Get Updates
Get notified of breaking news, exclusive insights, and must-see stories!

Siddaramaiah: ಮೊಮ್ಮಗನಿಗೆ ಮಣೆ- ವರುಣಾ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ನಿಷ್ಠರ ರಾಜಕೀಯ ಆಕಾಂಕ್ಷೆಗೆ ಕೊನೆ?

ಮೈಸೂರು, ಏಪ್ರಿಲ್‌ 21: ಮೈಸೂರು ಜಿಲ್ಲೆಯ ವರುಣಾ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಷ್ಠಾವಂತರ ನಿರೀಕ್ಷೆ ಅಂತ್ಯ ಕಾಣುತ್ತಿದೆ. ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಈಗಾಗಲೇ ವರುಣಾ ಶಾಸಕರಾಗಿದ್ದರು. ಏಪ್ರಿಲ್ 18ರಂದು ಮೊಮ್ಮಗ ಧವನ್ ರಾಕೇಶ್ ಅವರನ್ನು ರಾಜಕೀಯಕ್ಕೆ ಸಿದ್ದರಾಮಯ್ಯ ಪರಿಚಯಿಸಿದ್ದಾರೆ. ಆ ಮೂಲಕ ವಂಶಪಾರಂಪರ್ಯ ರಾಜಕಾರಣದ ವಿಸ್ತರಣೆ ಸಮಾಜವಾದಿ ನಾಯಕ ಮುಂದಾಗಿದ್ದಾರೆ.

ಮುಂದಿನ ವಿಧಾನಸಭೆ ವೇಳೆಗೆ ಸಿದ್ದರಾಮಯ್ಯ ನಿವೃತ್ತಿಯಾದರೂ ಎರಡೂ ಕ್ಷೇತ್ರಗಳು ಕುಟುಂಬಕ್ಕೆ ಮೀಸಲಾಗಲಿವೆ ಎಂಬುದರ ಸುಳಿವನ್ನು ಮಾಜಿ ಸಿಎಂ ನೀಡಿದ್ದಾರೆ.

Siddaramaiah Grands Son To Enter Politics: No Hope for Loyal Congress Workers in Varuna

ಸಿದ್ದರಾಮಯ್ಯ ಘೋಷಣೆ ಏನು?

'ಇದು ನನ್ನ ಕೊನೆಯ ಚುನಾವಣೆ. ಆ ನಂತರ ಯತೀಂದ್ರ ಮತ್ತು ಧವನ್ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಲಿದ್ದಾರೆ. ಧವನ್‌ಗೆ ಇನ್ನೂ 17 ವರ್ಷ. ಚುನಾವಣೆಗೆ ಸ್ಪರ್ಧಿಸಲು ಅವರಿಗೆ 25 ವರ್ಷ ವಯಸ್ಸಾಗಿರಬೇಕು. ಶಿಕ್ಷಣ ಮುಗಿದ ನಂತರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಧವನ್ ಅವರ ಮೇಲಿನ ನಿಮ್ಮ ವಾತ್ಸಲ್ಯವು ಅವರ ತಂದೆ ದಿವಂಗತ ರಾಕೇಶ್ ಅವರ ಮೇಲಿನ ಪ್ರೀತಿ ಮತ್ತು ವಾತ್ಸಲ್ಯವನ್ನು ನನಗೆ ನೆನಪಿಸುತ್ತದೆ' ಎಂದು ವರುಣಾದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಎಂಟು ಚುನಾವಣೆಗಳನ್ನು ಎದುರಿಸಿದ್ದಾರೆ. 1983, 1985, 1994, 2004 ಮತ್ತು 2006 ರಲ್ಲಿ ಗೆಲುವು ಸಾಧಿಸಿದ್ದಾರೆ. ಅವರು 1989, 1999 ಮತ್ತು 2018 ರಲ್ಲಿ ಸೋಲು ಅನುಭವಿಸಿದ್ದಾರೆ.

2008 ಮತ್ತು 2013 ರ ಚುನಾವಣೆಗಳಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2018 ರಲ್ಲಿ ಬಾದಾಮಿಯಲ್ಲಿ ಜಯಗಳಿಸಿದ್ದರು. 2006 ರ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್‌ನ ಶಿವಬಸಪ್ಪ ವಿರುದ್ಧ ಸ್ಪರ್ಧಿಸಿದ್ದರು. ಅವರು 257 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಿದ್ದರಾಮಯ್ಯನವರು 2018 ರಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿದರು. ಅವರ ಮಗ ಡಾ ಯತೀಂದ್ರ ಅವರಿಗೆ ವರುಣಾ ಸ್ಪರ್ಧಿಸಲು ಅವಕಾಶ ನೀಡಿದರು.

