯ ಡಿ. ಕೆ. ರವಿ ಅವರ ಸಾವಿನ ಕುರಿತಾಗಿ ಲ್ಯಾಂಡ್, ಲಸ್ಟ್ ಎಂಡ್ ಆಡಿಯೋ ಟೇಪ್ ಎಂಬ ಪುಸ್ತಕವನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ. ಇದನ್ನು ಪ್ರಹ್ಲಾದ್ ರಾವ್ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಈ ಎರಡೂ ಪುಸ್ತಕಗಳು ಇಂದು ಏಕಕಾಲದಲ್ಲಿ ಲೋಕಾರ್ಪಣೆಗೊಂಡಿವೆ. ಡಿ.ಕೆ ರವಿ ಅವರ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಹಲವಾರು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಈ ಪುಸ್ತಕದ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಲೇಖಕರು ಮಾಡಿದ್ದಾರೆ" ಎಂದರು.

ಪ್ರಚಾರ ಪ್ರಿಯ ಕೂಡ ಆಗಿದ್ದರು

ಪ್ರಚಾರ ಪ್ರಿಯ ಕೂಡ ಆಗಿದ್ದರು

"ಡಿ. ಕೆ. ರವಿ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಬಗ್ಗೆ ಎರಡು ಮಾತಿಲ್ಲ. ಇದರ ಜೊತೆಗೆ ಪ್ರಚಾರ ಪ್ರಿಯರು ಕೂಡ ಆಗಿದ್ದರು. ಅವರು ತಮ್ಮ ಕರ್ತವ್ಯದ ದಿನಗಳಲ್ಲಿ ಕ್ರಮ ಕೈಗೊಳ್ಳುವ ಮೊದಲು ಮೀಡಿಯಾಗಳಿಗೆ ತಿಳಿಸಿ, ನಂತರ ಕ್ರಮ ಜರುಗಿಸುತ್ತಿದ್ದರು. ಇದು ನನ್ನ ಅನುಭವಕ್ಕೆ ಬಂದದ್ದಷ್ಟೇ ಅಲ್ಲ ರಾಮಕೃಷ್ಣ ಉಪಾಧ್ಯ ಅವರ ಪುಸ್ತಕದಲ್ಲೂ ಉಲ್ಲೇಖಿಸಲಾಗಿದೆ"

"ರವಿ ಅವರನ್ನು ವರ್ಗಾವಣೆ ಮಾಡುವಂತೆ ನಮ್ಮ ಪಕ್ಷದ ಯಾವುದೇ ಶಾಸಕರು ನನ್ನ ಬಳಿ ಒತ್ತಡ ಹೇರಿರಲಿಲ್ಲ. ಒಮ್ಮೆ ಡಿ.ಕೆ ರವಿ ಅವರ ಮಾವ ಹನುಮಂತರಾಯಪ್ಪ ಅವರು ರಮೇಶ್ ಕುಮಾರ್ ಅವರ ಜೊತೆ ಬಂದು ತಮ್ಮ ಮಗಳು ಬೆಂಗಳೂರಿನಲ್ಲಿ ಇದ್ದಾರೆ, ಹೀಗಾಗಿ ರವಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ್ದರು. ನಂತರ ನಾನು ಅವರನ್ನು ಕಮರ್ಷಿಯಲ್ ಟ್ಯಾಕ್ಸ್ ಅಂಡ್ ಎನ್‌ಫೋರ್ಸ್‌ಮೆಂಟ್ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ ವರ್ಗಾವಣೆ ಮಾಡಿದ್ದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದರು

ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದರು

"ಕೋಲಾರದಲ್ಲೇ ಡಿಸಿ ಯಾಗಿ ಮುಂದುವರೆಯಬೇಕು ಎಂಬ ಆಸೆ ಇದ್ದುದ್ದರಿಂದ ರವಿ ಅವರಿಗೆ ಈ ವರ್ಗಾವಣೆ ಅಷ್ಟೊಂದು ಸಂತಸದಾಯಕವಾಗಿ ಇರಲಿಲ್ಲವೇನೋ ಎಂಬುದು ನನ್ನ ಭಾವನೆ. ಕಾನೂನು ರೀತ್ಯಾ ಹಣ ಮಾಡಬೇಕೆಂಬ ಆಸೆಯಿಂದ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದರು. ಅವರಿಗೆ ಹರಿಕೃಷ್ಣ ಮತ್ತು ಚಂದ್ರಶೇಖರ ಎಂಬ ಇಬ್ಬರು ಗೆಳೆಯರಿದ್ದರು. ಈ ಗೆಳೆಯರ ಜೊತೆಗೂಡಿ ಆರ್ ಅಂಡ್ ಎಚ್ ಎಂಬ ರಿಯಲ್ ಎಸ್ಟೇಟ್ ಕಂಪನಿ ಶುರು ಮಾಡಿದರು. ಒಂದು 500 ಕೋಟಿ ಹಣ ಸಂಪದಾನೆ ಮಾಡಿ, ನಂತರ ಐ.ಎ.ಎಸ್ ಹುದ್ದೆಗೆ ರಾಜೀನಾಮೆ ನೀಡಿ, ದೊಡ್ಡ ಉದ್ಯಮಿಯಾಗಬೇಕು ಎಂದು ಅವರ ಮಹದಾಸೆಯಾಗಿತ್ತು. ಆದರೆ ಹಣ ಮಾಡುವ ಅವರ ಈ ಆಸೆ ಈಡೇರಲಿಲ್ಲ.‌ ಇದು ಅವರ ಜೀವನದ ವೈಫಲ್ಯ" ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತಿಪಕ್ಷಗಳು ರಾದ್ಧಾಂತ ಮಾಡಿದವು

ಪ್ರತಿಪಕ್ಷಗಳು ರಾದ್ಧಾಂತ ಮಾಡಿದವು

"ರವಿ ಅವರ ಆತ್ಮಹತ್ಯೆ ವಿಷಯವನ್ನು ಮುಂದಿಟ್ಟಕೊಂಡು ಪ್ರತಿಪಕ್ಷಗಳು ರಾದ್ಧಾಂತ ಮಾಡಿದವು. ಮಾಧ್ಯಮಗಳು ಬೆಂಕಿಗೆ ತುಪ್ಪ ಸುರಿದವು. ಸಾಕ್ಷ್ಯಾಧಾರ ಇಲ್ಲದೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದವು. ತನಿಖೆ ಇಲ್ಲದೆಯೇ ಮಾಧ್ಯಮಗಳು ತೀರ್ಪು ನೀಡಿದವು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಒಂದು ವಾರ ಏನೆಲ್ಲ ನಾಟಕಗಳು ನಡೆದವು. ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಸದಾನಂದ ಗೌಡ ಈ ಎಲ್ಲರೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಆಗ್ರಹಿಸಿದರು. ಈ ಪ್ರಕರಣವನ್ನು ಸಿಬಿಐಗೆ ವಹಿಸಲು ನಮ್ಮ‌ ಸರ್ಕಾರ ಯಾವುದೇ ಹಿಂದೇಟು ಹಾಕಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ 6 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು. ಬಿಜೆಪಿ ಸರ್ಕಾರ ಯಾವುದಾದರೂ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿದೆಯಾ? ಇದೇ ಬಿಜೆಪಿಯವರು ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್ ಎಂದು ಲೇವಡಿ ಮಾಡುತ್ತಿದ್ದವರು. ಅಪ್ರಮಾಣಿಕ ರಾಜಕಾರಣ ಮಾಡುವುದರಲ್ಲಿ ಅವರು ನಿಸ್ಸೀಮರು" ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Recommended Video

    ತಾಲೀಮು ವೇಳೆ ಕುಶಾಲತೋಪಿನ ಸದ್ದಿಗೆ ಗಾಬರಿ ಗೊಂಡ ಆನೆಗಳು! | Oneindia Kannada
    ಏಕಮುಖ ಪ್ರೀತಿ ಅಪಾಯಕಾರಿ

