'ಸಿದ್ದರಾಮಯ್ಯ ಹೊರಗಡೆ ಮಾತ್ರ ಬಸಪ್ಪ ಒಳಗಡೆ ವಿಷಪ್ಪ'
ಬಾಗಲಕೋಟೆ, ಫೆಬ್ರವರಿಬ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಗಡೆ ಮಾತ್ರ ಬಸಪ್ಪ ಒಳಗಡೆ ವಿಷಪ್ಪ ಎಂದು ವಿಧಾನ ಪರಿಷತ್ ಸದಸ್ಯರಾದ ಚಲುವಾದಿ ನಾರಾಯಣ ಸ್ವಾಮಿ ವ್ಯಂಗ್ಯ ವಾಡಿದ್ದಾರೆ.
ಈ ಕುರಿತು ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳೋದೆ ಬೇರೆ,ಮಾಡುವುದೇ ಬೇರೆಯಾಗಿದೆ. ಕೇಂದ್ರದ ಮೇಲೆ ರಾಜ್ಯ ಸರ್ಕಾರ, ಬರೀ ಆಪಾದನೆ ಮಾಡಿದ್ರೆ ಹಣ ಬರುತ್ತಾ? ಎಲ್ಲದಕ್ಕೂ ಒಂದು ಪದ್ದತಿ ಇದೆ ಎಂದು ಹೇಳಿದರು.

ಸರ್ಕಾರ ನಡೆಯೋದು ಅಂದ್ರೆ ಸುಮ್ನನೆ ಅಲ್ಲ,ಸರ್ಕಾರ ಅಂದ್ರೆ ಒಂದು ಡಬ್ಬಾ ಅಂಗಡಿ ಅಲ್ಲ ಎಂದು ಅವರು,ಅದು ರಾಜ್ಯ ಅಥವಾ ಕೇಂದ್ರ ಸರ್ಕಾರವೇ ಇರಬಹುದು,ಅಂಗಡಿ ವ್ಯಾಪಾರ ನಡೆಯಲ್ಲ ಇಲ್ಲಿ,
ಅದಕ್ಕೊಂದು ಸಿಸ್ಟಮ್ ಇದೆ, ಮತ್ಯಾಕೆ ಸಂವಿಧಾನ ಇರಬೇಕು ಎಂದು ಪ್ರಶ್ನೆ ಮಾಡಿದ ನಾರಾಯಣ ಸ್ವಾಮಿ,ಈ ವ್ಯವಸ್ಥೆಗಳು ಏನಕ್ಕೆ ಬರಬೇಕು ಹಾಗಾದ್ರೆ? ಕಾಂಗ್ರೆಸ್ಸಿಗರು ಬರೀ ಸುಳ್ಳುಗಳ ಮೇಲೆ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಮಯದಲ್ಲಿ,ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಪಣ್ಣ ಕಮೀಷನ್ ಆರೋಪದ ವಿಚಾರವಾಗಿ ಮಾತನಾಡಿ,ಕೆಂಪಣ್ಣ ಹೇಳಿದ್ದನ್ನು ಗೋಡೆ ಮೇಲೆ ಬರೆದು ಬರೆದು ಗೋಡೆ ಎಲ್ಲ ಸವೆದೋಯ್ತು,ಆದರೆ ಇದನ್ನ ಪ್ರೂವ್ ಮಾಡಲಿಕ್ಕೆ ಸಾಧ್ಯ ಆಗಲಿಲ್ಲ.ಈಗ ಕೆಂಪಣ್ಣ ಅವರೇ ಹೇಳಿದ್ದಾರೆ.ಅದಕ್ಕೆ ಉತ್ತರ ಸಿದ್ದರಾಮಯ್ಯ ಅವರು ಕೊಡಬೇಕಲ್ವ? ಎಂದು ಪ್ರಶ್ನೆ ಮಾಡಿದ ನಾರಾಯಣ ಸ್ವಾಮಿ ಅವರು,ಸಿದ್ದರಾಮಯ್ಯ ಲುಂಗಿ ಮೇಲೆ ಎತ್ಕೊಂಡು ಎತ್ಕೊಂಡು ಗೋಡೆ ಮೇಲೆ ಬರೆದಿದ್ದೇ ಬರೆದಿದ್ದು ,ಈಗ ಲುಂಗಿ ಬಿಟ್ಟು ಮಾತನಾಡಬೇಕಲ್ವ? ಎಂದು ಕಿಡಿಕಾರಿದರು.

