ಸಿಎಂ ಕುರ್ಚಿ ಹೋಗುತ್ತೆ ಅಂತ ಸಿದ್ದರಾಮಯ್ಯಗೆ ಆತಂಕ: ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಗದಗ, ಮೇ 03: ಲೋಕಸಭೆಯಲ್ಲಿ ಚುನಾವಣೆಯಲ್ಲಿ ಹೆಚ್ಚಿನ ಮತ ಬಾರದಿದ್ದರೆ ತಮ್ಮ ಕುರ್ಚಿ ಹೋಗುತ್ತದೆ ಎಂಬ ಆತಂಕದಿಂದ ಸಿಎಂ ಸಿದ್ದರಾಮಯ್ಯ ಬುಡ ಅಲ್ಲಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗ್ಯಾರಂಟಿಯಿಂದ ಬಿಜೆಪಿ ಬುಡ ಅಲ್ಲಾಡುತ್ತಿದೆ ಎಂಬ ಸಿಎಂ ಹೇಳಿಕೆಗೆ, ಗದಗನಲ್ಲಿ ಮಾತಿನ ತಿರುಗೇಟು ನೀಡಿದ್ದಾರೆ. ಈಗ ಸಿದ್ದರಾಮಯ್ಯ ಅವರ ಬುಡವೇ ಅಲ್ಲಾಡುತ್ತಿದೆ. ಚುನಾವಣೆಯಲ್ಲಿ ಮತ ಹೆಚ್ಚಿಗೆ ಸಿಗದಿದ್ದರೆ ಮುಂದುವರಿಕೆ ಕಷ್ಟ ಅಂತಾ ಅವರೇ ಹೇಳಿದ್ದಾರೆ. ಮತ್ತೊಂದೆಡೆ ಡಿಕೆಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತೇನೆ ಎಂದು ಹೇಳಿದ್ದಾರೆ. ನಾನು ಸಿಎಂ ಆಗದಿದ್ರೆ ಒಕ್ಕಲಿಗರು ನಿರಾಸೆ ಆಗದ್ದಿರಿ ಅಂದಿದ್ದಾರೆ. ಅವರಿಗೆ ಅವರೇ ಉತ್ತರ ಕೊಟ್ಟುಕೊಳ್ಳುತ್ತಿದ್ದಾರೆ. ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಪ್ರಕೋಷ್ಠಗಳ ಸಭೆ ನಡೆದಿದೆ. ಎಲ್ಲ ವೃತ್ತಿ ಬಾಂಧವರ ವಿಶ್ವಾಸ ಗಳಿಸಬೇಕಿದೆ. ಚುನಾವಣೆಯಲ್ಲಿ ಗೆಲವು ಎಷ್ಟು ಮುಖ್ಯವೋ, ಎಲ್ಲ ಸಮುದಾಯ, ವೃತ್ತಿ ಬಾಂಧವರ ಮತಗಳು ಅಷ್ಟೇ ಮುಖ್ಯ. ಆ ಹಿನ್ನೆಲೆಯಲ್ಲಿ ಸಭೆ ಕರೆದಿದ್ದೆವು. ಈಗಾಗ್ಲೆ ಪ್ರಕೋಷ್ಠಗಳು ಕೆಲಸ ಮಾಡುತ್ತಿವೆ. ಇನ್ನೂ ಹೆಚ್ಚಿನ ವೃತ್ತಿ ಬಾಂಧವರನ್ನು ಸಂಪರ್ಕ ಮಾಡಿ ಕೆಲಸ ಮಾಡಲು ತೀರ್ಮಾನಿಸಲಾಗಿದೆ. ಎಲ್ಲ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಕ್ರಿಯೆ ಇದಾಗಿದೆ ಎಂದರು.
ಪ್ರಜ್ವಲ್ ಪ್ರಕರಣ ಮುಜುಗರ ತಪ್ಪಿಸಲು ಮೋದಿ ಅವರು ರಾಜ್ಯ ಪ್ರವಾಸ್ ರದ್ದು ಮಾಡಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಸವರಾಜ ಬೊಮ್ಮಾಯಿ ಗರಂ ಆದರು. ಮೋದಿ ಅವರು ರಾಜ್ಯದಲ್ಲಿ ಎರಡು ದಿನ ಪ್ರವಾಸ ಮಾಡಿದ್ದಾರೆ. ಪ್ರಜ್ವಲ್ ಪ್ರಕರಣ ಆದ ಮೇಲೆಯೆ ಎರಡು ದಿನ ಬಂದು ಹೋಗಿದ್ದಾರೆ. ರಾಹುಲ್ ಗಾಂಧಿಯವರ ಯೋಚನಾ ಶಕ್ತಿಯೇ ಅಷ್ಟಿದೆ, ನಾವೇನು ಮಾಡೋಕಾಗಲ್ಲ ಎಂದರು. ಇನ್ನು ಗ್ಯಾರಂಟಿ ರದ್ದು ಬಗ್ಗೆ, ಮತ ಹಾಕದಿದ್ದರೆ ಕರೆಂಟ್ ಕಟ್ ಮಾಡ್ತೀವಿ ಅಂತಾ ಅವರ ಶಾಸಕರು ಹೇಳುತ್ತಿದ್ದಾರೆ. ಕಾಂಗ್ರೆಸ್ ನವರ ಬಣ್ಣ ಈಗ ಹೊರಬಿಳ್ಳುತ್ತಿದೆ ಎಂದರು.












Click it and Unblock the Notifications