ಮಲೇಷ್ಯಾದಿಂದ ಮೂರೇ ದಿನಕ್ಕೆ ಸಿದ್ದರಾಮಯ್ಯ ದಿಢೀರ್ ವಾಪಸ್

Recommended Video

      ಹಠಾತ್ತಾಗಿ ಮಲೇಷ್ಯಾದಿಂದ ಸಿದ್ದರಾಮಯ್ಯ ವಾಪಾಸ್ ಬಂದಿದ್ಯಾಕೆ? | Oneindia Kannada

      ಬೆಂಗಳೂರು, ಡಿಸೆಂಬರ್ 12: ಸ್ನೇಹಿತರ ಮಗನ ಮದುವೆಗೆಂದು ಮಲೇಷ್ಯಾಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರನೆ ವಾಪಸಾಗುತ್ತಿದ್ದಾರೆ.

      ಬೆಳಗಾವಿಯಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭವಾದ ಸೋಮವಾರವೇ ಮಲೇಷ್ಯಾಕ್ಕೆ ಹೋಗಿದ್ದ ಸಿದ್ದರಾಮಯ್ಯ, ಶುಕ್ರವಾರದ ಬಳಿಕ ಹಿಂದಿರುಗಲಿದ್ದಾರೆ ಎನ್ನಲಾಗಿತ್ತು. ಆದರೆ, ಬುಧವಾರ ರಾತ್ರಿಯೇ ಮರಳುತ್ತಿದ್ದಾರೆ.

      ಅಧಿವೇಶನ ಆರಂಭವಾಗುವ ದಿನವೇ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ತೆರಳಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

      siddaramaiah is coming back to bengaluru from malaysia trip

      ಬುಧವಾರ ಪರಿಷತ್ ಸಭಾಪತಿ ಸ್ಥಾನದ ಆಯ್ಕೆಯು ಅವಿರೋಧವಾಗಿ ನಡೆದರೂ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಆದರೆ ಸಿದ್ದರಾಮಯ್ಯ ಅವರ ಹಠಾತ್ ಆಗಮನಕ್ಕೆ ಇದೇ ಕಾರಣವಿರಬಹುದೇ ಎನ್ನುವುದು ಖಚಿತವಾಗಿಲ್ಲ.

      ಬೆಂಗಳೂರಿಗೆ ಮರಳಿದರೂ ಡಿ. 17ರಿಂದಲೇ ಅವರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+