    ಏಕಮುಖ ಪ್ರೀತಿ ಅಪಾಯಕಾರಿ

    "ಏಕಮುಖ ಪ್ರೀತಿ ಅಪಾಯಕಾರಿ. ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುವುದು ಮೂರ್ಖತನದ ಪರಮಾವಧಿ. ಪುಸ್ತಕದಲ್ಲಿ ಹೇಳಿರುವಂತೆ ಭೂಮಿ, ಕಾಮ, ಆಡಿಯೋ ಟೇಪ್ ರವಿ ಆತ್ಮಹತ್ಯೆಗೆ ಕಾರಣವೇ ಹೊರತು ಬೇರೆ ಯಾರೂ ಕಾರಣರಲ್ಲ.‌ ಸತ್ಯ ಎಂದಿದ್ದರೂ ಹೊರಗೆ ಬಂದೇ ಬರುತ್ತದೆ. ಸಿಬಿಐ ತನಿಖಾ ವರದಿಯನ್ನು ನಮ್ಮ ಸರ್ಕಾರ ಇದ್ದಾಗಲೇ ಜನರ ಮುಂದೆ ಇಡಬೇಕಾಗಿತ್ತು. ಆದರೆ, ಸಾವಿನ ಹಿಂದಿನ ಸತ್ಯ ಅದಾಗಲೇ ಬಹಿರಂಗವಾಗಿದ್ದರಿಂದ ಆ ಕೆಲಸ ನಾವು ಮಾಡಲಿಲ್ಲ" ಎಂದರು

    "ಜೆಡಿಎಸ್‌ನವರು ಡಿ.ಕೆ. ರವಿ ಅವರ ತಂದೆ, ತಾಯಿಯನ್ನು ಕರೆತಂದು ವಿಧಾನಸೌಧದ ಮುಂದೆ ಧರಣಿ ಕೂರಿಸಿದರು. ರವಿ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಹೇಳಿದರೂ ಅವರು ಕೇಳಲಿಲ್ಲ. ಯಾವುದಾದರೂ ಸರ್ಕಾರ ಘಟನೆ ನಡೆದ ವಾರದೊಳಗೆ ಸಿಬಿಐ ತನಿಖೆಗೆ ಒಪ್ಪಿಸಿದ್ದರೆ ಅದು ನಮ್ಮ ಸರ್ಕಾರ. ನಮಗೂ ಘಟನೆಗೂ ಸಂಬಂಧ ಇರಲಿಲ್ಲ. ಉಪ್ಪು ತಿಂದವರು ನೀರು ಕುಡಿಯಲಿ ಎಂಬ ನಿರ್ಧಾರದೊಂದಿಗೆ ಧೈರ್ಯವಾಗಿ ನಮ್ಮ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು. ಸಿಬಿಐ ವರದಿ ತುಂಬಾ ತಡವಾಗಿ ಬಂದಿತ್ತು. ವಾಸ್ತವದಲ್ಲಿ ಇದು ಸಿಬಿಐಗೆ ವಹಿಸುವ ಪ್ರಕರಣವಾಗಿರಲಿಲ್ಲ. ಈ ಹಿಂದೆ ಸಿಐಡಿ ಇಲಾಖೆ ನಡೆಸಿದ್ದ ತನಿಖೆ ಸರಿಯಾದ ಹಾದಿಯಲ್ಲಿ ಇತ್ತು ಎಂಬುದನ್ನು ಸಿಬಿಐ ವರದಿ ಹೇಳಿತ್ತು. ಒಂದಂಕಿ ಲಾಟರಿಯಲ್ಲಿ ನಾನು ಮತ್ತು ಜಾರ್ಜ್ ಅಪಾರ ಹಣ ಮಾಡಿದ್ದೇವೆ ಎಂದು ಜೆ.ಡಿ.ಎಸ್ ಆರೋಪ ಮಾಡಿತ್ತು. ಮರುದಿನವೇ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಕೊನೆಗೆ ಏನಾಯ್ತು?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+