ಸೀತಾರಾಮ ಕಲ್ಯಾಣದಲ್ಲಿ ನಿದ್ದೆ ಹೋದ ಸಿದ್ದುಗೆ ಟ್ವಿಟ್ಟರ್ ಗುದ್ದು!
Recommended Video

ಬೆಂಗಳೂರು, ಜನವರಿ 25: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ನಿದ್ದೆಗೂ ಅವಿನಾಭಾವ ಸಂಬಂಧ ಎಂಬುದು ಗೊತ್ತಿರದ ವಿಷಯವೇನಲ್ಲ. ತಮಗೆ ಕೆಲವು ಆರೋಗ್ಯ ಸಂಬಂಧೀ ಸಮಸ್ಯೆ ಇರುವುದರಿಂದ ಆಗಾಗ ತೂಕಡಿಸುತ್ತೇನೆ ಎಂದು ಅವರೇ ಹಲವು ಬಾರಿ ಸಮಜಾಯಿಷಿ ನೀಡಿದ್ದಾರೆ. ಆದರೂ ನಮ್ಮ ಟ್ರೋಲ್ ಹೈಕ್ಳಿಗೆ ಅವೆಲ್ಲ ಅರ್ಥವಾಗಬೇಕಲ್ಲ!
ಒಂದು ಕ್ಷಣ ಸಿದ್ದರಾಮಯ್ಯ ಕಣ್ಣು ಮುಚ್ಚಿದರೂ ಸಾಕು, ಅದ್ಯಾವುದೋ ಹೊತ್ತಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನೇ ಸಾಮಾಜಿಕ ಮಾಧ್ಯಗಳಲ್ಲಿ ಟ್ರೋಲ್ ಮಾಡುವುದು ಮಾಮೂಲಾಗಿಬಿಟ್ಟಿದೆ. ಇದೀಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ ಚಿತ್ರವನ್ನು ವೀಕ್ಷಿಸುವಾಗಲೂ ಸಿದ್ದರಾಮಯ್ಯ ಕಣ್ಣು ಮುಚ್ಚಿ ಕೂತಿದ್ದ ಚಿತ್ರ ವೈರಲ್ ಆಗಿದೆ.
ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಜಮೀರ್ ಅಹ್ಮದ್ ಮುಂತಾದವರೊಂದಿಗೆ ಕೂತು ಸಿದ್ದರಾಮಯ್ಯ ಚಿತ್ರ ವೀಕ್ಷಿಸುತ್ತಿದ್ದರು. ಈ ಚಿತ್ರವನ್ನು ಸ್ವತಃ ಕುಮಾರಸ್ವಾಮಿ ಅವರೇ ಟ್ವೀಟ್ ಮಾಡಿದ್ದರು. ಆದರೆ ಈ ಎಲ್ಲ ಚಿತ್ರಗಳ ನಡುವಲ್ಲಿ ಟ್ರೋಲ್ ನಿಸ್ಸೀಮರನ್ನು ಸೆಳೆದಿದ್ದು ಮಾತ್ರ ಸಿದ್ದರಾಮಯ್ಯ ಚಿತ್ರ!
ಇಲ್ಲೂ ನಿದ್ದೆನಾ...? ಎನ್ನುತ್ತ ಸಿದ್ದು ಅವರಿಗೆ ಚೆನ್ನಾಗಿಯೇ ಗುದ್ದು ನೀಡಿದ್ದಾರೆ ಟ್ರೋಲ್ ಪಂಡಿತರು!
|
ಚಿತ್ರ ಹೇಗಿದೆ ಅಂತ ಗೊತ್ತಾಗುತ್ತಿದೆ!
ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ನೋಡಿದರೆ ಚಿತ್ರ ಹೇಗಿದೆ ಎಂಬುದು ಗೊತ್ತಾಗುತ್ತಿದೆ ಎಂದು ಮೊಹಮ್ಮದ್ ಇರ್ಫಾನ್ ಕಾಲೆಳೆದಿದ್ದಾರೆ!
|
ಚಿಂತೆ ಇಲ್ದೋರ್ಗೆ...
'ಚಿಂತೆ ಇಲ್ದೋರಿಗೆ ಸಂತೇಲೂ ನಿದ್ದೆ' ಎಂದು ಕನ್ನಡ ಶಿವ ಟ್ವೀಟ್ ಮಾಡಿದ್ದಾರೆ!
|
ಅಲ್ಲೂ ನಿದ್ದೇನಾ?
ಸಿದ್ದರಾಮಣ್ಣ ಅಲ್ಲೂ ನಿದ್ದೇನಾ? ಎಂದು ಪ್ರಶ್ನಿಸಿದ್ದಾರೆ ಸುನೀಲ್ ಸುನಿ!
|
ಸಿದ್ದರಾಮಯ್ಯ ಅವರನ್ನು ಎಬ್ಬಿಸಿ!
ಶುಭ ಹಾರೈಕೆಗಳು. ಆದ್ರೆ ಸಿದ್ದರಾಮಯ್ಯನವರನ್ನು ಎಬ್ಬಿಸಿ ಹೋಗಿ ಆಯ್ತ! ಎಂದಿದ್ದಾರೆ ಪ್ರಾರ್ಥನಾ ಶೆಟ್ಟಿ!
|
ಯಾಕ್ರೀ ಡಿಸ್ಟರ್ಬ್ ಮಾಡ್ತೀರಾ?
ಕುಮಾರಸ್ವಾಮಿಯವ್ರೆ, ಸಿದ್ದರಾಮಯ್ಯನವ್ರ್ಗೆ ಯಾಕ್ರೀ ಡಿಸ್ಟರ್ಬ್ ಮಾಡ್ತೀರಾ? ನೀವ್ ಅವ್ರ್ನ ಸಿನೆಮಾಗ್ ಕರ್ಕೊಂಡ್ ಹೋದ್ರೂ ಮಾಡೋದ್ ನಿದ್ದೆನೇ ಎಂದು ಕಿಚಾಯಿಸಿದ್ದಾರೆ ಅನಿಲ್ ಕುಮಾರ್ ವಿ.












Click it and Unblock the Notifications