ನಮಗೆ ಹೇಳಿದ್ರಲ್ಲ ನೀವು ಈಗ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ,ಈ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಕೆಂಪಣ್ಣ ಕೈಯಲ್ಲಿ ನಮ್ಮ ಮೇಲೆ ಆರೋಪಿಸಿದಿರಿ, ಈಗ ಕೆಂಪಣ್ಣ ಅವರು ನಿಮ್ಮ ಮೇಲೆಯೇ ಆರೋಪ ಮಾಡ್ತಿದಾರೆ.ಈಗ ತೀರ್ಪು ಕೂಡಕೇ ತೆಗೆದುಕೊಳ್ಳಬೇಕು ಎಂದರು.ಕಾಂಗ್ರೆಸ್ ಸರ್ಕಾರದ ಮೇಲೆ ಕೆಂಪಣ್ಣ ಕಮೀಷನ್ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ನಮ್ಮ ಮೇಲೆ ಆರೋಪ ಮಾಡಿದವ್ರೇ ನಿಮ್ಮ ಮೇಲೂ ಮಾಡಿದ್ದಾರಲ್ಲ ಈಗ ,ಸುಳ್ಳನ್ನೆ ಸತ್ಯ ಅಂತ ಹೇಳಿ ಅದರ ಮೇಲೆ ಮತ ತಗೊಂಡು ಗೆದ್ದಿರಿ.ಕೆಂಪಣ್ಣ ನಮ್ಮ ಮೇಲೆ ಆರೋಪ ಮಾಡಿದ್ದಾಗ ನೀವು ಒಪ್ಪಿದ್ದೀರಿ, ಈಗ ನೀವು ಇದನ್ನೂ ಒಪ್ಪಬೇಕು ಅಷ್ಟೇ ಎಂದರು.
ಇಂತವು ಬಹಳಷ್ಟು ನಡೆದಿವೆ, ಇದು ಒಂದು ದಂಧೆ ಅಲ್ಲ,ವರ್ಗಾವಣೆ ದಂಧೆ, ಇಡೀ ರಾಜ್ಯದಲ್ಲಿ ಒಂದೇ ಒಂದು ಟೇಪ್ ಕಟ್ ಆಗಿಲ್ಲ.ಅಧಿಕಾರಕ್ಕೆ ಬಂದು 10 ತಿಂಗಳಾದರೂ ಒಂದು ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಆರೋಪಿಸಿದ ನಾರಾಯಣ ಸ್ವಾಮಿ ಅವರು,ಈಗ ಕುಣಿಯೋಕ ಆಗಲ್ಲ ನೆಲ ಡೊಂಕಾಗಿದೆ ಅನ್ನೋದು ಅವರಿಗೆ ಗೊತ್ತಾಗಿದೆ. ಕೇಂದ್ರದ ಮೇಲೆ ಗೂಬೆ ಕೂರಿಸಿದ್ದಾರೆ. ಕೇಂದ್ರದ ವಿತ್ತ ಸಚಿವೆ ಈಗಾಗಲೇ ಹೇಳಿದ್ದಾರೆ. ಕರ್ನಾಟಕಕ್ಕೆ ಒಂದೇ ಒಂದು ರೂಪಾಯಿ ಬಾಕಿ ಉಳಿಸಿಕೊಂಡಿಲ್ಲ ಅಂದಿದ್ದಾರೆ. ಆದರೆ ಇವರು ಯಾವ ರೂಪದಲ್ಲಿ ಬರಬೇಕು ಅಂತಿದಾರಲ್ಲ? ಎಂದು ಪ್ರಶ್ನಿಸಿದರು.
ಇದು ಯಾವ ಲೆಕ್ಕ? ಶೆಟ್ಟರ್ ಲೆಕ್ಕನಾ? ಗಾಂಧಿ ಲೆಕ್ಕನಾ? ಎಂದು ವ್ಯಂಗ್ಯ ವಾಡಿ,ತಪ್ಪು ಹೇಳುವುದು, ಜನರ ದಾರಿ ತಪ್ಪಿಸುವುದಲ್ಲ ಎಂದು ಟಾಂಗ್ ನೀಡಿದರು.ಇದೇ ಸಮಯದಲ್ಲಿ,ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ ವಿಚಾರವಾಗಿ ಮಾತನಾಡಿ,ಡಿಕೆಸು ದೇಶ ವಿಭಜನೆ ಹೇಳಿಕೆ ಹಿಂದಿನ ಲೆಕ್ಕಾಚಾರ ಬಿಚ್ಚಿಟ್ಟು, ಕಾಂಗ್ರೆಸ್ ಇಡೀ ದೇಶವನ್ನ ಕಳೆದುಕೊಂಡಿದೆ.ದಕ್ಷಿಣ ಭಾರತದಲ್ಲಿ ಮಾತ್ರ ಎರಡು ಸರ್ಕಾರ ಇದೆ, ಕೊನೆಯ ಪಕ್ಷ ಈ ದೇಶವನ್ನ ಒಡೆದು ಬಿಟ್ರೆ. ಆ ದಕ್ಷಿಣ ಭಾರತವಾದ್ರೂ ತಮ್ಮ ಕೈಯಲ್ಲಿರಬಹುದು ಅನ್ನೋದು ಅವ್ರ (ಕಾಂಗ್ರೆಸ್) ತಲೆಯಲ್ಲಿ ಇದ್ದಂಗೆ ಕಾಣುತ್ತೆ ಎಂದು ಟಾಂಗ್ ನೀಡಿದರು.ಆ ಕಾರಣದಿಂದ ಡಿಕೆ ಸುರೇಶ್ ಕೈಯಿಂದ ಈ ಸ್ಟೇಟ್ಮೆಂಟ್ ಕೊಡಿಸಿದ್ದಾರೆ ಎಂದು ಚಲುವಾದಿ ನಾರಾಯಣ ಸ್ವಾಮಿ ತಿಳಿಸಿದರು.












Click it and Unblock the Notifications