ಕುಮಾರಸ್ವಾಮಿ ಪ್ರಮಾಣ ವಚನ: ಸಿದ್ದರಾಮಯ್ಯ ಔಟ್ ಆಫ್ ಫೋಕಸ್
Recommended Video

ಬೆಂಗಳೂರು, ಮೇ 23: ಕುಮಾರಸ್ವಾಮಿ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸೌಧದ ಮುಂಭಾಗ ನಡೆದ ನಡೆದ ಸಮಾರಂಭದಲ್ಲಿ ತೃತೀಯ ರಂಗದ ನಾಯಕರು ವೇದಿಕೆಗೆ ಕಳೆ ತುಂಬಿದರು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ 'ಔಟ್ ಆಫ್ ಫೋಕಸ್' ಆಗಿದ್ದರು.
ಕುಮಾರಸ್ವಾಮಿ ಪ್ರಮಾಣ ವಚನದಲ್ಲಿ ರಾಹುಲ್ ಗಾಂಧಿ, ಸೋನಿಯಾ ಸೇರಿದಂತೆ ತೃತೀಯ ರಂಗದ ನಾಯಕರೆಲ್ಲರೂ ವೇದಿಕೆ ಮೇಲೆ ಮಿಂಚಿದ್ದೇ ಮಿಂಚಿದ್ದು ಆದರೆ ಅಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಹಿನ್ನೆಲೆಗೆ ಸರಿದಿದ್ದರು.
ರಾಹುಲ್ ಗಾಂಧಿ ಆಗಮಿಸುವ ಮುಂಚೆ ಬಂದಿದ್ದ ಸಿದ್ದರಾಮಯ್ಯ ಅವರು ಯಾರ ಜೊತೆಯೂ ಹೆಚ್ಚು ಬೆರೆಯದೇ ತಮ್ಮ ಆಸನದ ಮೇಲೆ ಕೂತಿದ್ದರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿಕೆ ಶಿವಕುಮಾರ್ ಅವರುಗಳು ವಿವಿಧ ರಾಜ್ಯಗಳ ರಾಜಕೀಯ ಮುಖಂಡರೊಡನೆ ಕುಶಲೋಪರಿ ನಡೆಸಿದರು ಆದರೆ ಸಿದ್ದರಾಮಯ್ಯ ಮಾತ್ರ ತಮ್ಮ ಆಸನದಲ್ಲೇ ಕೂತಿದ್ದರು.

ಪ್ರಮಾಣ ವಚನ ಮುಗಿದ ಮೇಲೆ ಕೂಡ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಮುಂದಕ್ಕೆ ಬರಲೇ ಇಲ್ಲ, ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಕೈ ಹಿಡಿದು ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದರು ಆದರೆ ಸಿದ್ದರಾಮಯ್ಯ ಬರಲಿಲ್ಲ.
ವೇದಿಕೆ ಮೇಲೆ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗಾಗಲಿ ಪರಮೇಶ್ವರ್ ಅವರಿಗಾಗಲಿ ಅಭಿನಂದನೆ ಸಲ್ಲಿಸಿದ್ದು ಸಹ ಕಾಣಲಿಲ್ಲ. ಒಟ್ಟಾರೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಇದ್ದರೂ ಇರದಂತಾದರು. ಕೆಲವು ದಿನಗಳ ಹಿಂದೆ ಸಿಎಂ ಆಗಿ ಅಬ್ಬರಿಸಿದ್ದ ಸಿದ್ದರಾಮಯ್ಯ ಅವರ ಇಂದಿನ ಸ್ಥಿತಿ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸದೆ ಇರದು.
ಕುಮಾರ ಪಟ್ಟಾಭಿಷೇಕ in Pics : ಮಳೆ ಸುರಿಯುತ್ತಿದ್ದರೂ ಬತ್ತದ ಉತ್ಸಾಹ
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದಾಗ ಸಿದ್ದರಾಮಯ್ಯ ಅವರನ್ನು ಬಾಚಿ ಬಿಗಿದಪ್ಪಿದ್ದರು ಆದರೆ ಇಂದು ಔಪಚಾರಕ್ಕಾದರೂ ವೇದಿಕೆ ಮೇಲೆ ಮಾತನಾಡಿಸಿದಂತೆ ಕಾಣಲಿಲ್ಲ. ರಾಜಕಾರಣದಲ್ಲಿ ಎಷ್ಟು ಬೇಗ ಚಿತ್ರಣಗಳು ಬದಲಾಗುತ್ತವೆ ಎಂಬುದಕ್ಕೆ ಇದೇ ಉದಾಹರಣೆ.












Click it and Unblock the Notifications