Karnataka CM: ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್ : ನಿಜವಾದ ಮೈಲಾರ ಕಾರ್ಣಿಕ!
ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ನಾಲ್ಕು ದಿನಗಳ ರಾಜಕೀಯ ಮೇಲಾಟದ ನಂತರ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಸಿಎಂ ಆಗಿ ಘೋಷಣೆ ಮಾಡಿದೆ. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಮೇ 20ರಂದು ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇನ್ನು ರಾಜ್ಯ ರಾಜಕೀಯದ ಬಗ್ಗೆ ಹಲವರು ಚುನಾವಣೆಗೂ ಮುನ್ನವೇ ಭವಿಷ್ಯ ನುಡಿದಿದ್ದರು. ಕೋಡಿಮಠ ಶ್ರೀಗಳು ಕೂಡ ರಾಜ್ಯ ರಾಜಕೀಯಕ್ಕೆ ಸಂಬಂಧಪಟ್ಟಂತೆ, ಹಲವು ದೊಡ್ಡ ತಲೆಗಳು ಉರುಳಲಿವೆ, ಪಕ್ಷಾಂತರ ನಡೆಯಲಿದೆ, ಆದರೆ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಅವರ ಭವಿಷ್ಯ ಬಹುತೇಕ ನಿಜವಾಗಿದೆ. ಹಲವು ಘಟಾನುಘಟಿಗಳು ಈ ಬಾರಿ ಸೋಲನುಭವಿಸಿದ್ದಾರೆ, ಕಾಂಗ್ರೆಸ್ ಭರ್ಜರು ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಇನ್ನು ಕರ್ನಾಟಕದಲ್ಲಿ ಸಾಕಷ್ಟು ಜನ ಮೈಲಾರಲಿಂಗೇಶ್ವರ ಕಾರ್ಣಿಕವನ್ನು ಬಹಳ ನಂಬುತ್ತಾರೆ, ಲಕ್ಷಾಂತರ ಜನರ ಆರಾಧ್ಯ ದೈವ ಮೈಲಾರ ಲಿಂಗೇಶ್ವರ ಹೇಳುವುದು ನಿಜವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು, ಒಂದೇ ಸಾಲಿನ ಕಾರ್ಣಿಕವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದರೂ, ಹಲವು ಹಿರಿಯರು ಅದನ್ನು ವಿವರಿಸಿ ಹೇಳುತ್ತಾರೆ.
ನಿಜವಾದ ಮೈಲಾರಲಿಂಗೇಶ್ವರ ಕಾರ್ಣಿಕ
ವಿಜಯನಗರ ಜಿಲ್ಲೆಯ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವದಲ್ಲಿ ಈ ಬಾರಿ ಗೊರವಯ್ಯ ರಾಮಪ್ಪಜ್ಜ 'ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್' ಎಂದು ಭವಿಷ್ಯ ನುಡಿದಿದ್ದರು. ಗೊರವಯ್ಯ ರಾಮಪ್ಪಜ್ಜ 11 ದಿನಗಳ ಕಾಲ ಉಪವಾಸವಿದ್ದು 14 ಅಡಿ ಎತ್ತರದ ಮೈಲಾರದ ಡಂಕಣಮರಡಿಯಲ್ಲಿ ಬಿಲ್ಲನ್ನೇರಿ ಕಾರ್ಣಿಕ ನುಡಿಯುತ್ತಾರೆ.
"ಒಂದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ, ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯವನ್ನಾಳುತ್ತಾನೆ." ಎಂದು ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗಿತ್ತು. ಅಂದಿನಿಂದಲೂ ಇದು ಸಾಕಷ್ಟು ಚರ್ಚೆಯ ವಿಚಾರವಾಗಿತ್ತು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಅನೇಕರು ಆಗಲೆ ನಿರ್ಧರಿಸಿದ್ದರು, ಕಾರ್ಣಿಕ ನುಡಿದಂತೆಯೇ ಇಂದು ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆ?
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ಕಾರ್ಣಿಕವನ್ನು ವಿಶ್ಲೇಷಣೆ ಮಾಡಿದವರು ಹೇಳಿದ್ದಾರೆ. ರೈತರಿಗೆ ಬೆಳೆದ ಬೆಳೆ ಕೈಗೆ ಸಿಗುತ್ತದೆ, ಆದರೆ ಕೆಲವು ಕಡೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎನ್ನುವುದು ಮೈಲಾರಲಿಂಗೇಶ್ವರ ಕಾರ್ಣಿಕದ ಸೂಚನೆ ಎಂದು ರೈತಾಪಿ ವರ್ಗ ವಿವರಣೆ ನೀಡಿತ್ತು.












Click it and Unblock the Notifications