'ನನ್ನ ಆಸ್ತಿಯನ್ನು ಕುಮಾರಸ್ವಾಮಿಗೆ ಬರೆದುಕೊಡುತ್ತೇನೆ'
ಬೆಂಗಳೂರು, ಜೂ. 01 : 'ಕೆಂಗೇರಿಯಲ್ಲಿ ನಾನು ನೋಂದಣಿ ಮಾಡಿಸಿಕೊಂಡಿರುವ ಆಸ್ತಿಯನ್ನು ಪತ್ತೆ ಹಚ್ಚಿ ಕೊಟ್ಟರೆ ಅದನ್ನು ಕುಮಾರಸ್ವಾಮಿ ಅವರ ಹೆಸರಿಗೆ ಬರೆದುಕೊಡುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಗೆ ಸವಾಲು ಹಾಕಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು. 'ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಸುಮ್ಮನೆ ಆರೋಪ ಮಾಡಬಾರದು, ಜವಾಬ್ದಾರಿಯುತವಾಗಿ ಮಾತನಾಡಬೇಕು' ಎಂದು ಸಲಹೆ ನೀಡಿದರು. [ಸಿದ್ದರಾಮಯ್ಯ ಕೆಂಗೇರಿಯಲ್ಲಿ ಆಸ್ತಿ ಮಾಡಿದ್ದಾರೆ]

'ಕೆಂಗೇರಿಯಲ್ಲಿ ನಾನು ಯಾವುದೇ ಆಸ್ತಿಯನ್ನು ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ಆಸ್ತಿಯನ್ನು ಪತ್ತೆ ಹಚ್ಚಿಕೊಟ್ಟರೆ, ಅದನ್ನು ಕುಮಾರಸ್ವಾಮಿ ಅವರ ಹೆಸರಿಗೆ ಬರೆದುಕೊಡುತ್ತೇನೆ ಎಂದು ಸಿದ್ದರಾಮಯ್ಯ' ಘೋಷಿಸಿದರು. [ಬಹಿರಂಗ ಚರ್ಚೆಗೆ ಬನ್ನಿ, ಸಿದ್ದುಗೆ ಎಚ್ಡಿಕೆ ಆಹ್ವಾನ]
ಕುಮಾರಸ್ವಾಮಿ ಹೇಳಿದ್ದೇನು : ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, 'ಬೆಂಗಳೂರಿನ ಕೆಂಗೇರಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸುಳ್ಳು ಮಾಹಿತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ತಿ ನೋಂದಾಯಿಸಿಕೊಂಡಿದ್ದಾರೆ. 2003ರ ಮೇ 8ರಂದು ಈ ಆಸ್ತಿಯನ್ನು ನೋಂದಾಯಿಸಿಕೊಳ್ಳಲಾಗಿದೆ' ಎಂದು ಹೇಳಿದ್ದರು.
ನೀರಿನಿಂದ ತೆಗೆದ ಮೀನಾಗಿದ್ದಾರೆ : 'ಕುಮಾರಸ್ವಾಮಿ ಅವರು ಅಧಿಕಾರವಿಲ್ಲದೇ ನೀರಿನಿಂದ ತೆಗೆದ ಮೀನಿನಂತಾಗಿದ್ದಾರೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ವಿಧಾನಸೌಧಲ್ಲಿ ಮಾತನಾಡಿದ ಅವರು, 'ಲಾಟರಿ ದಂಧೆಯಲ್ಲಿ ಕುಮಾರಸ್ವಾಮಿ ಅವರು ಹೇಳಿದಂತೆ 35 ಅಧಿಕಾರಿಗಳ ಹೆಸರಿಲ್ಲ, ಹೆಸರಿರುವ ಒಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ತಗೆದುಕೊಳ್ಳಲಾಗಿದೆ' ಎಂದರು.












Click it and Unblock the Notifications