ಮಾಜಿ ಸಿಎಂ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಲೋಕಸಭಾ ಟಿಕೆಟ್ ಬಗ್ಗೆ ಚರ್ಚೆ, ಮಾಲೂರು ಕೇಸ್‌ ಬಗ್ಗೆ ಸಿಎಂ ಪ್ರತಿಕ್ರಿಯೆ

ಹುಬ್ಬಳ್ಳಿ, ಡಿಸೆಂಬರ್ 17: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಹಂಚಿಕೆ ವಿಚಾರಗಳು ಭಾರಿ ಸುದ್ದಿ ಮಾಡುತ್ತವೆ. ಇಂದು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬ ಸಂಬಂಧ ಶೆಟ್ಟರ್‌ಗೆ ಶುಭ ಕೋರಿದರು. ಈ ವೇಳೆ ಒಂದಷ್ಟು ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಮುಖ್ಯಮಂತ್ರಿಗಳ ಜೊತೆಗೆ ಜಗದೀಶ್ ಶೆಟ್ಟರ್ ಜೊತೆಗೆ ಬಿಜೆಪಿ ಎಂಎಲ್‌ಸಿ ಪ್ರದೀಪ್ ಶೆಟ್ಟರ್ ಸಹ ಕೆಲ ಹೊತ್ತು ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರ ಪಕ್ಕವೇ ಕುಳಿತ ಪ್ರದೀಪ್ ಶೆಟ್ಟರ್ ಲೋಕಾಭಿರಾಮರಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

Siddaramaiah Meets Jagadish Shettar in Hubballi, Discuss Lok Sabha Election Tickets, CM Reaction

ಇತ್ತ ಮುಖ್ಯಮಂತ್ರಿಗಳು ಮಾತನಾಡಿ, ಜನ್ಮದಿನ ಪ್ರಯುಕ್ತ ಅವರ ಮನೆಗೆ ಬಂದಿದ್ದು, ಇಲ್ಲಿಯೇ ಉಪಹಾರ ಸೇವಿಸದ್ದೇನೆ. ಧಾರವಾಡ ಲೋಕಸಭೆಯಿಂದ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಅವರು ಸಹ ಲೋಕಸಭಾ ಚುನಾವಣೆ ಆಕಾಂಕ್ಷಿ ಅಂತಲೆ ಪಕ್ಷ ಭಾವಿಸಿದೆ ಎಂದು ಹೇಳಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಜಗದೀಶ್ ಶೆಟ್ಟರ್ ನಾವು ಟಿಕೆಟ್ ಆಕಾಂಕ್ಷಿ ಅಲ್ಲ ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ

ಪ್ರತಿ ಜಿಲ್ಲೆಯಲ್ಲಿ ಪಕ್ಷದಿಂದ ಸಚಿವರು ವೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಅಭಿಪ್ರಾಯ ಸಂಗ್ರಹಿಸಿ. ಸೂಕ್ತ ಆಗುವವರನ್ನು ಆಯ್ಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜಕಾರಣ, ಅಪರಾಧ ಘಟನೆಗಳ ಕುರಿತು ವಾಗ್ದಾಳಿ ನಡೆಸಿದರು.

ಜಗದೀಶ್ ಶೆಟ್ಟರ್ ನಿವಾಸ ಭೇಟಿ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಅವರು ಬಿಜೆಪಿಯಲ್ಲಿದ್ದಾಗಲೂ ನಾನು ಬಂದಿದ್ದೇನೆ. ಭೇಟಿ ಮಾಡಿದ್ದೇವೆ. ಧಾರವಾಡ ಪ್ರವಾಸದಲ್ಲಿದ್ದ ನಾನು ಅವರ ಆಹ್ವಾನದ ಮೇರೆಗೆ ಉಪಹಾರಕ್ಕೆ ಸೇವನೆಗೆ ಬಂದಿದ್ದೇನೆ ಎಂದು ಹೇಳಿದರು.

Siddaramaiah Meets Jagadish Shettar in Hubballi, Discuss Lok Sabha Election Tickets, CM Reaction

ಬಿಜೆಪಿಯಿಂದ ಈ ಪ್ರಕರಣದಲ್ಲಿ ರಾಜಕೀಯ

ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಪ್ರಕರಣ ಗೊತ್ತಾದ ತಕ್ಷಣವೇ ಗೃಹ ಸಚಿವರು ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಲಾಗಿದೆ, ಸರ್ಕಾರ ಎಲ್ಲಿ ಫೇಲ್ ಆಗಿದೆ ಎಂದು ಪ್ರಶ್ನಿಸಿದರು.

ಉತ್ತರ ಪ್ರದೇಶದಲ್ಲಿ ಶಾಸಕ 9 ವರ್ಷದ ಹುಡುಗಿ ಮೇಲೆ ರೇಪ್ ಮಾಡಿ ಜೈಲು ಸೇರಿದ್ದಾನೆ. ಇದಕ್ಕೆ ಜೆಪಿ ನಡ್ಡಾ ಮತ್ತು ಬಿಜೆಪಿ ನಾಯಕರು ಏನು ಹೇಳತ್ತಾರೆ ಎಂದು ಮುಖ್ಯಮಂತ್ರಿಗಳು ಕೇಳಿದರು. ಯಾರ ಮೇಲೆ ದೌರ್ಜನ್ಯ ಆದರೂ ಅವರ ಮೇಲೆ ನಾವು ಕಠಿಣ ಕ್ರಮ ತೆಗೆದುಕೊಳ್ಳತ್ತವೆ. ಬೆಳಗಾವಿಯಲ್ಲಿ ನಡೆದಿದ್ದು ಅನಾಗರಿಕ ಘಟನೆ ಎಂದು ತಿಳಿಸಿದರು.

ಕೋವಿಡ್ ಬಗ್ಗೆ ತಜ್ಞರ ಜತೆ ಸಭೆ: ಗುಂಡಿ ಕ್ಲಿನ್ ಕೇಸ್‌ ವಿರುದ್ಧ ಕ್ರಮ

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ವಿಚಾರಕ್ಕೆ ಪ್ರಸ್ತಾಪಿಸಿದ ಅವರು, ಶನಿವಾರ ಆರೋಗ್ಯ ಇಲಾಖೆ ಸಚಿವರ ಜೊತೆ ನಾನು ಈ ಬಗ್ಗೆ ಚರ್ಚಿಸಿದ್ದೇನೆ. ತಜ್ಞರ ಜೊತೆ ಸಭೆ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಕೋಲಾರದ ಮಾಲೂರಿನಲ್ಲಿ ವಸತಿ ಶಾಲೆಯ ವಿದ್ಯಾರ್ತಿಗಳಿಂದ ಶೌಚಾಲಯದ ಗುಂಡಿ ಕ್ಲೀನ್ ಮಾಡಸಿದ ಪ್ರಕರಣ, ಈ ವಿಚಾರವ ನನ್ನ ಗಮನಕ್ಕ ಬಂದಿದೆ. ಪ್ರರಕಣ ಸಂಬಂಧ ವರದಿ ತರಿಸಿಕೊಳ್ಳುತ್ತೇನೆ. ಯಾರೆ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+