ಸಿದ್ದರಾಮಯ್ಯ ಹೆಸರಿನಿಂದಲೇ ಪ್ರತಾಪ್‌ ಸಿಂಹಗೆ ಪ್ರಖ್ಯಾತಿ: ಶಾಸಕ ಜಮೀರ್

ಬೆಂಗಳೂರು, ಏಪ್ರಿಲ್‌ 25: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟೀಕೆ ಪ್ರತಿಟೀಕೆಗಳ ಸದ್ದು ಜೋರಾಗಿದ್ದು, ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಿದ್ದ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಈಗ ಶಾಸಕ ಜಮೀರ್‌ ಅಹಮದ್‌ ಖಾನ್‌ ವಾಗ್ದಾಳಿ ಮಾಡಿದ್ದಾರೆ.

ಸಂಸದರಾಗಿ ಪ್ರತಾಪ್ ಸಿಂಹ ಅವರ ಕೊಡುಗೆ ಸೊನ್ನೆ. ಅವರು ಸಿದ್ದರಾಮಯ್ಯ ಬಗ್ಗೆ ಮಾತನಾಡಿಯೇ ನಾಯಕರಾಗಲು ಹೊರಟವರು. ಪ್ರತಾಪ್‌ ಸಿಂಹ ಅವರು ರಾಜಕೀಯದಲ್ಲಿ ಉಳಿಯಬೇಕಾದರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಿದರೆ ಮಾತ್ರವೇ ಸಾಧ್ಯವಿದೆ, ಬೆಳಗ್ಗೆದ್ದರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಬೇಕಾಗಿದೆ.

Siddaramaiahs name made pratap simha famous: MLA Zameer Ahmed Khan

ಸಂಸದ ಪ್ರತಾಪ್ ಸಿಂಹಾಗೆ ರಾತ್ರಿಯ ಕನಸ್ಸಿನಲ್ಲೂ ಸಿದ್ದರಾಮಯ್ಯ ಅವರೇ ಬರುತ್ತಾರೆ. ವರುಣಾದಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ. ಈ ಬಾರಿ ಸಿದ್ದರಾಮಯ್ಯ ಅವರು 1 ಲಕ್ಷ ಅಂತರದಲ್ಲಿ ಗೆಲ್ಲುತ್ತಾರೆ. ಸಿದ್ದರಾಮಯ್ಯ ಅವರು ಪ್ರಚಾರ ಮಾಡುವುದೇ ಬೇಕಾಗಿಲ್ಲ. ಜನರು ಅವರಿಗೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೊಗೆ ಮತ ನೀಡುತ್ತಾರೆ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಮುಸ್ಲಿಂ ಮೀಸಲಾತಿಯನ್ನು ತೆಗೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿರುವುದರಲ್ಲಿ ಅಚ್ಚರಿಯಿಲ್ಲ. ರಾಜ್ಯದಲ್ಲಿ ಈಗಾಗಲೇ ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದಾರೆ, ಅದರ ವಿರುದ್ಧ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಪೂರ್ಣ ಭರವಸೆಯಿದೆ ಎಂದು ನಿನ್ನೆ ಹೇಳಿದ್ದರು.

Siddaramaiahs name made pratap simha famous: MLA Zameer Ahmed Khan

ಮೀಸಲಾತಿ ಹೆಚ್ಚಳ ಅಥವಾ ರದ್ದು ಮಾಡುವ ಮೊದಲು ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು, ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ, ನಂತರ ಸದನದ ಮುಂದಿಟ್ಟು ಚರ್ಚಿಸಿ ಅನುಮೋದನೆ ಪಡೆಯಬೇಕು. ಆದರೆ ರಾಜ್ಯ ಸರ್ಕಾರ ಈ ಯಾವುದೇ ಸಂವಿಧಾನಾತ್ಮಕ ನಿಯಮಗಳ ಪಾಲನೆ ಮಾಡಿಲ್ಲ. ಯಾವುದೇ ಜಾತಿಗಳಿಗೆ ಮೀಸಲಾತಿ ಹೆಚ್ಚಿಸಲು ನಮ್ಮ ತಕರಾರಿಲ್ಲ. ಆದರೆ ಒಬ್ಬರ ಮೀಸಲಾತಿ ಕಿತ್ತುಕೊಂಡು ಬೇರೊಬ್ಬರಿಗೆ ನೀಡಿರುವುದು ಸರಿಯಲ್ಲ. ಮೀಸಲಾತಿ ಪರಿಷ್ಕರಣೆ ಎಂಬುದು ಬಿಜೆಪಿ ಪಕ್ಷ ಮತದ್ರುವೀಕರಣಕ್ಕಾಗಿ ಮಾಡಿದ ನಾಟಕ ಮಾತ್ರ.

ರಾಜ್ಯ ಸರ್ಕಾರಕ್ಕೆ ನಿಜವಾಗಿ ಒಕ್ಕಲಿಗರು ಮತ್ತು ಲಿಂಗಾಯತರ ಮೀಸಲಾತಿ ಹೆಚ್ಚಿಸುವ ಬದ್ಧತೆಯಿದ್ದರೆ ತಮಿಳುನಾಡಿನಂತೆ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಕೊಂಡು ನಂತರ ಅದನ್ನು ಸಮುದಾಯಗಳಿಗೆ ಹಂಚಿಕೆ ಮಾಡುತ್ತಿದ್ದರು. ಒಕ್ಕಲಿಗರು ಮತ್ತು ಲಿಂಗಾಯತರು ತಲಾ 13% ಮೀಸಲಾತಿ ಕೇಳಿದ್ದಾರೆ. ಒಟ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಿ ಈ ಸಮುದಾಯಗಳಿಗೆ ತಲಾ 15% ಮೀಸಲಾತಿ ಕೊಡಬೇಕಿತ್ತು. ಆಗ ಎಲ್ಲರಿಗೂ ನ್ಯಾಯ ಸಿಕ್ಕಂತಾಗುತ್ತಿತ್ತು ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+