Siddaramaiah Grands Son To Enter Politics: No Hope for Loyal Congress Workers in Varuna

ಸಿದ್ದರಾಮಯ್ಯನವರ ಆಪ್ತ ಮೂಲಗಳ ಪ್ರಕಾರ, ವರುಣಾ ಮತ್ತು ಕೋಲಾರ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಮೂಲಕ ಡಾ.ಯತೀಂದ್ರ ಅವರಿಗೆ ವರುಣಾವನ್ನು ಮರಳಿ ನೀಡಲು ಅವರು ಬಯಸಿದ್ದರು.

'ಎರಡೂ ಕ್ಷೇತ್ರಗಳನ್ನು ಗೆಲ್ಲುವುದು ಅವರ ಯೋಜನೆಯಾಗಿತ್ತು. ಇದರಿಂದಾಗಿ ಅವರು ಕೋಲಾರವನ್ನು ಉಳಿಸಿಕೊಳ್ಳಬಹುದಾಗಿತ್ತು. ವರುಣಾದಲ್ಲಿ ಉಪಚುನಾವಣೆ ನಡೆದು, ಡಾ.ಯತೀಂದ್ರ ಅವರನ್ನು ಗೆಲ್ಲಿಸುವ ಆಕಾಂಕ್ಷೆಯನ್ನು ಸಿದ್ದರಾಮಯ್ಯ ಹೊಂದಿದ್ದರು' ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರು ಡಾ ಯತೀಂದ್ರರ ರಾಜಕೀಯ ಭವಿಷ್ಯವನ್ನು ಭದ್ರಪಡಿಸಲು ಬಯಸಿದ್ದರು. ಕಾಂಗ್ರೆಸ್ ತಮ್ಮ ಸ್ಪರ್ಧೆಯನ್ನು ವರುಣಾಕ್ಕೆ ಸೀಮಿತಗೊಳಿಸಿದೆ. ಈಗ ಧವನ್ ಎಂಟ್ರಿ ಕೊಟ್ಟಿರುವುದರಿಂದ ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರಗಳನ್ನು ಮೀಸಲಿಡುವ ಅನಿವಾರ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Siddaramaiah Grands Son To Enter Politics: No Hope for Loyal Congress Workers in Varuna

ಚಾಮುಂಡೇಶ್ವರಿಯಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ ಅವರು 36,042 ಮತಗಳ ಅಂತರದಿಂದ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದಾರೆ. ದೇವೇಗೌಡರನ್ನು ಕಾಂಗ್ರೆಸ್ ತೆಕ್ಕೆಗೆ ಕರೆತರಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು.

ಆದರೆ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರು ಜೆಡಿಎಸ್‌ನಲ್ಲಿಯೇ ಉಳಿಯುವಂತೆ ದೇವೇಗೌಡರನ್ನು ಒಪ್ಪಿಸಿದ್ದಾರೆ. ಈಗ ಚಾಮುಂಡೇಶ್ವರಿಯಲ್ಲಿ ದೇವೇಗೌಡರು ಜೆಡಿಎಸ್ ಅಭ್ಯರ್ಥಿ. ಜೆಡಿಎಸ್‌ನಲ್ಲಿಯೇ ಉಳಿದುಕೊಂಡಿರುವ ದೇವೇಗೌಡರ ವಿರುದ್ಧ ಬಂಡಾಯವೆದ್ದಿದ್ದ ಮಾವಿನಹಳ್ಳಿ ಸಿದ್ದೇಗೌಡ ಕಾಂಗ್ರೆಸ್‌ ಅಭ್ಯರ್ಥಿ.

ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಅವರು ಜುಲೈ 30, 2016 ರಂದು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದ ನಂತರ ರಾಕೇಶ್‌ ಅವರು ತಮ್ಮ ತಂದೆಯ ವರುಣಾ ಕ್ಷೇತ್ರದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು.

ರಾಕೇಶ್ ನಿಧನರಾದಾಗ ಚಾಮುಂಡೇಶ್ವರಿಯ ಎರಡನೇ ಸಾಲಿನ ನಾಯಕರಿಗೆ ಅವಕಾಶ ಸಿಕ್ಕಿತು. ಆದರೆ, ಸಿದ್ದರಾಮಯ್ಯನವರು ಡಾ. ಯತೀಂದ್ರರನ್ನು ಕರೆತಂದರು. 2018ರಲ್ಲಿ ಎರಡೂ ಕ್ಷೇತ್ರಗಳಲ್ಲಿ ತಂದೆ ಮಗ ಸ್ಪರ್ಧಿಸಿದರು. ಇದೇ ತಮ್ಮ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದಾಗ ಎರಡನೇ ಸಾಲಿನ ನಾಯಕರಿಗೆ ಚಾಮುಂಡೇಶ್ವರಿಯಲ್ಲಿ ಮತ್ತೆ ಅವಕಾಶ ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈಗ ಧವನ್ ಬಂದಿರುವುದು ರಾಜಕೀಯ ಆಕಾಂಕ್ಷೆ ಹೊಂದಿದ್ದ ಸಿದ್ದರಾಮಯ್ಯ ನಿಷ್ಠರಿಗೆ ಭಾರೀ ಆಘಾತವಾಗಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+