ಕುಮಾರಸ್ವಾಮಿ-ಸಿದ್ದರಾಮಯ್ಯ ಭೇಟಿ: ಮಹತ್ವದ ಮಾತುಕತೆ

ಬೆಂಗಳೂರು, ಮೇ 24: ಲೋಕಸಭೆ ಚುನಾವಣೆಯಲ್ಲಿ ಜೆಡಿಸ್-ಕಾಂಗ್ರೆಸ್‌ ಸೋಲು ಕಂಡ ಬಳಿಕ ಸಿದ್ದರಾಮಯ್ಯ-ಕುಮಾರಸ್ವಾಮಿ ಇಬ್ಬರು ಮೊದಲ ಭಾರಿಗೆ ಭೇಟಿ ಮಾಡಿದರು.

ಇಂದು ಬೆಳಿಗ್ಗೆ ನಡೆದ ಅನೌಪಚಾರಿಕ ಸಂಪುಟ ಸಭೆ ನಡೆಸಿದ್ದ ಕುಮಾರಸ್ವಾಮಿ ಅವರು ಸಂಜೆ ಬಳಿಕ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬೇರೆ ಇತರೆ ನಾಯಕರು ಇರಲಿಲ್ಲ.

ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಈ ಇಬ್ಬರೂ ನಾಯಕರು ಮೊದಲ ಬಾರಿಗೆ ಭೇಟಿ ಆಗಿದ್ದಾರೆ. ರಾಜ್ಯ ರಾಜಕಾರಣದ ಬಗ್ಗೆ ಅತ್ಯಂತ ಮಹತ್ವದ ಚರ್ಚೆ ನಡೆಸಲಿದ್ದಾರೆ.

ನಾಳೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದಾರೆ ಅದಕ್ಕೂ ಮುನ್ನಾ ಕುಮಾರಸ್ವಾಮಿ ಅವರೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದಾರೆ.

ಸಿಎಂ ಬದಲಾವಣೆ, ಅತೃಪ್ತ ಶಾಸಕರ ವಿಷಯ, ರಾಜ್ಯ ಸರ್ಕಾರದ ಮುಂದಿರುವ ಸವಾಲುಗಳು ಇನ್ನೂ ಹಲವು ವಿಷಯಗಳನ್ನು ಕುಮಾರಸ್ವಾಮಿ-ಜೆಡಿಎಸ್ ಚರ್ಚೆ ನಡೆಸಲಿದೆ.

ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸಚಿವರ ಬೆಂಬಲ

ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸಚಿವರ ಬೆಂಬಲ

ಇಂದು ಬೆಳಿಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕುಮಾರಸ್ವಾಮಿ ಅವರೇ ಉಳಿದ ನಾಲ್ಕು ವರ್ಷಕ್ಕೂ ಸಿಎಂ ಎಂಬ ನಿರ್ಣಯ ಕೈಗೊಂಡಿದ್ದಾಗಿ ಹೇಳಲಾಗಿದೆ. ಈಗ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಇದೇ ನಿರ್ಣಯಕ್ಕೆ ಅಂಟಿಕೊಂಡಿರುತ್ತಾರೆಯೇ ಅಥವಾ ಸಿಎಂ ಬದಲಾವಣೆಗೆ ಒತ್ತಾಯಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಜೆಡಿಎಸ್‌ ಸಖ್ಯದಿಂದ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿಗೆ?

ಜೆಡಿಎಸ್‌ ಸಖ್ಯದಿಂದ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿಗೆ?

ಜೆಡಿಎಸ್‌ ಜೊತೆಗಿನ ಮೈತ್ರಿಯಿಂದಲೇ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿದ್ದು ಎಂದು ಎಲ್ಲೆಡೆ ವಿಶ್ಲೇಷಣೆ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರು ಸಹ ಈ ಬಗ್ಗೆ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಉಳಿಯಲು ಜೆಡಿಎಸ್‌ ಸಖ್ಯ ಕಳೆದುಕೊಳ್ಳಬೇಕು ಎನ್ನಲಾಗುತ್ತಿದೆ.

ನಾಳೆ ದೆಹಲಿಯಲ್ಲಿ ರಾಜ್ಯದ ಚರ್ಚೆ

ನಾಳೆ ದೆಹಲಿಯಲ್ಲಿ ರಾಜ್ಯದ ಚರ್ಚೆ

ಸಿದ್ದರಾಮಯ್ಯ ಅವರು ನಾಳೆ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ರಾಜ್ಯದ ಮೈತ್ರಿ ಸರ್ಕಾರದ ಬಗ್ಗೆ ಚರ್ಚೆ ಮಾಡಲಿದ್ದರೆ. ಹಾಗಾಗಿ ಇಂದು ಕುಮಾರಸ್ವಾಮಿ ಅವರು ನಿಲವು ತಿಳಿಯಲು ಸಭೆ ಸೇರಿದ್ದಾರೆ ಎನ್ನಲಾಗಿದೆ.

ಸಿಎಂ ಬದಲಾವಣೆ ಸಾಧ್ಯತೆ

ಸಿಎಂ ಬದಲಾವಣೆ ಸಾಧ್ಯತೆ

ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣೆಯಲ್ಲಿ ಸೋಲಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಬೇಕು ಎಂಬ ಕೂಗು ಸಹ ನಿಧಾನಕ್ಕೆ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆಂಬ ಕೂಗು ಮೊದಲಿನಿಂದಲೂ ಇತ್ತು. ರಾಜ್ಯ ರಾಜಕಾರಣ ಯಾವುದೇ ಹಂತದಲ್ಲಿ ಯಾವ ತಿರುವು ಬೇಕಾದರೂ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+